ಸಾಧನೆ ಎನ್ನುವ ಶಿಖರವನ್ನ ಏರಲು ನಿಂತರೆ ಯಾವುದೇ ಜಾತಿ-ಧರ್ಮಗಳು ಅಡ್ಡಿಯಾಗಲ್ಲ ಅನ್ನೋದಕ್ಕೆ ಈ ಮುಸ್ಲಿಂ ಯುವಕ ಬೆಸ್ಟ್ ಎಕ್ಸಾಂಪಲ್. ಯೋಗದಲ್ಲಿ ಸಾಧನೆ ಮಾಡಬೇಕು ಎಂದ ಮುಸ್ಲಿಂ ಯುವಕನೊಬ್ಬ ಆನ್ ಲೈನ್ ಮೂಲಕ ಯೋಗ ಕಲಿತು ಅಭ್ಯಾಸ ಮಾಡಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜೂ.23): ಸಾಧನೆ ಎನ್ನುವ ಶಿಖರವನ್ನ ಏರಲು ನಿಂತರೆ ಯಾವುದೇ ಜಾತಿ-ಧರ್ಮಗಳು ಅಡ್ಡಿಯಾಗಲ್ಲ ಅನ್ನೋದಕ್ಕೆ ಈ ಮುಸ್ಲಿಂ ಯುವಕ ಬೆಸ್ಟ್ ಎಕ್ಸಾಂಪಲ್. ಯೋಗದಲ್ಲಿ ಸಾಧನೆ ಮಾಡಬೇಕು ಎಂದ ಮುಸ್ಲಿಂ ಯುವಕನೊಬ್ಬ ಆನ್ ಲೈನ್ ಮೂಲಕ ಯೋಗ ಕಲಿತು ಅಭ್ಯಾಸ ಮಾಡಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ. ಈಗ ನಾಡಿನಲ್ಲು ಯೋಗವನ್ನ ಪಸರಿಸುವ ಕೆಲಸವನ್ನ ಮಾಡ್ತಿದ್ದಾನೆ.
undefined
ಮುಸ್ಲಿಂ ಯುವಕನಿಂದ ಯೋಗ ಪ್ರಯೋಗ: ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಮುಸ್ಲಿಂ ಯುವಕನೊರ್ವ ಯೋಗವನ್ನು ಆನ್ಲೈನ್ ಮೂಲಕ ಕಲಿತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ಸಾಮಾಜಿಕ ಜಾಲತಾಣದ ಮೂಲಕ ಯೋಗವನ್ನ ಕಲಿತು ತಾನು ಕಲಿತ ಯೋಗವನ್ನು ಇಡೀ ನಾಡಿನಾದ್ಯಂತ ಪಸರಿಸುವ ಕಾಯಕದಲ್ಲಿ ತೊಡಗಿದ್ದಾನೆ. ನಗರದ ಅಜರುದ್ದಿನ ಬೊಮ್ಮನಹಳ್ಳಿ ಎಂಬ ಯುವಕ ಯೋಗದಲ್ಲಿ ಸಾಧನೆ ಮಾಡ್ತಿದ್ದಾನೆ. ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿರುವ ಯುವಕ ಹೈಸ್ಕೂಲ್ ಮಟ್ಟದಲ್ಲಿ ಯೋಗ ಕಲಿಯುವ ಆಸಕ್ತಿ ಬೆಳೆಸಿಕೊಂಡಿದ್ದ. ಈಗ ಆನ್ ಲೈನ್ ನಲ್ಲೆ ಯೋಗ ಕಲಿತು ರಾಷ್ಟ್ರ ಮಟ್ಟದಲ್ಲಿ ಹೆಸ್ರು ಮಾಡಿದ್ದಾನೆ.
ಅಗ್ನಿಪಥ್ ಹಿಂಸಾಚಾರ: ವಿಜಯಪುರದಲ್ಲಿ ಖಾಕಿ ಕಟ್ಟೆಚ್ಚರ..!
ಯೂಟ್ಯೂಬ್ ನೋಡಿ ಯೋಗ ಕಲಿತ ಯುವಕ: ಯೋಗ ಬಗ್ಗೆ ತೀರಾ ಆಸಕ್ತಿ ಹೊಂದಿದ್ದ ಅಜರುದ್ದೀನ ಯೋಗ ಕಲಿಯಲೇ ಬೇಕು ಎಂದು ಹಠ ಹಿಡಿದಿದ್ದ. ಆದ್ರೆ ಕಲಿಕೆ ಹೇಗೆ ಏನು ಅಂತಾ ಗೊತ್ತಾಗದೆ ಆನ್ ಲೈನ್ ಅಂದ್ರೆ ಯೂಟ್ಯೂಬ್ ಮೂಲಕ ಯೋಗ ಕಲಿಯಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾನೆ. ಯೂಟ್ಯೂಬ್ನಲ್ಲಿ ಬರುವ ಯೋಗ ತರಬೇತಿಯನ್ನ ನೋಡಿ ಕರಗತ ಮಾಡಿಕೊಂಡಿದ್ದಾನೆ. ಯೂಟ್ಯೂಬ್ನಲ್ಲಿ ಯೋಗ ತರಬೇತಿದಾರರು ಹೇಳುವ ರೀತಿಯಲ್ಲಿ ತಾನು ಸಹ ಮನೆಯಲ್ಲೆ ಆಸನಗಳನ್ನ ಮಾಡುತ್ತ ಪ್ರಾಕ್ಟಿಸ್ ಮಾಡಿ ಈಗ ಯಶಸ್ವಿಯಾಗಿದ್ದಾನೆ.
ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಯುವಕನ ಯೋಗ ಸಾಧನೆ: 2016 ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದಿದ್ದಾನೆ. ಮೂರನೇ ಸ್ಥಾನದಲ್ಲಿ ಒಂದು ಸ್ಥಾನ ಪಡೆದಿದ್ದರು ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು. ಆದ್ರೆ ದುರಾದೃಷ್ಟವಶಾತ್ ಅವಕಾಶ ವಂಚಿತನಾಗಿದ್ದಾನೆ. ಸದ್ಯ ವಿಜಯಲಕ್ಷ್ಮಿ ಸರ್ವೊತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯಲ್ಲಿ ವಿಕಲಚೇತನ ಹಾಗೂ ಬುದ್ದಿ ಮಾಂದ್ಯ ಮಕ್ಕಳಿಗೆ ಯೋಗ ಹೇಳಿಕೊಟ್ಟು ಅವರ ಸೇವೆಯಲ್ಲಿ ತೊಡಗಿಕೊಂಡಿದ್ದಾನೆ. ಅಲ್ಲದೇ ಶಾಲೆ ಶಾಲೆಗೆ ಹೋಗಿ ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡುತ್ತಿದ್ದಾನೆ.
ಶಿವಾಜಿ ಗಾಯಕವಾಡ್ ರಿಂದ ಶ್ಲಾಘನೆ: ಈತನ ಸಾಧನೆ ಹಾಗೂ ಸಮಾಜ ಸೇವೆ ಕುರಿತು ಬಸವನಾಡು ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಶಿವಾಜಿ ಗಾಯಕವಾಡರು ಕೂಡಾ ಈತನ ಸಾಮಾಜಿಕ ಸೇವೆ ಮೆಚ್ಚಿ ತಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಆತನಿಗೆ ತಮ್ಮ ಶಾಲೆಯಲ್ಲೆ ಯೋಗ ಕಲಿಕೆಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.
ಯೋಗ ದಿನದಂದು ಸಾವಿರ ಮಕ್ಕಳಿಗೆ ಯೋಗ ಪಾಠ: ಯೋಗದಿನದಂದು ರವೀಂದ್ರನಾಥ ಟಾಗೋರ್ ಶಾಲೆಯಲ್ಲಿನ ಒಂದು ಸಾವಿರ ವಿದ್ಯಾರ್ಥಿಗಳಿಗೆ ಯೋಗ ಪ್ರಾಕ್ಟಿಸ್ ಮಾಡಿದ್ದಾನೆ. ಸಂಸ್ಥೆಯ ಅಧ್ಯಕ್ಷರಾದ ಶಿವಾಜಿ ಗಾಯಕವಾಡ್ ಈ ಅವಕಾಶ ಒದಗಿಸಿದ್ದಲ್ಲದೇ ಆತನನ್ನು ಸನ್ಮಾನಿಸಿದ್ದಾರೆ. ಅಜರುದ್ದಿನ ಬೊಮ್ಮನಹಳ್ಳಿ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ..
ಮೋದಿ ಕಾರ್ಯಕ್ರಮದಲ್ಲಿ ಕೊರೋನಾ ಹಬ್ಬಲ್ವಾ?, ಪ್ರಧಾನಿ ಕಂಡು ವೈರಸ್ ಓಡಿ ಹೋಗುತ್ತಾ?: ಸಿದ್ದು
ಯೋಗ ಕಲಿಕೆಗೆ ಅಡ್ಡಿಯಾಗಲೇ ಇಲ್ಲ ಧರ್ಮ: ಯೋಗದ ಬಗ್ಗೆ ಹಲವು ಮುಸ್ಲಿಂ ಧರ್ಮದಲ್ಲಿ ಬೇಕು-ಬೇಡ ಎನ್ನುವ ವಿವಾದಗಳು ಇದ್ದೆ ಇವೆ. ಕಲಿಯುವ ಗುರಿ, ತಪಸ್ಸೊಂದು ಇದ್ದರೆ ಏನೆಲ್ಲಾ ಸಾಧಿಸಬಹುದು ಅನ್ನೋದಕ್ಕೆ ಅದೇ ಮುಸ್ಲಿಂ ಸಮುದಾಯದ ಅಜರುದ್ದೀನ ಸಾಕ್ಷಿಯಾಗಿ ನಿಂತಿದ್ದಾನೆ. ಸಾಧನೆಗೆ ಧರ್ಮ ಜಾತಿ ಯಾವದು ಅಡ್ಡಿಯಾಗುವದಿಲ್ಲ ಎನ್ನೊದಕ್ಕೆ ಅಜರುದ್ದಿನ ಮಾದರಿಯಾಗಿದ್ದಾನೆ. ಅಲ್ಲದೇ ಸದೃಢ ವಿದ್ಯಾರ್ಥಿಗಳನ್ನು ತಯಾರಿ ಮಾಡುತ್ತಿರುವದು ಶ್ಲಾಘನೀಯವಾಗಿದೆ.