ಮಹದಾಯಿ ನೀರಿಗಾಗಿ ಹೋರಾಟ, 2ನೇ ದಿನಕ್ಕೆ ಕಾಲಿಟ್ಟ ಅನ್ನದಾತರ ಪ್ರತಿಭಟನೆ, ಸರ್ಕಾರಕ್ಕೆ ಎಚ್ಚರಿಕೆ

By Suvarna News  |  First Published Jun 22, 2022, 6:36 PM IST

* ಮಹದಾಯಿ ನೀರಿಗಾಗಿ ಹೋರಾಟ
* ನೀರಾವರಿ ಇಲಾಖೆಯ ಮುಂದೆ ಶಾಂತಿಯುತ ಪ್ರತಿಬಟನೆ,
* ವಿರೇಶ ಸೊಬರದಮಠ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ


ಧಾರವಾಡ, (ಜೂನ್.22): ಮಹಾದಾಯಿ ನೀರಿಗಾಗಿ ಕಳೆದ ಎರಡು ದಿನಗಳಿಂದ ನಿರಾವರಿ ಇಲಾಖೆಯ ಮುಂದೆ ಮೌನ ಪ್ರತಿಬಟನೆಯನ್ನ ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠ ಅವರು ನೇತೃತ್ವದಲ್ಲಿ ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ನಿನ್ನೆಯಿಂದ(ಜೂನ್.21) ಆರಂಭ ವಾದ ಪ್ರತಿಬಟನೆ ಇಂದು(ಬುಧವಾರ) ಎರಡನೇಯ ದಿನಕ್ಕೆ ಕಾಲಿಟ್ಟಿದೆ.

ರೈತ ಸೇನ ಕರ್ನಾಟಕ ನರಗುಂದ ವೇದಿಕೆಯ ಮುಖಾಂತರ ಗದಗ, ಧಾರವಾಡ  ಜಿಲ್ಲಾ ರೈತ -ಬಾಂದವರು, ರೈತ ಮಹಿಳೆಯರು 15 ಮತ್ತು 2011 ರಂದು ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಯಾಗಲು ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಒಂದು ಹೋರಾಟವನ್ನು ದುರ್ಬಳಕೆ ಮಾಡಿಕೊಂಡತಹ ಅಧಿಕಾರಿಗಳು, ನಮ್ಮನ್ನು ಆಳುವ ಸರಕಾರಗಳು ರೈತರಿಗೆ ನ್ಯಾಯ ಕೊಡಿಸುವಲ್ಲಿ ಭ್ರಷ್ಟಾಚಾರ ಎಸಗಿರುತ್ತಾರೆ. ವಿಷಯವಾಗಿ  ದೇಶದ ಪ್ರಧಾನ ಮಂತ್ರಿಯವರಿಗೆ, ಕೇಂದ್ರ ಗೃಹ ಮಂತ್ರಿಜೀಯವರಿಗೆ, ಸಿ.ಬಿ.ಐ ಇಲಾಖೆ ನವದೆಹಲಿ ಇವರಿಗೆ ಹಾಗೂ ಸನ್ಮಾನ್ಯ ರಾಜ್ಯದ ಮುಖ್ಯ ಮಂತ್ರಿಯವರಿಗೆ, ಸನ್ಮಾನ ನೀರಾವರಿ ಮಂತ್ರಿಯವರಿಗೆ ಹಲವಾರು ಅಧಿಕಾರಿಗಳಿಗೆ, ಮಂತ್ರಿಗಳವರಿಗೆ ದಾಖಲೆಗಳು ಇರುವಂತಹ ಚಿತ್ರಗಳನ್ನು ಮಾನ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ ಎಂದರು.

Tap to resize

Latest Videos

ಮಹದಾಯಿ ವಿವಾದ: ಗೋವಾದಿಂದ ಮತ್ತೆ ಶುರುವಾಯ್ತು ಕಿರಿಕ್

 ದಿನಾಂಕ: 30-05-2013 ರಂದು ಗೌರವಾನ್ವಿತ ರಾಜ್ಯದ ರಾಜ್ಯಪಾಲರನ್ನು ಬೇಟಿಯಾಗಿ ಉತ್ತರ ಕರ್ನಾಟದ ಹಲವಾರು ಯೋಜನೆಗಳ ಬಗ್ಗೆ, ಹಲವಾರು ಇಲಾಖೆ ಬಗ್ಗೆ ಮನವರಿಕೆ ಮಾಡಿದ್ದೇವೆ, ಈ ವಿಷಯವಾಗಿ ತಾವುಗಳು ಶೀಘ್ರವಾಗಿ ಸಿಬಿಐ ತನಿಖೆಗೆ ನಿರ್ದೇಶನದ ಸೂಚನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇವು ಮತ್ತು ಗೌರವಪೂರ್ವಕವಾಗಿ 10 ದಿನದೊಳಗಾಗಿ ನಮ್ಮ ಬೇಡಿಕೆಗೆ ಯಾವುದೇ ರೀತಿ ಸ್ಪಂದನೆ ಯಾಗದೇ ಹೋದಲ್ಲಿ ನೀರಾವರಿ ಇಲಾಖೆ ಮುಂದೆ ನಿರಂತರ ಧರಣಿ ಮಾಡುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ...

ನಮ್ಮ‌ಬೇಡಿಕೆ ಇಡೇರುವರೆಗೂಬೀ ಜಾಗವನ್ನ ಬಿಡೋದಿಲ್ಲ ಮುಖ್ಯ ಇಂಜಿನಿಯರ ಬಿಟ್ರೆ ರಾಜ್ಯ ಮಟ್ಟದ ಯಾವ ಅಧಿಕಾರಿಗಳು ಸ್ಪಂದನೆ ಕೊಡುತ್ತಿಲ್ಲ ಮಹದಾಯಿ ಯೋಜನೆ 2018 ಕ್ಕೆ‌ಜಾರಿಯಾಗಿದೆ,ಇಲ್ಲಿಯವೆಗೂ ಡ‌್ಯಾಂ ಕಟ್ಟಲೂ ಚಾಲನೆ ಕೊಡ್ತಾ ಇಲ್ಲ ಕೇಂದ್ರ ಸರಕಾರ ಅಧಿಸೂಚನೆ ನೀಡಿದೆ, ಸುಪ್ರಿಂ ಕೋರ್ಟ ಆದೇಶ ಮಾಡಿದೆ, ಡ‌್ಯಾಂಕ ಕಟ್ಟಲೂ ಕೋರ್ಟ ಸಹ ಒಪ್ಪಿಗೆ ಕೊಟ್ಟಿದೆ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಮಹದಾಯಿ ಹೋರಾಟದಿಂದಲೆ ಸಿಎಂ ಆಗಿದ್ದಾರೆ, ನಮ್ಮ ರಾಜ್ಯದ ಸಂಸದರು ಎನ್ ಮಾಡ್ತಾ ಇದಾರೆ, ಇವರು ನಮ್ಮ ಕೈಯಲ್ಲಿ ಆಗಲ್ಲ ಎಂದರೆ ರೈತರು ನಾವು ಡ್ಯಾಂ ಕಟ್ಡಿಕ್ಕೊಳ್ಳುತ್ತೆವೆ, 

ಈ ಮಹದಾಯಿ ಯೋಜನೆ ಜಾರಿಯಾಗಬೇಕು, ನಿರಾವರಿ ಯೋಜನೆಯಲ್ಲಿ ಭಾರಿ ಬ್ರಷ್ಟಾಚಾರಗಳು ಆಗ್ತಾ ಇದೆ..ಆದರೆ ಯಾರು ಗಮನ ಹರಿಸುತ್ತಿಲ್ಲ, ಇನ್ನು ಇಗಾಗಲೆ ನಕಲಿ‌ದಾಖಲೆ ಸೃಷ್ಠಿಸಿ ಮೂವತ್ತು ಕೋಟೊ ತೆಗೆದಿದ್ದರು..ಅವರು ತಕ್ಕ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ..ಆದರೆ ಯಾರು ಈ ಕಡೆ ಗಮನ ಹರಿಸುತ್ತಿಲ್ಲ,..ನಾವು ಯಾವುದೆ ಕಾರಣಕ್ಕೂ ಹೋರಾಟ ದಿಂದ ಹಿಂದೆ ಸರಿಯಲ್ಲ.. ಕೇವಲ ಹೋರಾಟ ಮಾಡುತ್ತೆವೆ, ಮನವಿ ಕೊಡುತ್ತೆವೆ, ಇವರು ಮನವಿ ಪತ್ರವನ್ನ ಎಲ್ಲಿ ಇಡ್ತಾರೋ ಗೊತ್ತಿಲ್ಲ..ಇವತ್ತು ನವಲಗುಂದ, ನರಗುಂದ ದಿಂದ ಇನ್ನಷ್ಟು ರೈತರು ಬರುತ್ತಿದ್ದಾರೆ..ಕೆಲಸ ಸುರು ಆಗೋವರೆಗೂ ನಾವು ಇಲ್ಲಿಂದ ಕಾಲ್ಕಿಳಲ್ಲ ಎಂದು ಮಹಿಳೆಯರು ಅಧಿಕಾರಿಗಳ ವಿರುದ್ದ ಕಿಡಿಕಾರಿದರು..

click me!