ಮೃಗಾಲಯ ಅಂತ ಹೊರಗಡೆ ದೊಡ್ಡ ಬೋರ್ಡ್ ಹಾಕಲಾಗಿದೆ. ಆದ್ರೆ, ಒಳಗೆ ಹೋಗಿ ನೋಡಿದ್ರೆ ಎಲ್ಲಾ ಬೋನ್ ಖಾಲಿ ಖಾಲಿಯಾಗಿದ್ದು, ಪ್ರವಾಸಿಗರು ನಿರಾಸೆಯಿಂದ ಆಚೆ ಬರುತ್ತಿದ್ದಾರೆ.
ಚಿತ್ರದುರ್ಗ, (ಜೂನ್.22): ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡ್ತಿದೆ. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅಭಿವೃದ್ಧಿ ಕಾಣದೇ ಕೋಟೆನಾಡಿನ ಕಿರು ಮೃಗಾಲಯ ಬಳಲುತ್ತಿದೆ. ಅನುದಾನ ಇದ್ದರೂ ಅಭಿವೃದ್ದಿ ಕಾಣದೇ ಹುಲಿ, ಜೀಬ್ರಾ, ಇನ್ನಿತರ ಪ್ರಾಣಿಗಳನ್ನು ಮೃಗಾಲಯ ಕ್ಕೆ ತರುವ ಪ್ರಯತ್ನ ಮಾತ್ರ ಕುಂಠಿತವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಹೊರಗಿನಿಂದ ಬರುವ ಪ್ರವಾಸಿಗರಿಗೆ ಒಳಗೆ ಹೋದ್ರೆ ಸಾಕು ನೋಡಲು ಸಾಕಷ್ಟು ಪ್ರಾಣಿಗಳು ಇದಾವೆನೋ ಎಂದು ದೊಡ್ಡ ಮಟ್ಟದಲ್ಲಿ ಪೋಸ್ಟರ್ ಅಂಚಿರೋ ಅರಣ್ಯ ಇಲಾಖೆ. ಒಳಗೆ ಹೋಗಿ ನೋಡಿದ್ರೆ ಎಲ್ಲಾ ಬೋನ್ ಗಳು ಖಾಲಿ ಖಾಲಿ. ಕೋಟೆನಾಡು ಚಿತ್ರದುರ್ಗದ ಹೊರವಲಯದಲ್ಲಿ ಆಡುಮಲ್ಲೇಶ್ವರ ಕಿರು ಮೃಗಾಲಯ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದಷ್ಟೆ, ಮೃಗಾಲಯ ಅಭಿವೃದ್ಧಿಗಾಗಿ ಜಿಲ್ಲೆಯ DMF ನಿಧಿಯಿಂದ ಸುಮಾರು 3 ಕೋಟಿ ವೆಚ್ಚವನ್ನು ಮಂಜೂರು ಮಾಡಲಾಗಿತ್ತು. ಅದರಂತೆ ಈ ಮೃಗಾಲಯಕ್ಕೆ ಮೈಸೂರು, ಬನ್ನೇರುಘಟ್ಟ ಮೃಗಾಲಯದಿಂದ ಹುಲಿ, ಸಿಂಹ, ಜೀಬ್ರಾ ಇನ್ನಿತರ ಪ್ರವಾಸಿಗಳರನ್ನು ಆಕರ್ಷಣೆ ಮಾಡುವ ಪ್ರಾಣಿಗಳನ್ನು ತರುವ ಪ್ಲಾನ್ ಮಾಡಲಾಗಿತ್ತು. ಈಗಾಗಲೇ ಅನುದಾನ ಬಿಡುಗಡೆ ಆಗಿದ್ದರೂ ಕೂಡ ಅಭಿವೃದ್ಧಿ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ.
ಕೋಟೆನಾಡಿಗೆ ಮೆಡಿಕಲ್ ಕಾಲೇಜ್ ಬಂದ್ರೆ 200 ವಿದ್ಯಾರ್ಥಿಗಳಷ್ಟೇ ಹೆಲ್ಪ್ ಆಗೋದು: ಮುರುಗ ಶರಣರು
ನಾಲ್ಕು ವರ್ಷಗಳು ಕಳೆದ್ರು ನೂತನ ಪ್ರಾಣಿಗಳನ್ನು ತರುವ ಆಲೋಚನೆ ಇರಲಿ, ಅವುಗಳಿಗೆ ಇರಲಿಕ್ಕೆ ವಾಸ ಗೃಹವನ್ನು ಕೂಡ ನಿರ್ಮಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಸಿದ್ದಾರೆ. ಇದ್ರಿಂದಾಗಿ ನಿತ್ಯ ಪ್ರವಾಸಿಗರು ಆಡು ಮಲ್ಲೇಶ್ವರ ಕ್ಕೆ ಹೋದ್ರೆ ಕೇವಲ ವಾಯು ವಿಹಾರ ಮುಗಿಸಿ ವಾಪಾಸ್ ಬೇಸರದಿಂದ ಮನೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗಿನಿಂದ ನೋಡಲಿಕ್ಕೆ ಮಾತ್ರ ದೊಡ್ಡದಾಗಿ ಪೋಸ್ಟರ್ ಹಂಚಿರೋ ಇಲಾಖೆಯವರು ಒಳಗಡೆ ಕೇವಲ ಚಿರತೆ, ಕರಡಿ, ಜಿಂಕೆ ಈಗ ಸ್ವಲ್ಪ ಪ್ರಾಣಿಗಳು ಮಾತ್ರ ಇವೆ. ಹೊಸ ಪ್ರಾಣಿಗಳು ಇನ್ನೂ ಬಂದಿಲ್ಲ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.
ಇನ್ನೂ ಈ ಬಗ್ಗೆ ಅರಣ್ಯಾಧಿಕಾರಿಯನ್ನೇ ವಿಚಾರಿಸಿದ್ರೆ, ಕಿರು ಮೃಗಾಲಯ ಅಭಿವೃದ್ಧಿ DMF ನಿಧಿಯಿಂದ ಮೂರು ಕೋಟಿ ಕೊಡುವುದಾಗಿ ಹೇಳಿದ್ರು. ಸದ್ಯಕ್ಕೆ ಒಂದೂವರೆ ಕೋಟಿ ಹಣ ಮಂಜೂರಾಗಿದೆ. ಇದ್ರಲ್ಲಿ ಹುಲಿಯ ವಾಸ ಗೃಹ, ಜೀಬ್ರಾ ವಾಸ ಗೃಹದ ಕಾಮಗಾರಿ ನಡೆಯುತ್ತಿದೆ. ಆದ್ರೆ ತಡವಾಗ್ತಿರೋದಕ್ಕೆ ಕಾರಣ ಗುತ್ತಿಗೆದಾರರು ಸರಿಯಾಗಿ ಬಂದು ಕೆಲಸ ಮಾಡ್ತಿಲ್ಲ. ಸದ್ಯ ಕೆಲಸ ನಡೆಯುತ್ತಿದೆ ಆದ್ರೆ ಎಲೆಕ್ಟ್ರಿಸಿಟಿ ವರ್ಕ್ ಸಮಸ್ಯೆ ಆಗ್ತಿದೆ. ಆದಷ್ಟು ಬೇಗ ಇನ್ನೆರಡು ತಿಂಗಳೊಳಗೆ ಕೆಲಸ ಮುಗಿಸಿ ಹುಲಿ, ಜೀಬ್ರಾ ತಂದು ಕಿರು ಮೃಗಾಲಯ ಕ್ಕೆ ಬಿಡಲಾಗುವುದು ಎಂದು ಹಾರಿಕೆ ಉತ್ತರ ನೀಡಿದರು.
ಒಟ್ಟಾರೆಯಾಗಿ ಪ್ರವಾಸಿ ತಾಣಗಳ ಅಭಿವೃದ್ಧಿ ಆಗಬೇಕು ಅಂದ್ರೆ ವಿವಿಧ ಜಾತಿಯ ಪ್ರಾಣಿಗಳು ಮೃಗಾಲಯದಲ್ಲಿ ಇದ್ರೆ ಮಾತ್ರ ಸಾಧ್ಯ. ಆಗ ಮಾತ್ರ ಪ್ರವಾಸಿಗರು ಹೆಚ್ಚೆಚ್ಚು ಬಂದು ವೀಕ್ಷಣೆ ಮಾಡೋದ್ರಿಂದ ಅರಣ್ಯ ಇಲಾಖೆಗೆ ಲಾಭ ಆಗುತ್ತೆ. ಇನ್ನಾದ್ರು ಚಿತ್ರದುರ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಆಡು ಮಲ್ಲೇಶ್ವರ ಕಿರು ಮೃಗಾಲಯದ ಅಭಿವೃದ್ಧಿ ಶ್ರಮಿಸಬೇಕಿದೆ.