ನಾಳೆಯೇ ವಿಜಯಪುರ ಮಹಾನಗರ ಪಾಲಿಕೆಗೆ ಮತದಾನ! ರೌಡಿಗಳ ಮೇಲೆ ಹದ್ದಿನ ಕಣ್ಣು

By Suvarna NewsFirst Published Oct 27, 2022, 7:17 PM IST
Highlights

ನಾಳೆ ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ.  327 ಕಮ್ಯೂನಲ್ ಗೂಂಡಾ ಹಾಗೂ ರೌಡಿಗಳ ಮೇಲೆ ಖಾಕಿ ಕಣ್ಣು, ಶಾಂತಿಯುತವಾಗಿ ಮತದಾನ ನಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಕಲ ಸಿದ್ಧತೆ!

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಅ.27): ನಾಳೆಯೇ ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆ ಗುಮ್ಮಟನಗರಿಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ಅದ್ರಲ್ಲೂ ಕೋಮುಸೂಕ್ಷ್ಮ ನಗರದಲ್ಲಿ ಕಮ್ಯೂನಲ್‌ ಗೂಂಡಾ ಹಾಗೂ ರೌಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವಿಜಯಪುರ ನಗರದಲ್ಲಿ ಗಲಾಟೆಗಳು ನಡೆದ್ರೆ ಅದನ್ನ ನಿಯಂತ್ರಣ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಹಿಂದೆ ಕೇಂದ್ರದಲ್ಲಿ ಬಿಜೆಪಿ ಗೆದ್ದ ಬಳಿಕ ನಡೆದ ಕೋಮು ಗಲಭೆ ಮರೆಯೋ ಹಾಗೆ ಇಲ್ಲ. ಹೀಗಾಗಿ ಪಾಲಿಕೆ ಚುನಾವಣೆಯಲ್ಲು ಪೊಲೀಸ್‌ ಇಲಾಖೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ಅದ್ರಲ್ಲು ಕಮ್ಯೂನಲ್‌ ಗೂಂಡಾಗಳ ಮೇಲೆ ಕಣ್ಣೀಟ್ಟಿರುವ ಜಿಲ್ಲಾ ಪೊಲೀಸರು ಎಲ್ಲರಿಂದಲೂ ಬಾಂಡ್‌ ಓವರ್‌ ಮಾಡಿಸಿಕೊಂಡಿದ್ದಾರೆ. ಜೊತೆಗೆ ನಗರದಲ್ಲಿರುವ 6 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌ ಗಳಿಂದ ಬಾಂಡ್‌ ಓವರ್‌ ಮಾಡಿಕೊಂಡು ಎಚ್ಚರಿಕೆ ನೀಡಿದ್ದಾರೆ. ವಿಜಯಪುರ ನಗರದ 6 ಪೊಲೀಸ್‌ ಠಾಣೆಗಳ 327 ಕಮ್ಯೂನಲ್‌ ಗೂಂಡಾ ಹಾಗೂ ರೌಡಿ ಶೀಟರ್‌ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ ಎಲ್ಲರಿಂದಲೂ ಬಾಂಡ್‌ ಓವರ್‌ ಮಾಡಿಸಿಕೊಂಡಿದ್ದಾರೆ. ಗಾಂಧಿ ಚೌಕ ಠಾಣೆ, ಗೋಳಗುಮ್ಮಟ, ಆದರ್ಶ ನಗರ, ಗ್ರಾಮೀಣ ಠಾಣೆ, ಜಲನಗರ, ಎಪಿಎಂಸಿ ಪೊಲೀಸ್‌ ಠಾಣೆಗಳ ಒಟ್ಟು 327 ಕಮ್ಯೂನಲ್‌ ಗೂಂಡಾ, ರೌಡಿಶೀಟರ್‌ ಗಳಿಂದ ಬಾಂಡ್‌ ಓವರ್‌ ಮಾಡಿಕೊಂಡು ಎಚ್ಚರಿಕೆ ನೀಡಿದ್ದಾರೆ..

ಯಾವ ಠಾಣೆಗಳಲ್ಲಿ ಎಷ್ಟು ಕಮ್ಯೂನಲ್‌ ಗೂಂಡಾ ಹಾಗೂ ರೌಡಿಗಳಿದ್ದಾರೆ, ಎಷ್ಟು ಜನರಿಂದ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದೆ ಅನ್ನೋದನ್ನ ನೋಡೋದಾದ್ರೆ..

1] ಗಾಂಧಿಚೌಕ ಠಾಣೆ - 143 ಗೂಂಡಾ ಹಾಗೂ ರೌಡಿಗಳು 
2] APMC ಪೊಲೀಸ್ ಠಾಣೆ - 27 ಗೂಂಡಾ, ರೌಡಿಗಳು
3] ಆದರ್ಶ ನಗರ ಠಾಣೆ - 30 ಗೂಂಡಾ, ರೌಡಿಗಳು
4] ಜಲನಗರ ಠಾಣೆ - 32 ರೌಡಿ, ಗೂಂಡಾಗಳು
5] ಗೋಳಗುಮ್ಮಟ ಠಾಣೆ - 44 ರೌಡಿ ಹಾಗೂ ಗೂಂಡಾಗಳು
6] ವಿಜಯಪುರ ಗ್ರಾಮೀಣ ಠಾಣೆ - 51 ಗೂಂಡಾ ಹಾಗೂ ರೌಡಿಗಗಳಿಂದ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದೆ.
ಒಟ್ಟು 327 ರೌಡಿ ಹಾಗೂ ಕಮ್ಯೂನಲ್ ಗೂಂಡಾಗಳಿಂದ ಬಾಂಡ್ ಓವರ್ ಮಾಡಿಸಿಕೊಂಡ ಪೊಲೀಸರು..

ಮುನ್ನೆಚ್ಚರಿಕೆ ಕ್ರಮವಾಗಿ ಗನ್‌ ಜಮೆ!
ಪಾಲಿಕೆ ಚುನಾವಣೆ ನಡೆಯುತ್ತಿರೋದ್ರಿಂದ ಚುನಾವಣೆ ಘೋಷಣೆಯಾದಾಗಲೇ ಪೊಲೀಸ್‌ ಇಲಾಖೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 5 ಪೊಲೀಸ್‌ ಠಾಣೆಗಳಲ್ಲು ಪೊಲೀಸರು ಪರವಾಣಿಗೆ ಪಡೆದ ಗನ್‌ ಗಳನ್ನು ಜಮೆ ಮಾಡಿಕೊಂಡಿದ್ದಾರೆ. ಆತ್ಮರಕ್ಷಣೆಗಾಗಿ ನಾಗರಿಕರು ಪಡೆದ ಬಂದೂಕು, ಗನ್‌, ಪಿಸ್ತೂಲುಗಳನ್ನ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂಗಲ್‌ ಬಾರ್‌, ಡಬಲ್‌ ಬಾರ್‌, ಪಿಸ್ತೂಲು, ರಿವಾಲ್ವರ್‌ ಒಟ್ಟು 408 ಗನ್‌ ಗಳನ್ನ ಪೊಲೀಸರು ಆಯಾ ಠಾಣೆಗಳಿಗೆ ಜಮೆ ಮಾಡಿಕೊಂಡಿದ್ದಾರೆ.

ವಿಜಯಪುರ ಪಾಲಿಕೆ ಚುನಾವಣೆ: ಯೂಟ್ಯೂಬ್ ಸ್ಟಾರ್‌ನಿಂದ ಮತದಾನ ಜಾಗೃತಿ..!

ಒಟ್ಟು 408 ಲೈಸೆನ್ಸ್ ಗನ್‌ಗಳನ್ನ ಜಮೆ ಮಾಡಿಕೊಂಡ ಪೊಲೀಸ್ ಇಲಾಖೆ..
1] ಗಾಂಧಿಚೌಕ ಠಾಣೆಯ - 159 ಗನ್
2] ಗೋಳಗುಮ್ಮಟ ಠಾಣೆಯ - 85 ಗನ್..
3] APMC ಠಾಣೆಯ - 37 ಗನ್
4] ಆದರ್ಶ ನಗರ ಠಾಣೆಯ - 65 ಗನ್
5] ಜಲನಗರ ಠಾಣೆಯ 62 ಗನ್ ಗಳು ವಶಕ್ಕೆ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ, ಮತಗಟ್ಟೆ ವ್ಯಾಪ್ತಿಯ 100 ಮೀ.ಪ್ರದೇಶದಲ್ಲಿ

ಶಾಂತಿಯುತವಾಗಿ ಮತದಾನ ನಡೆಯಲು ಕ್ರಮ!
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನರ್ ಹಾಗೂ ಎಸ್ಪಿ ಹೆಚ್ ಡಿ ಆನಂದಕುಮಾರ್ ಶಾಂತಿಯುತವಾಗಿ ಮತದಾನ ನಡೆಯಲು ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಮತದಾನ ನಡೆಯುವ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಆಯಾ ಮತಗಟ್ಟೆಗಳಿಗೆ ಸಿಬ್ಬಂದಿಗಳನ್ನ‌ ನಿಯೋಜನೆ ಮಾಡಿದ್ದಾರೆ. ಇತ್ತು ಪೊಲೀಸ್ ಇಲಾಖೆ ಯಾವುದೇ ಗಲಾಟೆಗಳು ನಡೆಯದಂತೆ ಬಿಗಿ ಭದ್ರತೆಯನ್ನ ಕೈಗೊಂಡಿದೆ.

click me!