ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದವರಿಗೆ ಬೆಂಬಲ ಕೊಡಿ ಅಂತೀರಿ, ಕೃಷ್ಣೆಗೆ ಬಂದಾಗ ಯಾಕೆ ಮಲಗಿಕೊಳ್ತಿರಿ?: ಯತ್ನಾಳ್‌

By Girish Goudar  |  First Published Sep 26, 2023, 8:32 AM IST

ಪ್ರತಿಭಟನೆಯಲ್ಲಿ ಎಷ್ಟು ಮಂದಿ ಇದ್ದಾರೆ 12 ಮಂದಿ ಇದ್ದಾರೆ. ಈಗಿನಿಂದಲೇ ಹೋಗಿ ಕಾವೇರಿ ಗೇಟ್ ಮುಚ್ಚುತ್ತೇವೆ ಅಂತ ಭಾಷಣ ಮಾಡ್ತಾರೆ. ಹೋಗಿ ಏನು ಮುಚ್ಚುವುದಿದೆ ಸುಡುಗಾಡು, ಸುಮ್ಮನೆ ಹೊಡೆಯೋದು: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ 


ವಿಜಯಪುರ(ಸೆ.26):  ಸನಾತನ ಧರ್ಮದ ಬಗ್ಗೆ ಅವಹೇಳನ, ಸ್ವಾತಂತ್ರ್ಯ ಹೋರಾಟಗಾರರು, ದೇಶದ ಭಕ್ತರ ಅಪಮಾನ ಮಾಡ್ತಾರೆ. ಅವಾಗ ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾದ್ಯಂತ ದನಿ ಎತ್ತುತ್ತೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ. 

ವಿಜಯಪುರದಲ್ಲಿ ನಿನ್ನೆ(ಸೋಮವಾರ) ರಾತ್ರಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು, ನಮ್ಮ ಸ್ವಾಮಿ ವಿವೇಕಾನಂದ ಸೇನೆ ರೋಲ್ ಕಾಲ್ ಸಂಘಟನೆ ಅಲ್ಲ. ಬೆಂಗಳೂರಿನಲ್ಲಿ ಕೆಲವು ಮಂದಿ ದಂಧಾ ಏನಂದ್ರೆ ಅಂಜಿಸಿ ರೊಕ್ಕ ತಗೊಳ್ಳೋದು ಆಗಿದೆ. ಹೋರಾಟ ಮಾಡೋದು ಇಪ್ಪತ್ತು ಮಂದಿ ಇಲ್ಲ, ಹೋರಾಟದಲ್ಲಿ ಇಪ್ಪತ್ತು ಮಂದಿ ಇರಲ್ಲ, ಬರೀ ಧಿಕ್ಕಾರ ಧಿಕ್ಕಾರ ಅಂತಿರ್ತಾರೆ. ಪಾಪ ಪೇಪರ್ ನವರು, ಟಿವಿಯವರು ಹೋಗಿ ಜೀವಂತ ಇರಲಿ ಅಂತ ತೀವ್ರ ಪ್ರತಿಭಟನೆ, ಉಗ್ರ ಹೋರಾಟ ಮಾಡ್ತಾರೆ. ಇರೋದೇ ಹದಿನೈದು ಮಂದಿ ಇರ್ತಾರೆ ಎಂದು ಹೇಳಿದ್ದಾರೆ. 

Tap to resize

Latest Videos

ರಾಮನಗರದಲ್ಲಿ ಹೆಚ್ಚಿದ ಕಾವೇರಿ ಕಿಚ್ಚು: ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ ಪ್ರತಿಭಟನೆ

ಕಾವೇರಿಯಲ್ಲಿ ಕಾವೇರಿದ ವಾತಾವರಣ 

ಪ್ರತಿಭಟನೆಯಲ್ಲಿ ಎಷ್ಟು ಮಂದಿ ಇದ್ದಾರೆ 12 ಮಂದಿ ಇದ್ದಾರೆ. ಈಗಿನಿಂದಲೇ ಹೋಗಿ ಕಾವೇರಿ ಗೇಟ್ ಮುಚ್ಚುತ್ತೇವೆ ಅಂತ ಭಾಷಣ ಮಾಡ್ತಾರೆ. ಹೋಗಿ ಏನು ಮುಚ್ಚುವುದಿದೆ ಸುಡುಗಾಡು, ಸುಮ್ಮನೆ ಹೊಡೆಯೋದು. ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದವರಿಗೆ ಬೆಂಬಲ ಕೊಡಿ ಅಂತೀರಿ. ಉತ್ತರ ಕರ್ನಾಟಕದ ಕೃಷ್ಣಾ ಹೋರಾಟ ಬಂದಾಗ ಯಾಕೆ ಮಲಗಿಕೊಳ್ತಿರಿ. ನಾವು ನಿಮಗೆ ಸಪೋರ್ಟ್ ಮಾಡ್ತೀವಿ, ನೀವು ನಮಗೆ ಸಪೋರ್ಟ್ ಮಾಡಿ. ಕಾವೇರಿ, ಕೃಷ್ಣಾ ಕರ್ನಾಟಕದ ಎರಡು ಕಣ್ಣುಗಳು. ಎಲ್ಲರೂ ಸೇರಿ ಹೋರಾಟ ಮಾಡೋಣ ಎಂದು ತಿಳಿಸಿದ್ದಾರೆ. 

click me!