ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಒಂದು ರೀತಿ ಮುಳುಗೋ ಹಡಗು ಇದ್ದಂತೆ, ಇದರಿಂದ ಕರ್ನಾಟಕದಲ್ಲಿ ಯಾವುದೇ ಜಾದು ನಡೆಯೋದಿಲ್ಲ, ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರು ಸ್ಪರ್ಧಿಸಿದರೆ ನಾನು ಸ್ವಾಗತಿಸುತ್ತೇನೆ. ಮಾಜಿ ಪ್ರಧಾನಿಯನ್ನು ಗೆಲ್ಲಿಸಿದ ಕೀರ್ತಿ ತುಮಕೂರಿಗೆ ಬರಲಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಮೈತ್ರಿ ವಿರುದ್ಧ ವ್ಯಂಗ್ಯವಾಡಿದರು.
ಕೊರಟಗೆರೆ : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಒಂದು ರೀತಿ ಮುಳುಗೋ ಹಡಗು ಇದ್ದಂತೆ, ಇದರಿಂದ ಕರ್ನಾಟಕದಲ್ಲಿ ಯಾವುದೇ ಜಾದು ನಡೆಯೋದಿಲ್ಲ, ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರು ಸ್ಪರ್ಧಿಸಿದರೆ ನಾನು ಸ್ವಾಗತಿಸುತ್ತೇನೆ. ಮಾಜಿ ಪ್ರಧಾನಿಯನ್ನು ಗೆಲ್ಲಿಸಿದ ಕೀರ್ತಿ ತುಮಕೂರಿಗೆ ಬರಲಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಮೈತ್ರಿ ವಿರುದ್ಧ ವ್ಯಂಗ್ಯವಾಡಿದರು.
ಕೊರಟಗೆರೆ ತಾಲೂಕಿನ ಸಿದ್ದರ ಬೆಟ್ಟದ ಶ್ರೀ ರಂಭಾಪುರಿ ಶಾಖ ಮಠಕ್ಕೆ ಭೇಟಿ ನೀಡಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ಹಿಂತಿರುಗುವಾಗ ಪತ್ರಕರ್ತರೊಂದಿಗೆ ಮಾತನಾಡಿ, ಹಾಗೂ ಜೆಡಿಎಸ್ ಮೈತ್ರಿ ವಿರುದ್ಧ ವ್ಯಂಗ್ಯವಾಡಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಟ ಕರ್ನಾಟಕದ ಮಟ್ಟಕ್ಕೆ ಯಾವುದೇ ಜಾದು ನಡೆಯೋದಿಲ್ಲ, ಹಿಂದಿನ ಬಿಜೆಪಿ ಸರ್ಕಾರವನ್ನು ಜನರ ನೋಡಿದರೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರು ಮನಗಂಡಿದ್ದಾರೆ. ಜನರ ಆಶೀರ್ವಾದದಿಂದ ಈ ಸರ್ಕಾರ ರಚನೆಯಾಗಿದೆ ಅಭಿವೃದ್ಧಿ ಮಂತ್ರದೊಂದಿಗೆ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ಹಲವು ಭಾಗ್ಯಗಳ ಜೊತೆಗೆ ಇತ್ತೀಚಿಗೆ ಐದು ಗ್ಯಾರಂಟಿಗಳ ಯಶಸ್ವಿಯಾಗಿ ಅನುಷ್ಠಾನಗೊಳ್ಳುತಿದೆ, ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಅನಿವಾರ್ಯವಾಗಿ ಮೈತ್ರಿಗೆ ಮುಂದಾಗಿದ್ದು, ಈ ಬಾರಿ ಕರ್ನಾಟಕದಲ್ಲಿ ಅತ್ಯಧಿಕ ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯ ಸೋಲು ಕಂಡಿದೆ. ಬಿಜೆಪಿಯವರು ನಾಯಕರನ್ನು ಆಯ್ಕೆ ಮಾಡದ ಸ್ಥಿತಿಯಲ್ಲಿದ್ದಾರೆ. ಜೆಡಿಎಸ್ ನಾಲ್ಕು ಕ್ಷೇತ್ರ ಕೇಳುತ್ತಿದ್ದಾರೆ ಆದರೆ ಬಿಜೆಪಿ ಬಿಟ್ಟು ಕೊಡುತ್ತದೋ ನೋಡೋಣ. ಮೈತ್ರಿಯಲ್ಲಿ ತುಮಕೂರಿಗೆ ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡರು ಸ್ಪರ್ಧಿಸಿದರೆ ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ನಿಂದಲೂ ಬಲಿಷ್ಠ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಮಧುಗಿರಿ ಕಾಂಗ್ರೆಸ್ ಮುಖಂಡರಾದ ಗಂಗಣ್ಣ, ತುಂಗೋಟಿ ರಾಮಣ್ಣ, ಲಕ್ಷ್ಮಿ ನಾರಾಯಣ್ , ವಕೀಲರಾದ ಪಂಚಾಕ್ಷರಯ್ಯ ಸೇರಿದಂತೆ ಹಲವರು ಹಾಜರಿದ್ದರು.