ಆಧುನಿಕ ಶ್ರವಣಕುಮಾರನ ಕರುಣಾಜನಕ ಕಥೆ, ಅಂದು ಹೊಗಳಿದ್ದ ರಾಜಕಾರಣಿಗಳು ಕ್ಯಾರೆ ಎನ್ನುತ್ತಿಲ್ಲ

By Suvarna News  |  First Published Mar 24, 2022, 3:49 PM IST

⦁ ಗುಮ್ಮಟನಗರಿಯ ಆಧುನಿಕ ಶ್ರವಣಕುಮಾರನ ಕರುಣಾಜನಕ ಕಥೆ..!
⦁ ತಾಯಿಯನ್ನ ಹೊತ್ತು 600 ಕಿ.ಮೀ ಪಾದಯಾತ್ರೆ ಮಾಡಿದ ಮಗ..!
⦁ ಹೆಗಲ ಮೇಲೆ ಕೂರಿಸಿಕೊಂಡು ಅಮ್ಮನಿಗೆ ಶ್ರೀಶೈಲ ಗಿರಿ ತೋರಿಸಿದ ವೀರ..!
⦁ ವರ್ಷಕ್ಕೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗೋ ಈ ವ್ಯಕ್ತಿ ಈಗ ಹೇಗಿದ್ದಾನೆ ಗೊತ್ತಾ.?!


ವರದ- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಮಾರ್ಚ್24) : ಈಗೀನ ಅಧುನಿಕ ಯುಗದಲ್ಲಿ ಹೆತ್ತವರಿಗೆ ವಯಸ್ಸಾದ್ರೆ ಸಾಕು, ಅವರನ್ನ ನೋಡಿಕೊಳ್ಳೊಕೆ ಹಿಂದೆಟು ಹಾಕೋರೆ ಜಾಸ್ತಿ.. ಕೋವಿಡ್‌ (Covid-19) ಸಮಯದಲ್ಲಂತು ಮಕ್ಕಳೆಂದು ಕರೆಯಿಸಿಕೊಂಡ ರಾಕ್ಷಸರ ಅಸಲಿ ಮುಖಗಳೇ ಅನಾವರಣವಾಗಿದ್ವು.

Latest Videos

undefined

ಆದ್ರೆ ಕಾಲ ಎಷ್ಟೆ ಬದಲಾದ್ರು, ಸಮಯ ಎಷ್ಟೇ ಸಾಗಿದ್ರು, ತಾಯಿಗೆ (Mother) ಎಷ್ಟೆ ವಯಸ್ಸಾದ್ರು ವಿಜಯಪುರದ ಅದೊಬ್ಬ ವ್ಯಕ್ತಿ ಕೊನೆಯವರೆಗು ತಾಯಿ ಸೇವೆಯನ್ನ ಬಿಡಲಿಲ್ಲ. ಅದೆ ವ್ಯಕ್ತಿ ಇಂದು ಆಧುನಿಕ ಶ್ರವಣ ಕುಮಾರ ಎಂದು ಕರೆಯಿಸಿಕೊಳ್ತಿದ್ದಾನೆ.. ಹೋಳಿ ಬಳಿಕ ಶ್ರೀಶೈಲ ಪಾದಯಾತ್ರೆ ಅಂದ್ರೆ ಸಾಕು ಈತ ಸೋಶಿಯಲ್‌ ಮೀಡಿಯಾ (Social media) ದಲ್ಲಿ ವೈರಲ್‌ ಆಗಿ ಬಿಡ್ತಾನೆ..

Aadhaar Card: 6 ವರ್ಷದ ಬಳಿಕ ಮಗನನ್ನು ತಾಯಿ ಮಡಿಲು ಸೇರಿಸಿದ ಆಧಾರ್‌ ಕಾರ್ಡ್‌..!

ಆಧುನಿಕ ಶ್ರವಣಕುಮಾರ ಅಣ್ಣಾರಾಯ ಕುದರಿ..!
ವಿಜಯಪುರ ಜಿಲ್ಲೆಯ ಇಂಡಿ (Indi) ತಾಲೂಕಿನ ತಡವಲಗಾ ಗ್ರಾಮದಿಂದ ಅಣ್ಣಾರಾಯ ರಾಯಣ್ಣ ಕುದರಿ ಆಧುನಿಕ ಶ್ರವಣಕುಮಾರ ಅಂತಲೇ ಈ ಭಾಗದಲ್ಲಿ ಹೆಸರು ವಾಸಿಯಾಗಿದ್ದಾರೆ. ಅಣ್ಣಾರಾಯ ತನ್ನ ತಾಯಿ ಲೀಲಾಬಾಯಿಯನ್ನ ಹೊತ್ತು 600 ಕಿ.ಮೀ ವರೆಗೆ ನಡೆದು ಶ್ರೀಶೈಲ (Shrishailam) ಮಲ್ಲಿಕಾರ್ಜುನನ ದರ್ಶನ ಮಾಡಿದ್ದಾರೆ. ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತರಾಗಿರೋ ಅಣ್ಣಾರಾಯ ಕುದರಿ ಕಳೆದ 10 ವರ್ಷಗಳಿಂದ ಶ್ರೀಶೈಲಕ್ಕೆ ನಿರಂತರವಾಗಿ ಪಾದಯಾತ್ರೆ ಹೋಗ್ತಾರೆ. ಹಾಗೇ ಕಳೆದ 2017 ಹಾಗೂ 2018ರಲ್ಲಿ ಎರೆಡು ವರ್ಷಗಳ ಕಾಲ 95 ವರ್ಷದ ತಾಯಿ ಲೀಲಾಬಾಯಿಯನ್ನ ಹೊತ್ತುಕೊಂಡು ಅಣ್ಣಾರಾಯ ಕುದರಿ ಪಾದಯಾತ್ರೆ ಮಾಡಿದ್ದಾರೆ. ತಾಯಿಗೆ ನಡೆಯೋಕೆ ಆಗೋಲ್ಲ ಅನ್ನೋ ಕಾರಣಕ್ಕೆ ಆಕೆಯನ್ನೆ ಹೊತ್ತು ಪಾದಯಾತ್ರೆ ಮಾಡಿದ್ದಾರೆ. ಸಧ್ಯ ದುರಂತದ ವಿಚಾರ ಅಂದ್ರೆ ಲೀಲಾಬಾಯಿ ತೀರಿಕೊಂಡು 2 ವರ್ಷಗಳೇ ಕಳೆದಿವೆ. 2019ರ ವರ್ಷದ ಕೊನೆಯಲ್ಲಿ ಲೀಲಾಲಾಬಾಯಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ..

ತಾಯಿಯ ಕನಸು ನನಸು ಮಾಡಲು ಪಾದಯಾತ್ರೆ..!
ಅಣ್ಣಾರಾಯನ ತಾಯಿ ಲೀಲಾಬಾಯಿಗೆ 93 ವಯಸ್ಸಿದ್ದಾಗಲ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಮಾಡುವ ಆಸೆ ಮೂಡಿತ್ತು. ಆದ್ರೆ ಪಾದಯಾತ್ರೆ ಮಾಡು ಶಕ್ತಿ ಆಕೆಯ ಬಳಿ ಇರಲಿಲ್ಲ. ಹೀಗಾಗಿ ನಿನ್ನನ್ನ ಪಾದಯಾತ್ರೆಯ ಮೂಲಕವೇ ಕೊಂಡೊಯ್ದು ದರ್ಶನ ಮಾಡಿಸ್ತೀನಿ ಎಂದು ಅಣ್ಣಾರಾಯ ಲೀಲಾಬಾಯಿಗೆ ಮಾತು ಕೊಟ್ಟಿದ್ದನಂತೆ. ಹೀಗಾಗಿ 2017-18ರಲ್ಲಿ ಎರೆಡು ವರ್ಷ ಸತತವಾಗಿ ಹೊತ್ತು ಕೊಂಡು ಶ್ರೀಶೈಲಕ್ಕೆ ನಡಿಗೆ ಮೂಲಕ (By Walk) ಹೋಗಿ, ತಾಯಿಯ ಆಸೆ ಈಡೇರಿಸಿದ್ದಾನೆ. ಈ ಮೂಲಕ ಆಧುನಿಕ ಶ್ರವಣಕುಮಾರ ಅನ್ನೋ ಬಿರುದು ಪಡೆದಿದ್ದಾನೆ..

ಪ್ರತಿವರ್ಷ ವೈರಲ್‌ ಆಗೋ ಪಾದಯಾತ್ರೆ ಪೋಟೊ..!

ಆಧುನಿಕ ಶ್ರವಣಕುಮಾರ ಅಣ್ಣಾರಾಯ ತಮ್ಮ ತಾಯಿ ಲೀಲಾಬಾಯಿಯನ್ನ ಹೆಗಲ ಮೇಲೆ ಹೊತ್ತು ಪಾದಯಾತ್ರೆ ಮಾಡಿದ್ದು ಮೂರು ವರ್ಷಗಳ ಹಿಂದೆ ಆದ್ರು, ಈಗಲೂ ತಾಯಿಯನ್ನ ಹೊತ್ತು ನಡೆದು ಸಾಗ್ತಿರೋ ಇವರ ಪೋಟೊ (Viral Photo) ಒಂದು ವೈರಲ್‌ ಆಗುತ್ತಲೆ ಇರುತ್ತೆ. ಕಳೆದ 4 ವರ್ಷಗಳಿಂದ ಹೋಳಿ ಹುಣ್ಣಿಮೆ ಬಳಿಕ ಈ ಪೋಟೊ ಪೇಸ್ಬುಕ್‌, ವಾಟ್ಸಾಪ್‌, ಇನ್ಸಟಾಗಳಲ್ಲಿ ವೈರಲ್‌ ಆಗುತ್ತೆ. ತಾಯಿಯನ್ನ ಹೊತ್ತುಕೊಂಡು ಪಾದಯಾತ್ರೆ ಹೊರಟ ಆಧುನಿಕ ಶ್ರವಣಕುಮಾರ ಅಣ್ಣಾರಾಯರಿಗೆ ಶುಭವಾಗಲಿ ಎನ್ನುವ ಪೋಸ್ಟ್‌ ಗಳು ಹರಿದಾಡುತ್ವೆ..

ಈಗಲು ಮಂಡ್ಯ, ರಾಯಚೂರುಗಳಿಂದ ಪೋನ್‌ ಕರೆ..!
ಅಣ್ಣಾರಾಯ ತಾಯಿಯನ್ನ ಹೆಗಲ ಮೇಲೆ ಹೊತ್ತು ಪಾದಯಾತ್ರೆ ಮಾಡಿದ್ದು 2017-18 ರಲ್ಲಾದ್ರು, ಈಗಲು ಪೇಸ್ಬುಕ್‌ (Facebook), ವಾಟ್ಸಾಪ್‌ (Whatsapp) ಗಳಲ್ಲಿ ವೈರಲ್‌ ಆಗುವ ಪೋಟೊ ಕಂಡು ಶ್ರೀಶೈಲ ಭಕ್ತರು ಹಲವು ಪೋನ್‌ ಕರೆಗಳನ್ನ ಮಾಡ್ತಾರೆ. ಪಾದಯಾತ್ರೆ ವೇಳೆ ಸಹಾಯ ಬೇಕಿದ್ರೆ ಕೇಳಿ ನೀವು ನಮ್ಮ ಊರಿಗೆ ತಾಯಿಯನ್ನ (Mother) ಕರೆದುಕೊಂಡು ಬನ್ನಿ ಎಂದು ರಾಯಚೂರು (Rayachuru) , ಮಂಡ್ಯದಿಂದಲು (Mandya) ಕಾಲ್‌ ಬರುತ್ವಂತೆ. ಆಗ ಅಣ್ಣಾರಾಯ ತಾಯಿ ತೀರಿಹೋಗಿ 4 ವರ್ಷ ಕಳೆದಿವೆ ಎಂದಾಗ ಸುಮ್ಮನಾಗ್ತಾರೆ. ಇನ್ನು ಕೆಲವರು ಅಣ್ಣಾರಾಯನನ್ನ ಸನ್ಮಾನಿಸಲು ಕೂಡ ಆಹ್ವಾನಿಸ್ತಿದ್ದಾರಂತೆ..!

ಶ್ರೀಶೈಲ ಜಗದ್ಗುರುಗಳಿಂದಲು ಪ್ರಶಂಸೆ, ಪ್ರಶಸ್ತಿ..!

ಅಣ್ಣಾರಾಯ ಮಾಡಿದ ಈ ಸಾಧನೆಯನ್ನ, ತಾಯಿಯ ಮೇಲಿನ ಭಕ್ತಿಯನ್ನ ಕಂಡ ಶ್ರೀಶೈಲ ಜಗದ್ಗುರುಗಳು ಕಾರ್ಯವನ್ನ ಪ್ರಶಂಸಿಸಿದ್ದಾರೆ. ಪಾದಯಾತ್ರೆ ಮೂಲಕ ಸಾಗಿದಾಗ ಶ್ರೀಶೈಲ ಕ್ಷೇತ್ರದಲ್ಲೆ ಸನ್ಮಾನಿಸಿ ಕಳುಹಿಸಿದ್ದಾರೆ. 2017ರಲ್ಲಿ ಮೊದಲ ಬಾರಿ ತಾಯಿಯನ್ನ ಹೊತ್ತು ಪಾದಯಾತ್ರೆ ಮಾಡಿ ವಾಪಾಸ್‌ ಬಂದಾಗ ತಡವಲಗ ಗುರು ರಾಚೋಟೇಶ್ವರ ಮಠದಲ್ಲಿ ಸ್ವಾಮೀಜಿಗಳು "ರಾಚೋಟೇಶ್ವರ ಸಿರಿ" ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ..

ಕಷ್ಟದಲ್ಲಿರೋ ಅಣ್ಣಾರಾಯ ಕುಟುಂಬ, ಸಹಾಯಕ್ಕಾಗಿ ಮೊರೆ..!

ಇನ್ನು ತಾಯಿಯ ಕನಸು ಈಡೇರಿಸುವ ಮೂಲಕ ಆಧುನಿಕ ಶ್ರವಣಕುಮಾರ ಎನ್ನುವ ಬಿರುದು ಪಡೆದ ಅಣ್ಣಾರಾಯ ಈಗಲು ಬಡತನದಲ್ಲೆ ಜೀವನ ನಡೆಸುತ್ತಿದ್ದಾನೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ (Asianet Suvarna News) ಪೋನ್‌ ಮೂಲಕ ಸಂಪರ್ಕಿಸಿದಾಗ ತಮ್ಮ ಸಂಕಷ್ಟಗಳನ್ನ ಅಣ್ಣಾರಾಯ ಹೊರಹಾಕಿದ್ದಾರೆ. ತಾಯಿ ತೀರಿಕೊಂಡ ಬಳಿಕ ತಡವಲಾಗ (Tadavalaga Village) ಊರನ್ನು ಸಹ ಅಣ್ಣಾರಾಯ ಬಿಟ್ಟಿದ್ದಾರೆ. ವಿಜಯಪುರ ನಗರದ (VIjayapur City) ಸೊಲ್ಲಾಪೂರ ರಸ್ತೆಯ ಬಳಿ ವಾಸವಿದ್ದಾರೆ. ನಿತ್ಯ ಕಟ್ಟಡಗಳಿಗೆ ನೀರು ಹೊಡೆಯೋ ಕೆಲಸ ಮಾಡ್ತಿದ್ದಾರೆ. ಊರಲ್ಲಿ 2 ಏಕರೆ ಜಮೀನಿದ್ದು, ಅದನ್ನ ಅಣ್ಣ ನೋಡಿಕೊಳ್ತಿದ್ದಾರಂತೆ. ಪತ್ನಿ ಕಮಲಾಬಾಯಿ ಬೇರೆಯವರ ಮನೆಯಲ್ಲಿ ಪಾತ್ರೆ ತಿಕ್ಕುವ ಕೆಲಸ ಮಾಡ್ತಾರೆ. ಇತ್ತ 18 ವರ್ಷದ ಶೋಭಾ ಅನ್ನೋ ಮಗಳಿದ್ದು 8ನೇ ತರಗತಿಗೆ ಶಾಲೆ ಬಿಟ್ಟಿದ್ದಾಳೆ. ಇನ್ನು 21 ವರ್ಷದ ಸಿದರಾಯ ಅನ್ನೋ ಮಗ ಇದ್ದು ಬಿಎ ಕೊನೆಯ ವರ್ಷದಲ್ಲಿ ಓದುತ್ತಿದ್ದಾನೆ. ನಮಗೆ ಸಹಾಯ ಬೇಕಿದ ಎನ್ತಿದ್ದಾರೆ ಅಣ್ಣಾರಾಯ..

ಅಂದು ಹೊಗಳಿಕೆ, ಇಂದು ಖ್ಯಾರೇ ಎನ್ತಿಲ್ಲ ರಾಜಕಾರಣಿಗಳು..!
2017ರಲ್ಲಿ ಅಣ್ಣಾರಾಯ ಕುದರಿ ತಾಯಿಯನ್ನ ಹೆಗಲ ಮೇಲೆ ಹೊತ್ತು ಪಾದಯಾತ್ರೆ ಮಾಡಿದಾಗ ಶ್ರೀಶೈಲದಲ್ಲೆ ಭೇಟಿಯಾದ ಹಲವು ರಾಜಕಾರಣಿಗಳು (Politician) ಧನ ಸಹಾಯ-ಸಹಕಾರ (help) ನೀಡುವ ಭರವಸೆಗಳನ್ನ ಕೊಟ್ಟಿದ್ದರು. ಊರಿಗೆ ವಾಪಾಸ್‌ ಬಂದಾಗಲು ಭೇಟಿಯಾಗಿ ನೂರೆಂಟು ಭರವಸೆ ನೀಡಿದ್ದರಂತೆ. ಆದ್ರೀಗ ಅದೇ ರಾಜಕಾರಣಿಗಳು ಎದುರು ಹೋದ್ರು ಖ್ಯಾರೆ ಎನ್ತಿಲ್ಲವಂತೆ. ಅಂದು ಸಹಾಯ ಮಾಡ್ತೀವಿ ಎಂದು ತಾವಾಗೀಯೆ ಹೇಳಿದ ರಾಜಕೀಯದವರು, ಮುಖಂಡರು ಕೈ ಎತ್ತಿದ್ದಾರಂತೆ. 2019ರಲ್ಲಿ ತಾಯಿ ಅನಾರೋಗ್ಯಗೊಂಡು ಹಾಸಿಗೆ ಹಿಡಿದಾಗಲು ಖ್ಯಾರೆ ಎಂದಿಲ್ಲ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಿ ಅಣ್ಣಾರಾಯ ಅಳಲು ತೋಡಿಕೊಂಡಿದ್ದಾನೆ..

click me!