ಧಾರವಾಡ SGSS HR Consultancy ವಂಚನೆ ಪ್ರಕರಣ, ಸಿ.ಐ.ಡಿ ತನಿಖೆಗೆ ಒತ್ತಾಯ

By Suvarna News  |  First Published Mar 24, 2022, 1:29 PM IST
  • ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಸಾವಿರಾರು ಅಮಾಯಕರಿಗೆ ನೂರಾರು ಕೋಟಿ ವಂಚನೆ ಪ್ರಕರಣ 
  • ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಸವರಾಜ ಕೊರವರ ನೇತೃತ್ವದಲ್ಲಿ ಪ್ರತಿಭಟನೆ 
  • ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಉದ್ಯೋಗ ಕೊಡಿಸುವುದಾಗಿ ವಂಚನೆ

 ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಮಾ.24): ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (national education policy) ಅನ್ವಯ ಕೇಂದ್ರ ಸರಕಾರದಲ್ಲಿ ನೌಕರಿ (Job) ಕೊಡಿಸುವುದಾಗಿ ಆಮೀಷ ಒಡ್ಡಿ ರಾಘವೇಂದ್ರ ಕಟ್ಟಿ ಎಸ್‌ಜಿಎಸ್‌ಎಸ್‌ ಹೆಚ್‌ಆರ್‌ ಕನ್ಸಲ್ಟೆನ್ಸಿ (SGSS HR Consultancy) ಮೂಲಕ ಸಾವಿರಾರು ಅಮಾಯಕರಿಗೆ ನಂಬಿಸಿ ನೂರಾರು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣವನ್ನು ಸಿಐಡಿ ತನಿಖೆಗೆ  ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಬುಧವಾರ ಧಾರವಾಡ (dharwad) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Tap to resize

Latest Videos

ನೌಕರಿ ಸಿಗದೆ ಹಲವು ತಿಂಗಳು ಪರದಾಡಿ ನಂತರ ಮರಳಿ ಹಣ ಕೇಳಿದರೆ ಅವರ ಮೇಲೆಯೇ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆ ದಾಖಲಿಸಿ ಹೆದರಿಸುವ ಕೆಲಸ ನಡೆದಿದೆ. ಹೀಗಾಗಿ ಸ್ಥಳೀಯ ಪೊಲೀಸರ ಮೇಲೆ ನಮಗೆ ಭರವಸೆ ಉಳಿದಿಲ್ಲ. ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಯಿತು.

ಈಗಾಗಲೇ ಮೂರುವರೆ ಲಕ್ಷ ಕಳೇದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಸುರೇಶ ತಂದೆ ಮಹಾದೇವಪ್ಪ ತಿಮ್ಮಾಪುರ ಹಾಗೂ ತಲಾ 7.5 ಲಕ್ಷ ಕಳೇದುಕೊಂಡ ಸಾಗರ ಶೀಳಿನ, ಮಲ್ಲಿಕಾರ್ಜುನ ಕೂಡಗಿ   ಹಾಗೂ ಶಿವರಾಜ ಅವಟಿ ಅವರು  ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಗಾದ ಅನ್ಯಾಯ ಮತ್ತೆ ಯಾರಿಗೂ ಆಗುವುದು ಬೇಡ ಎಂದು ಮನವಿ ಮಾಡಿದರು.

CSIR NAL RECRUITMENT 2022: ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಕೊಟ್ಟ ಹಣ ಮರಳಿ ಕೇಳಿದಕ್ಕೆ ನಮ್ಮ ಮೇಲೆಯೇ ಹಪ್ತಾ ವಸೂಲಿ, ಜೀವಬೆದರಿಕೆಯಂತಹ ಪ್ರಕರಣ ದಾಖಲಿಸುವ ಮೂಲಕ ನಮ್ಮೊಂದಿಗೆ ಚೆಲ್ಲಾಟವಾಡುತ್ತಿರುವ ರಾಘವೇಂದ್ರ ಕಟ್ಟಿ ವಿರುದ್ದ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಿ, ನಮಗೆ ಹಣವನ್ನು ಮರಳಿಸಿಕೊಡಬೇಕು ಎಂದರು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಈ ಕುರಿತು ಮಾ. 09 ರಂದು  ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಹಾಗೂ ಸಂಬಂಧಿಸಿದವರಿಗೆ ದೂರು ಸಲ್ಲಿಸಲಾಗಿದೆ. ಅಲ್ಲದೆ, ಈ ಬಗ್ಗೆ ಡಿಸಿಪಿ ಹಾಗೂ ಎ.ಸಿ.ಪಿ ಅವರ ಗಮನಕ್ಕೂ ತರಲಾಗಿದೆ. ಆದರೆ ಧಾರವಾಡದ ಉಪನಗರ ಪೊಲೀಸರು ಹಣ ಕಳೇದುಕೊಂಡವರ ವಿರುದ್ದವೇ  ಮಾ. 14ರಂದು ಹಪ್ತಾವಸೂಲಿ, ಜೀವ ಬೆದರಿಕೆಯಂತಹ ಗಂಭೀರ ಪ್ರಕರಣ ದಾಖಲಿಸುವ ಮೂಲಕ ಅಮಾಯಕರ ಬದುಕಿನೊಂದಿಗೆ ಚೆಲ್ಲಾಟವಾಡುವ ಯತ್ನ ಮಾಡಿದ್ದಾರೆ. ಹೀಗಾಗಿ ನಮಗೆ ಸ್ಥಳೀಯ ಪೊಲೀಸರ ಮೇಲೆ ಭರವಸೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯುಜಿ ತರಗತಿ CUET ಪರೀಕ್ಷೆ ಕಡ್ಡಾಯ

ಅಲ್ಲದೆ, ಹಣ ಕಳೆದುಕೊಂಡವರು ಮಾ. 16ರಂದು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಈವರೆಗೆ ಆರೋಪಿಯನ್ನು ಬಂಧಿಸದೆ,  ದಿನದೂಡುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಸರಿಸುಮಾರು 1600 ಅಭ್ಯರ್ಥಿಗಳು ವಂಚನೆಗೆ ಒಳಗಾಗಿದ್ದಾರೆ.  ಜೊತೆಗೆ ಹಲವು ಜಿಲ್ಲೆ ಹಾಗೂ ನೆರೆ ರಾಜ್ಯದಲ್ಲಿ ಇದರ ಫ್ರಾಂಚೈಸಿ ಪಡೆದು,ಅನೇಕರು ಹಣಕಳೆದುಕೊಂಡಿರುವ ಮಾಹಿತಿಯಿದೆ. ಹೀಗಾಗಿ ಈ ವಿಷಯದ ಬಗ್ಗೆ ಗಂಭೀರವಾಗಿ ಪರಿಶೀಲಿಸಿ, ಈ ಪ್ರಕರಣವನ್ನು ತಕ್ಷಣವೇ ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

click me!