Karnataka Election 2023: ಪಾರದರ್ಶಕ ಮತದಾನಕ್ಕೆ 4,500 ಮತಗಟ್ಟೆಯಲ್ಲಿ ಚಿತ್ರೀಕರಣ

Published : May 10, 2023, 10:47 AM IST
Karnataka Election 2023: ಪಾರದರ್ಶಕ ಮತದಾನಕ್ಕೆ 4,500 ಮತಗಟ್ಟೆಯಲ್ಲಿ ಚಿತ್ರೀಕರಣ

ಸಾರಾಂಶ

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು ಸೇರಿ ನಗರ ಜಿಲ್ಲೆ ವ್ಯಾಪ್ತಿಯ 4,500 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಆ ದೃಶ್ಯಾವಳಿಯಲ್ಲಿ ವೆಬ್‌ಸೈಟ್‌ ಅಥವಾ ಮತಗಟ್ಟೆಗಳ ಬಳಿಯಲ್ಲಿ ನೇರ ಪ್ರಸಾರವಾಗುವಂತೆ ಮಾಡಲು ಚುನಾವಣಾ ವಿಭಾಗ ನಿರ್ಧರಿಸಿದೆ. 

ಬೆಂಗಳೂರು(ಮೇ.10): ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯಲಿರುವ ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗ 4,500 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ (ಮತಗಟ್ಟೆಯ ಬಳಿ ವಿಡಿಯೋ ಚಿತ್ರೀಕರಣ) ಮಾಡಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 8,802 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಒಬ್ಬರೇ ಅಭ್ಯರ್ಥಿಗೆ ಶೇ.75 ಮತ ಚಲಾವಣೆಗೊಂಡಿರುವುದು, ಮತಗಟ್ಟೆಳ ಬಳಿ ಗಲಾಟೆ ನಡೆದಿರುವುದು ಸೇರಿದಂತೆ ಇನ್ನಿತರ ವಿಚಾರ ಗಮನಿಸಿ 2,200 ಕ್ಕೂ ಹೆಚ್ಚಿನ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಯಾವುದೇ ಗೊಂದಲವುಂಟಾಗದಂತೆ ನಡೆಸಲು ಕ್ರಮ ಕೈಗೊಂಡಿದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು ಸೇರಿ ನಗರ ಜಿಲ್ಲೆ ವ್ಯಾಪ್ತಿಯ 4,500 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಆ ದೃಶ್ಯಾವಳಿಯಲ್ಲಿ ವೆಬ್‌ಸೈಟ್‌ ಅಥವಾ ಮತಗಟ್ಟೆಗಳ ಬಳಿಯಲ್ಲಿ ನೇರ ಪ್ರಸಾರವಾಗುವಂತೆ ಮಾಡಲು ಚುನಾವಣಾ ವಿಭಾಗ ನಿರ್ಧರಿಸಿದೆ ಎಂದು ಬಿಬಿಎಂಪಿ ಚುನಾವಣಾ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೆಯಿಂದಲೇ ಮತಕ್ಕೆ ನೋಂದಣಿ ಮಾಡಿದ್ದ 33 ಮಂದಿ ಸಾವು: 2,282 ವೃದ್ಧರು, ವಿಶೇಷ ಚೇತನರಿಂದ ಮತ ಚಲಾವಣೆ

ಇವಿಎಂ ರಾರ‍ಯಂಡಮೈಸೇಷನ್‌ ಪೂರ್ಣ:

ಮತದಾನ ಪ್ರಕ್ರಿಯೆಗಾಗಿ ಗುಜರಾತ್‌ ಮತ್ತು ಆಂಧ್ರಪ್ರದೇಶದಲ್ಲಿನ ಚುನಾವಣೆಗಳಲ್ಲಿ ಬಳಸಲಾದ ಇವಿಎಂ, ವಿವಿ ಪ್ಯಾಟ್‌ ಯಂತ್ರಗಳನ್ನು ತರಿಸಲಾಗಿದೆ. ಈ ಇವಿಎಂಗÙ ಪರಿಶೀಲನೆ ಮತ್ತು ರಾರ‍ಯಂಡಮೈಸ್‌ ಮಾಡುವ ಕಾರ್ಯ ಸೋಮವಾರ ಪೂರ್ಣಗೊಳಿಸಲಾಗಿದೆ. ಅವುಗಳನ್ನು ಸದ್ಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲೂ ಇರುವ ಮಸ್ಟರಿಂಗ್‌ ಕೇಂದ್ರದಲ್ಲಿ ಇಡಲಾಗಿದ್ದು, ರಾಜಕೀಯ ಪ್ರಮುಖರ ಮುಂದೆ ಮಂಗಳವಾರ ಮತಗಟ್ಟೆಅಧಿಕಾರಿಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ:

ಮತಗಟ್ಟೆಗಳಿಗೆ ತೆರಳಲಿರುವ ಅಧಿಕಾರಿ, ಸಿಬ್ಬಂದಿಗೆ ಇವಿಎಂ, ವಿವಿ ಪ್ಯಾಟ್‌ ಬಳಕೆಗೆ ಸಂಬಂಧಿಸಿದಂತೆ ಇರುವ ಅನುಮಾನ, ಗೊಂದಲಗಳನ್ನು ಮಂಗಳವಾರ ಪರಿಹರಿಸಲು ಇವಿಎಂ ತಂತ್ರಜ್ಞರಿಂದ ಮಂಗಳವಾರ ವಿಶೇಷ ತರಬೇತಿ ನೀಡಲಾಗುತ್ತಿದೆ. ಇವಿಎಂ ಬಳಕೆ, ಅವುಗಳಲ್ಲಿ ದೋಷ ಕಂಡು ಬಂದರೆ ಏನು ಮಾಡಬೇಕು ಎಂಬುದು ಸೇರಿ ಇನ್ನಿತರ ಮಾಹಿತಿ, ತರಬೇತಿಯನ್ನು ಕೊಡಲಾಗುತ್ತಿದೆ.

ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಮತದಾನಕ್ಕೆ ಬೇಕಾಗುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವಿಎಂಗಳ ರಾರ‍ಯಂಡಮೈಸೇಷನ್‌ ಪೂರ್ಣಗೊಂಡಿದ್ದು, ಮಂಗಳವಾರ ಮತಗಟ್ಟೆಸಿಬ್ಬಂದಿ, ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಜತೆಗೆ ನಿರ್ದಿಷ್ಟ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತದ ಅಂತ ಬೆಂಗಳೂರು ನಗರ ಜಿಲ್ಲೆ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.  

PREV
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ