
ಚಿತ್ರದುರ್ಗ(ಮೇ.10): ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್ ಅವರ ಕ್ಯಾದಿಗೆರೆ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳು ಮಂಗಳವಾರ ರಾತ್ರಿ ದಾಳಿ ನಡೆಸಿದ್ದಾರೆ.
ಚುನಾವಣೆಯಲ್ಲಿ ಹಂಚಲು ಹಣ ಸಂಗ್ರಹಿಸಿಡಲಾಗಿದೆ ಎಂಬ ಸುಳಿವನ್ನು ಆಧರಿಸಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ದಾಳಿ ವೇಳೆ 50 ಲಕ್ಷ ರೂ. ನಗದು ಸಿಕ್ಕಿದೆ. ಕವರ್‌ನಲ್ಲಿ ಹಣವನ್ನ ಇಡಲಾಗಿತ್ತು. ಒಟ್ಟು 58,83,000 ರೂ. ಹಣವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ 239 ಲೀಟರ್ ಬೀಯರ್ ಹಾಗೂ 9 ಲೀಟರ್ ಐಎಂಎಲ್ ಪತ್ತೆಯಾಗಿದೆ.
ರಾತ್ರಿ 8 ರ ಸುಮಾರಿಗೆ ಮನೆ ಪ್ರವೇಶಿಸಿದ ಅಧಿಕಾರಿಗಳು 11 ಗಂಟೆಯವರೆಗೆ ಶೋಧ ನಡೆಸಿದ್ದಾರೆ.