ಗದಗ: ಆಸರೆ ಮನೆ ಹಂಚಿಕೆಯಲ್ಲಿ ಅಕ್ರಮ ತನಿಖೆಗೆ ಆಗ್ರಹಿಸಿ ಸಂತ್ರಸ್ತರ ಧರಣಿ

By Kannadaprabha News  |  First Published Mar 3, 2023, 10:38 AM IST

ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರದ ವೇಳೆ ಆಸರೆ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಅಕ್ರಮ ಎಸಗಿದವರ ಮೇಲೆ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಇಲ್ಲಿಗೆ ಸಮೀಪದ ಅಮರಗೋಳ ಗ್ರಾಮ ಪಂಚಾಯಿತಿ ಎದುರು ಸ್ಥಳಾಂತರಗೊಂಡ ಹೊಳೆಹಡಗಲಿ ಗ್ರಾಮಸ್ಥರು ಗುರುವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದರು.


ಹೊಳೆಆಲೂರ (ಮಾ.3) : ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರದ ವೇಳೆ ಆಸರೆ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಅಕ್ರಮ ಎಸಗಿದವರ ಮೇಲೆ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಇಲ್ಲಿಗೆ ಸಮೀಪದ ಅಮರಗೋಳ ಗ್ರಾಮ ಪಂಚಾಯಿತಿ ಎದುರು ಸ್ಥಳಾಂತರಗೊಂಡ ಹೊಳೆಹಡಗಲಿ ಗ್ರಾಮಸ್ಥರು ಗುರುವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದರು.

ಹಳೆಯ ಊರಿನಲ್ಲಿ ಇಂದಿಗೂ ಮನೆ ಕಂದಾಯ ಕಟ್ಟುತ್ತಿರುವ ಅನೇಕ ಗ್ರಾಮಸ್ಥರಿಗೆ ಮನೆ ಹಂಚಿಕೆ ಮಾಡದೆ ಖಾತೆಯಲ್ಲಿ ಹೆಸರೆ ಇಲ್ಲದವರಿಗೆ ಮನೆ ಹಂಚಿಕೆ ಮಾಡಲಾಗಿದೆ. ಮನೆ ಹಂಚಿಕೆ ಸಂಬಂಧಿಸಿದ ಯಾವುದೇ ಠರಾವುಗಳು ಗ್ರಾಮ ಪಂಚಾಯ್ತಿಯಲ್ಲಿ ಲಭ್ಯವಿರುವುದಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

Tap to resize

Latest Videos

undefined

ಗದಗ: ಭಾರತೀಯ ಚಿಂತನೆಗಳು ವಿಶ್ವಕ್ಕೆ ಮಾದ​ರಿ- ಭಯ್ಯಾಜಿ ಜೋಶಿ

2008ರಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಮಲಪ್ರಭೆಯ ಪ್ರವಾಹಕ್ಕೆ ತುತ್ತಾಗಿ ಗ್ರಾಮಗಳನ್ನು ಸ್ಥಳಾಂತರಿಸಿ ಅಂದಿನ ಸರ್ಕಾರ ನವ ಗ್ರಾಮಗಳನ್ನು ನಿರ್ಮಿಸಿದ್ದು, ಮನೆ ಹಂಚಿಕೆ ಮಾಡುವಲ್ಲಿ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ತಮಗೆ ಬೇಕಾದವರಿಗೆ ಹೆಚ್ಚೆಚ್ಚು ಮನೆಗಳನ್ನು ವಿತರಿಸಿದ್ದು, ಇನ್ನೂ ಇಪ್ಪತ್ತರಿಂದ ಮೂವತ್ತು ಕುಟುಂಬಗಳು ಮನೆ ಸಿಗದೆ ಕಂಗಾಲಾಗಿದ್ದಾರೆ. ಈ ಕುರಿತು ಈಗಾಗಲೆ ಜಿಲ್ಲಾಧಿಕಾರಿ ಸೇರಿದಂತೆ ಲೋಕಾಯುಕ್ತರಿಗೂ ದೂರು ನೀಡಿರುವ ಗ್ರಾಮಸ್ಥರು ಕೊನೆಯದಾಗಿ ಅಕ್ರಮದ ತನಿಖೆ ನಡೆದು ನಿರಾಶ್ರಿತರಿಗೆ ಪರಿಹಾರ ಸಿಗುವವರೆಗೆ ಅನಿರ್ದಿಷ್ಟಾವಧಿಯ ಧರಣಿಗೆ ಮುಂದಾಗಿದ್ದಾರೆ.

ಧರಣಿಯಲ್ಲಿ ಗ್ರಾಮಸ್ಥರಾದ ಎಸ್‌.ಆರ್‌. ಕುಲಕರ್ಣಿ, ಎಫ್‌.ಆರ್‌. ಕೆಂಚನಗೌಡ್ರ, ಎಂ.ಜಿ. ಮುದಿಯಪ್ಪನವರ, ಯು.ಎಂ. ಹಡಪದ, ಬಿ.ಬಿ. ಮಕ್ಕಣ್ಣವರ, ಆರ್‌. ಎಂ. ಮುದಿಯಪ್ಪನವರ, ಎಂ.ಕೆ. ಭೂಸನೂರಮಠ, ಎಸ್‌.ಬಿ. ಬಡಿಗೇರ, ಎಂ.ವಿ. ಬಡಿಗೇರ, ಎಸ್‌.ಎಸ್‌. ಮುದಿಯಪ್ಪನವರ, ಪಿ.ಎಸ್‌. ಮುದಿಯಪ್ಪನವರ, ಎಸ್‌. ಆರ್‌. ಹಿರೇಮಠ, ಬಿ.ಪಿ. ಪಾಟೀಲ, ಎ.ಬಿ. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Gadag: ದಶಕವಾ​ದ್ರೂ ಪ್ರವಾಹ ಸಂತ್ರ​ಸ್ತ​ರಿಗೆ ಹಂಚಿಕೆ​ಯಾ​ಗದ ಆಸರೆ ಮನೆ​ಗ​ಳು..!

ಪ್ರವಾಹ ಬಂದು ನೀರು ನುಗ್ಗಿ ನಡು ನೀರಾಗ ನಿಂತ ಜೀವನಾ ಮಾಡೀವಿ, ಇವತ್ತಿನವರೆಗೂ ಮನೆ ಹಂಚಿಕಿಯೊಳಗ ನಡೆದ ಅಕ್ರಮನಾ ತನಿಖೆ ಮಾಡವಲ್ರು ಹೇಳಾಕ ಮಾತ್ರ ನಾವು ಪ್ರಜಾಪ್ರಭುತ್ವದಾಗ ಅದೀವಿ ಹಂಗಂದ್ರ ಏನು ಅನ್ನುದನ್ನ ಅಧಿಕಾರಿಗಳು ಮರೆಸಿ ಬಿಟ್ಟಾರ.

ನಿಂಗನಗೌಡ ತೋಟನಗೌಡ್ರ( ಗ್ರಾಮಸ್ಥರು)

click me!