ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ನೀಡಲು ಗೋವಾ ನಕಾರ; ಭರವಸೆ ನೀಡಿ ಉಲ್ಟಾ ಹೊಡೆದ ಸಿಎಂ

By Kannadaprabha News  |  First Published Mar 3, 2023, 9:29 AM IST

ಗೋವಾ ವಿಧಾನಸಭಾ ಚುನಾವಣೆ ವೇಳೆ ಕನ್ನಡಿಗರ ವೋಟ್‌ಗಾಗಿ ‘ಕನ್ನಡ ಭವನ’ ನಿರ್ಮಾಣಕ್ಕೆ ಉಚಿತ ಭೂಮಿ ನೀಡುವುದಾಗಿ ಭರವಸೆ ನೀಡಿದ್ದ ಸ್ಥಳೀಯ ಬಿಜೆಪಿ ಮುಖಂಡರು, ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ವರಸೆ ಬದಲಿಸಿದ್ದು, ಇದೀಗ ಗೋವಾ ಸರ್ಕಾರ ಭೂಮಿ ನೀಡಲು ನಿರಾಕರಿಸಿದೆ.


ವಾಸ್ಕೋ (ಮಾ.3) : ಗೋವಾ ವಿಧಾನಸಭಾ ಚುನಾವಣೆ ವೇಳೆ ಕನ್ನಡಿಗರ ವೋಟ್‌ಗಾಗಿ ‘ಕನ್ನಡ ಭವನ’ ನಿರ್ಮಾಣಕ್ಕೆ ಉಚಿತ ಭೂಮಿ ನೀಡುವುದಾಗಿ ಭರವಸೆ ನೀಡಿದ್ದ ಸ್ಥಳೀಯ ಬಿಜೆಪಿ ಮುಖಂಡರು, ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ವರಸೆ ಬದಲಿಸಿದ್ದು, ಇದೀಗ ಗೋವಾ ಸರ್ಕಾರ(Goa government) ಭೂಮಿ ನೀಡಲು ನಿರಾಕರಿಸಿದೆ.

ಗೋವಾದ ನಿರಾಶ್ರಿತ ಕನ್ನಡಿಗರಿಗೆ ಜಾಗ ಖರೀದಿ: ಸೋಮಶೇಖರ್‌

Latest Videos

undefined

ಸುಮಾರು ಎರಡು ದಶಕಗಳಿಂದ ‘ಕನ್ನಡ ಭವನ’(Kannada bhavana)ಕ್ಕಾಗಿ ಕನಸು ಕಾನುತ್ತ ಬಂದ ಗೋವಾ ಕನ್ನಡಿಗರಲ್ಲಿ ಸರ್ಕಾರದ ಈ ನಿರ್ಧಾರದಿಂದ ಭಾರೀ ನಿರಾಸೆಯಾಗಿದೆ.

ಗೋವಾ ಬಿಜೆಪಿ(Goa BJP) ಮುಖಂಡರ ಮಾತು ನಂಬಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಧನಸಹಾಯ ಘೋಷಣೆ ಮಾಡಿರುವ ಕರ್ನಾಟಕ ಸರ್ಕಾರ(Karnataka governament) ಈಗ ಅನಿವಾರ್ಯವಾಗಿ ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’(Karnataka Border Area Development Authority)ದ ಮೂಲಕ ಭವನ ನಿರ್ಮಾಣಕ್ಕಾಗಿ ಖಾಸಗೀಯವರ ಜಮೀನು ಖರೀದಿಗೆ ಮುಂದಾಗಿದೆ.

ಕನ್ನಡಿಗರ ಓಲೈಕೆಗಾಗಿ:

ಈ ಕನ್ನಡಿಗರ ಓಲೈಕೆಗಾಗಿ ಮಾಜಿ ಸಂಸದ ಪ್ರಭಾಕರ ಕೋರೆ(Prabhakar kore) ಸೇರಿದಂತೆ ಹಲವರು ಈ ಭರವಸೆ ನೀಡುತ್ತ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಗೊವಾ ಬಿಜೆಪಿ ಉಸ್ತುವಾರಿಯಾಗಿದ್ದ ಸಿ.ಟಿ.ರವಿ(CT Ravi) ಕೂಡ ಭರವಸೆ ನೀಡಿದ್ದರು.

ಆದರೆ, ಇತ್ತೀಚೆಗೆ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ(Dr C Somashekahar) ಅವರು ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ನೀಡುವಂತೆ ಮಾಡಿದ ಮನವಿಗೆ ಸ್ವತಃ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ(Pramod Sawant) ‘ಸರ್ಕಾರಿ ಜಮೀನು ಲಭ್ಯವಿಲ್ಲ, ಭವನಕ್ಕೆ ಜಾಗ ನೀಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಗೋವಾದಲ್ಲಿ ಕನ್ನಡಿಗರ ದಾದಾಗಿರಿ ಪ್ರದರ್ಶನ: ತುಕಾರಾಂ ಪರಬ್ ವಿವಾದಿತ ಹೇಳಿಕೆ

ಚುನಾವಣೆಗಳಲ್ಲಿ ಕನ್ನಡಿಗರ ಮತಕ್ಕಾಗಿ ಕರ್ನಾಟಕ ಹಾಗೂ ಗೋವಾ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದಿಂದಲೇ ಕನ್ನಡ ಭವನ ನಿರ್ಮಿಸುವುದಾಗಿ ಭರವಸೆ ನೀಡುತ್ತ ಬಂದರು. ಇದೀಗ ಕರ್ನಾಟಕ ಸರ್ಕಾರ 10 ಕೋಟಿ ಅನುದಾನ ನೀಡಿದ್ದರೂ ಗೋವಾ ಸರ್ಕಾರ ಭವನಕ್ಕೆ ಭೂಮಿ ನೀಡಲು ನಿರಾಕರಿಸಿರುವುದು ಬೇಸರ ತರಿಸಿದೆ.

-ಶಿವಾನಂದ ಬಿಂಗಿ, ಗೋವಾ ಕನ್ನಡಿಗರ ಮುಖಂಡ

click me!