Uttar Kannada: ತೆಂಗಿನ ಮರದ ಪೊಟರೆಯೊಳಗೆ ಸಿಲುಕಿಕೊಂಡಿದ್ದ ಬೃಹತ್ ನಾಗರ ಹಾವಿನ ರಕ್ಷಣೆ

Published : Apr 15, 2026, 11:01 AM IST
Snake

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ. ಅಂಕೋಲಾದಲ್ಲಿ ತೆಂಗಿನ ಮರದ ಪೊಟರೆಯಲ್ಲಿ ಸಿಲುಕಿದ್ದ ನಾಗರ ಹಾವನ್ನು ರಕ್ಷಿಸಲಾಗಿದ್ದರೆ, ಕುಮಟಾದಲ್ಲಿ ಸಣ್ಣ ಹಾವನ್ನು ನುಂಗಿದ್ದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.

ಕಾರವಾರ: ತೆಂಗಿನ ಮರದ ಪೊಟರೆಯೊಳಗೆ ಸಿಲುಕಿಕೊಂಡಿದ್ದ ಬೃಹತ್ ನಾಗರ ಹಾವನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ನಡೆದಿದೆ. ಸೀಳು ಬಿಟ್ಟ ತೆಂಗಿನ ಮರದೊಳಗೆ ಅವಿತು ಕೊಂಡು ಹಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗರಹಾವನ್ನು ನೋಡಿದ ತೋಟದ ಮಾಲಿಕರು ಹೌ ಹಾರಿದ್ದಾರೆ. ನಾಗರ ಹಾವಿನ ಭಯಕ್ಕೆ ಕೂಡಲೇ ಉರಗ ತಜ್ಞ ಗಗನ್ ನಾಯ್ಕ್ ಅವರಿಗೆ ತಿಳಿಸಿದ್ದು , ಸ್ಥಳಕ್ಕಾಗಮಿಸಿದ ಗಗನ್ ನಾಯ್ಕ್ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಸಣ್ಣ ಸರ್ಪ ನುಂಗಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ಕುಮಟಾ: ಸಣ್ಣ ಸರ್ಪವನ್ನು ನುಂಗಿದ್ದ ಬರೋಬ್ಬರಿ 15 ಅಡಿ ಉದ್ದ, 11.3 ಕೇಜಿ ತೂಕದ ಬೃಹತ್ ಕಾಳಿಂಗ ಸರ್ಪವನ್ನು ಉರಗ ತಜ್ಞ ರಕ್ಷಿಸಿ ಸುರಕ್ಷಿತವಾಗಿ ಸ್ಥಳಾಂತರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಯಲವಳ್ಳಿಯಲ್ಲಿ ನಡೆದಿದೆ. ಯಲವಳ್ಳಿ ನಿವಾಸಿ ಲಕ್ಷ್ಮೀನಾರಾಯಣ ಹೆಗಡೆ ಅವರ ಮನೆಯ ತೋಟದಲ್ಲಿ 5 ದಿನಗಳ ಹಿಂದೆ 2 ಕಾಳಿಂಗಗಳು ಸೆಣಸಾಡುತ್ತಿದ್ದವು. ನಂತರ ದೊಡ್ಡ ಕಾಳಿಂಗ ಸರ್ಪವು ಸಣ್ಣ ಕಾಳಿಂಗ ಸರ್ಪವನ್ನು ನುಂಗಿತ್ತು. ಬಳಿಕ ಸರ್ಪವು ತೋಟ ಬಿಟ್ಟು ಕದಲದೇ ಅಲ್ಲಿಯೇ ಠಿಕಾಣಿ ಹೂಡಿದಿತ್ತು. ಈ ಬಗ್ಗೆ ಮಾಹಿತಿ ಪಡೆದ ಉರಗ ತಜ್ಞ ಪವನ ನಾಯ್ಕ ಎನ್ನುವವರು, ಹಾವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಬೆಳ್ತಂಗಡಿ: ಅಡಕೆ ತೋಟದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಸಂರಕ್ಷಣೆ ಮಾಡಿ, ಕಾಡಿಗೆ ಬಿಟ್ಟ ಘಟನೆ ಭಾನುವಾರ ಅಳದಂಗಡಿಯಲ್ಲಿ ನಡೆದಿದೆ.

ಇದನ್ನೂ ಓದಿ: ಮಧುಗಿರಿ ಬೆಟ್ಟದಲ್ಲಿ ನೀಳ ದೇಹ, ಮೊನಚಾದ ತಲೆಯುಳ್ಳ 'ನಾಗಾರ್ಜುನ ಸಾಗರ ರೇಸರ್' ಹಾವು ಪತ್ತೆ

ಪಿಲ್ಯ ಸನಿಹದ ನಾವರ ಗ್ರಾಮದ ರಾಜಪಾದೆ ವೀರೇಂದ್ರ ಜೈನ್ ಎಂಬುವರ ತೋಟದಲ್ಲಿದ್ದ ಸುಮಾರು 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಮನೆಯವರು ತಕ್ಷಣ ಲಾಯಿಲದ ಉರಗ ಸಂರಕ್ಷಕ ಸ್ನೇಕ್ ಅಶೋಕ್ ಕುಮಾರ್ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಸ್ನೇಕ್ ಅಶೋಕ್ ಕುಮಾರ್ ಸಾಹಸಮಯವಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು, ಸಂರಕ್ಷಿಸಿ , ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ : ಹಾವಿನ ಮೊಟ್ಟೆ ಬೇಯಿಸಿ ತಿನ್ನಬಹುದೇ? ಅವುಗಳ ವಿಷಕಾರಿ ಅಲ್ಲವಾ? ಇಲ್ಲಿದೆ ಸತ್ಯ

PREV
Read more Articles on
click me!

Recommended Stories

ಫೋನ್ ಇಲ್ಲ, ಎಟಿಎಂ ಬಳಸುತ್ತಿಲ್ಲ: 100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ
Vijayapur Horror: 'ನಿನ್ನ ಮಗ ನಿನ್ನ ಹೋಲಿಕೆ ಇಲ್ಲ' ಎಂದು ಸ್ನೇಹಿತರು ಛೇಡಿಸಿದ್ದಕ್ಕೆ ಪತ್ನಿ ಮೇಲೆ ಅನುಮಾನಗೊಂಡು ಮಗನನ್ನು ಕೊಂದೇ ಬಿಟ್ಟ!