Channapatna: ರೈಲ್ವೆ ಹಳಿ ಮೇಲೆ ಸಿಲಿಂಡರ್, ಸ್ವವ್ ಪತ್ತೆ: ರೈಲು ಸಂಚಾರದಲ್ಲಿ ವ್ಯತ್ಯಯ

Published : Apr 15, 2026, 08:45 AM IST
indian railways

ಸಾರಾಂಶ

ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಬಟ್ಟೆಗಳು ಕಾಣಿಸುವ ಮೂಲಕ ಕೆಲಕಾಲ ಆತಂಕ ಮೂಡಿಸಿದ್ದ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚನ್ನಪಟ್ಟಣ: ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಬಟ್ಟೆಗಳು ಕಾಣಿಸುವ ಮೂಲಕ ಕೆಲಕಾಲ ಆತಂಕ ಮೂಡಿಸಿದ್ದ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ಬೆಳಗಿನ ಜಾವ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಂಗಳ ಎಕ್ಸ್‌ಪ್ರೆಸ್ ರೈಲುಗಾಡಿ ಚಾಲಕ ರೈಲ್ವೆ ಹಳಿಯ ಮೇಲೆ ಅನುಮಾನಾಸ್ಪದ ವಸ್ತುವನ್ನು ಕಂಡು ರೈಲುಗಾಡಿಯನ್ನು ನಿಲ್ಲಿಸಿ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ರೈಲು ಹಳಿಯ ಮೇಲೆ ಗ್ಯಾಸ್ ಸಿಲಿಂಡರ್, ಒಂದು ಗ್ಯಾಸ್ ಸ್ಟೌವ್ ಹಾಗೂ ಬಟ್ಟೆಗಳು ಕಂಡು ಬಂದಿದೆ.

ಯಾರೋ ಮತ್ತೊಂದು ರೈಲಿನಲ್ಲಿ ಈ ಪದಾರ್ಥಗಳನ್ನು ಸಾಗಿಸುವಾಗ ಆಕಸ್ಮಾತ್ ಕೆಳಗೆ ಬಿದ್ದು ರೈಲು ಗಾಡಿಯೊಂದಕ್ಕೆ ಸಿಲುಕಿ ಸಾಕಷ್ಟು ದೂರ ಎಳೆದುಕೊಂಡು ಬಂದಿದೆ ಎಂದು ಶಂಕಿಸಲಾಗಿದೆ. ಹಾನಿಯಾದ ಸ್ಥಿತಿಯಲ್ಲಿದ್ದ ವಸ್ತುಗಳು ಪತ್ತೆಯಾಗಿವೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದಾಗಿ 30 ನಿಮಿಷ ಮಂಗಳ ಎಕ್ಸ್‌ಪ್ರೆಸ್ ರೈಲುಗಾಡಿಯ ಸಂಚಾರದಲ್ಲಿ ವ್ಯತ್ಯವಾಗಿದೆ.

ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿಸ್ತರಣೆಗೆ ಒಂದು ವರ್ಷ

ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿಸ್ತರಣೆಗೊಂಡು ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ನಿತ್ಯ ರೈಲು ಪ್ರಯಾಣಕರ ಬಳಗ ಸಿಹಿ ಹಂಚಿ ಸಂಭ್ರಮಿಸಿದರು. ರೈಲು ಬೋಗಿ ಸಂಖ್ಯೆ ಎರಡರಲ್ಲಿ ಪ್ರಯಾಣಿಸುವ ಗೆಳೆಯರ ಬಳಗದವರು ವಿಶೇಷ ಸಂಭ್ರಮಾಚರಣೆ ಏರ್ಪಡಿಸಿ, ಎಲ್ಲ ಸಹ ಪ್ರಯಾಣಿಕರೊಂದಿಗೆ ಸಂಭ್ರಮಿಸಿದರು. ಬಂಟ್ವಾಳ ರೈಲ್ವೆ ನಿಲ್ದಾಣದಿಂದ ಆರಂಭಗೊಂಡ ಈ ಸಂಭ್ರಮಾಚರಣೆಯಲ್ಲಿ ರೈಲಿನ ಐದೂ ಭೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರಿಗೂ ಸಿಹಿ ತಿಂಡಿ ವಿತರಿಸಿ ಸಂತೋಷ ಹಂಚಿದರು.

ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿನ ವಿಸ್ತರಣೆಯು ಈ ಮಾರ್ಗದ ಸಾವಿರಾರು ನಿತ್ಯ ಪ್ರಯಾಣಿಕರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಮಂಗಳೂರಿನಿಂದ ಸುಬ್ರಹ್ಮಣ್ಯದವರೆಗಿನ ಈ ರೈಲು ಸೇವೆ ಕಾರ್ಮಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ಅನುಕೂಲಕರ ಮತ್ತು ಕಡಿಮೆ ವೆಚ್ಚದ ಸಾರಿಗೆ ಸೌಲಭ್ಯವಾಗಿ ಮಾರ್ಪಟ್ಟಿದೆ. ಕಳೆದ ಒಂದು ವರ್ಷದಲ್ಲಿ ಈ ರೈಲು ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿ ರೂಪುಗೊಂಡಿದೆ. ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಾ ಸಾಗಿದೆ.

ಹುಬ್ಬಳ್ಳಿ - ಅಲಿಪುರ್ ದ್ವಾರ್ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

ಹುಬ್ಬಳ್ಳಿ: ಬೇಸಿಗೆಯ ರಜಾ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಿಲ್ದಾಣಗಳ ನಡುವೆ ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಕಾರ್ಯಾಚರಣೆ ಮಾಡಲಾಗುವುದು.

ಇದನ್ನೂ ಓದಿ: NWKRTC: ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ

ರೈಲು ಸಂಖ್ಯೆ 07323 ಹುಬ್ಬಳ್ಳಿ- ಅಲಿಪುರ್ ದ್ವಾರ್ ವಿಶೇಷ ಎಕ್ಸ್ ಪ್ರೆಸ್ ರೈಲು ಏ. 15ರಂದು ರಾತ್ರಿ 11.15ಕ್ಕೆ ಹುಬ್ಬಳ್ಳಿಯಿಂದ ಹೊರಟು ಶನಿವಾರ ಮಧ್ಯಾಹ್ನ 1:50ಕ್ಕೆ ಅಲಿಪುರ್ ದ್ವಾರ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 07324 ಅಲಿಪುರ್ ದ್ವಾರ್- ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಏ. 19ರ ಸಂಜೆ 4:25ಕ್ಕೆ ಅಲಿಪುರ್ ದ್ವಾರ್‌ನಿಂದ ಹೊರಟು, ಬುಧವಾರ ಬೆಳಗ್ಗೆ 9.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವ ಮಾರ್ಗ ಅಂತಿಮ

 

 

PREV
Read more Articles on
click me!

Recommended Stories

ಜಮೀರ್ ನಮಗ್ಯಾಕೆ ಫಂಡಿಂಗ್ ಮಾಡ್ತಾನೆ?: ಎಸ್‌ಡಿಪಿಐ ರಾಜ್ಯಾಧ್ಯಕ್ಷರ ಅಬ್ದುಲ್‌ ಮಜೀದ್ ಪ್ರಶ್ನೆ
ಆಟೋ ಚಾಲಕರಿಗೆ ಉಚಿತ ಗ್ಯಾಸ್‌ ಕೂಪನ್, ಆಹಾರ ಕಿಟ್‌ ವಿತರಣೆ