ಮೈಸೂರು (ಮೇ.17): ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವಾಗಲೇ ಕೊರೋನಾ ಸೋಂಕು ಉಲ್ಬಣಗೊಂಡಿದೆ. ಕಳೆದೊಂದು ವರ್ಷದಿಂದ ಯಾವುದೇ ಅಭಿವೃದ್ದಿ ಕೆಲಸ ಅಗಿಲ್ಲ. ಆದ್ದರಿಂದ ಜನರ ಸಮಸ್ಯೆ ಪರಿಹಾರಕ್ಕಾಗಿ ಎಲ್ಲಾ ಶಾಸಕರು ವಿಧಾನಪರಿಷತ್ ಸದಸ್ಯರ ಒಂದು ವರ್ಷದ ವೇತನ ಬಳಸಿಕೊಳ್ಳಿ ಎಂದು ಸಾ ರಾ ಮಹೇಸ್ ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಲಹೆ ನೀಡಿದರು.
ಈಗಾಗಲೇ ಕೊರೋನಾ 3ನೆ ಅಲೆ ಅರಂಭವಾಗಿದೆ. ಸೋಂಕು ನಿಯಂತ್ರಿಸುವಲ್ಲಿ ಮೈಸೂರು ಜಿಲ್ಲಾಡಳಿತ ವಿಫಲವಾಗಿದೆ. ರೋಗಿಗಳ ತಪಾಸಣೆ ನಡೆಸುತ್ತಿಲ್ಲ. ವೆಂಟಿಲೆಟರ್‌ನಲ್ಲಿ ರೋಗಿಗಳು ಕಾಯುತ್ತಿರುವುದಾಗಿ ಜಿಲ್ಲಾಡಳಿತವೇ ಹೇಳಿದೆ ಎಂದು ಸಾ ರಾ ಮಹೇಶ್ ಜಿಲ್ಲಾಡಳಿತರ ವಿರುದ್ಧ ಅಸಮಾಧಾನ ಹೊರಹಾಕಿದರು.
ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ?: ಡಿಸಿ ರೋಹಿಣಿಗೆ ಜೆಡಿಎಸ್ ಶಾಸಕ ಪ್ರಶ್ನೆಗಳ ಸುರಿಮಳೆ..
ಮನೆಯಲ್ಲಿ ಐಸೋಲೇಟ್ ಆಗಿರುವಾಗಿರುವವರಿಗೆ ಸರಿಯಾಗಿ ಔಷಧ ಪೂರೈಕೆ ಆಗುತ್ತಿಲ್ಲ. ಹಣಕೊಟ್ಟು ಔಷಧ ಖರೀದಿಸಲು ಆಗುತ್ತಿಲ್ಲ. ನೀವು ವಿಡಿಯೋ ಕಾನ್ಫರೆನ್ಸ್ ಮಾಡಿ ಎನು ಪ್ರಯೋಜನ ಎಂದು ಪ್ರಶ್ನಿಸಿದರು.
ನಮ್ಮ ಕ್ಷೇತ್ರದಲ್ಲಿ ನಮಗೆ ಜನ ಮುಖ್ಯ. ಕೆಲ ಸಂಘ ಸಂಸ್ಥೆಯ ಸಹಕಾರ ಪಡೆದು ಔಷಧ ಕೊಡುತ್ತಿದ್ದೇವೆ. ನಮ್ಮ ವ್ಯಾಪ್ತಿಯ ಕೊರೋನಾ ನಿಯಂತ್ರಣಕ್ಕೆ ಯಾವುದೇ ಗುರಿ ನಿಗದಿಪಡಿಸಿಲ್ಲ ಎಂದು ಅವರು ದೂರಿದರು.