* ಹೃದಯಘಾತದಿಂದ ಆಶ್ರಮದಲ್ಲಿ ಮೃತಪಟ್ಟಿದ್ದ ಅನಾಥೆ ವೃದ್ಧೆ
* ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ಘಟನೆ
* ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ತೋರಿದ ಷಫೀವುಲ್ಲಾ
ಕೊಟ್ಟೂರು(ಮೇ.17): ಸಾವಿಗೀಡಾದವರ ಶವಸಂಸ್ಕಾರಕ್ಕೆ ಸಂಬಂಧಿಕರೇ ಹೋಗದಂತ ವಾತಾವರಣ ನಿರ್ಮಾಣವಾಗಿರುವ ಕೊರೋನಾ ಭೀತಿಯ ಈ ಸಂದರ್ಭದಲ್ಲಿ ಕೊಟ್ಟೂರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಷಫೀವುಲ್ಲಾ, ಹಸಿರು ಹೊನಲು ತಂಡದ ಮುಂದಾಳು ಶಿಕ್ಷಕ ನಾಗರಾಜ್ ಬಂಜಾರ್, ಪೌರ ಕಾರ್ಮಿಕರೊಂದಿಗೆ ಅನಾಥ ವೃದ್ಧೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ತೋರಿದ್ದಾರೆ.
ಪಟ್ಟಣದ ಉತ್ತಂಗಿ ಕೊಟ್ರಸ್ವಾಮಿ ರುದ್ರಮ್ಮ ಅನಾಥಶ್ರಮದಲ್ಲಿ ಆಸರೆ ಪಡೆದಿದ್ದ ಸಂಡೂರು ಮೂಲದ ಸುಮಂಗಲಮ್ಮ ಎಂಬ ವೃದ್ಧೆ ಹೃದಯಘಾತದಿಂದ ಆಶ್ರಮದಲ್ಲಿ ಮೃತಪಟ್ಟರು. ಸುಮಂಗಲಮ್ಮ ಸಂಬಂಧಿಕರಿಗೆ ಆಶ್ರಮದ ಮುಖ್ಯಸ್ಥೆ ರುದ್ರಮ್ಮ ವಿಷಯ ತಿಳಿಸಿ ಮೃತ ದೇಹವನ್ನು ಕೊಂಡ್ಯೊಯುವಂತೆ ಸೂಚಿಸಿದರು. ಇದಕ್ಕೆ ಕಿವಿಗೊಡದ ಸಂಬಂಧಿಕರು ನೀವೇ ಅಂತ್ಯ ಸಂಸ್ಕಾರ ಮಾಡಿ ಎಂದು ವೃದ್ಧಾಶ್ರಮದ ರುದ್ರಮ್ಮರಿಗೆ ಉತ್ತರಿಸಿದರು.
undefined
ಕೊರೋನಾ ಹಾಟ್‌ಸ್ಪಾಟ್ ಆಗ್ತಿದ್ಯಾ ಪಡಿತರ ಕೇಂದ್ರ?
ರುದ್ರಮ್ಮ ವೃದ್ಧಾಶ್ರಮಕ್ಕೆ ಸದಾ ಸಹಾಯಸ್ತ ಚಾಚುವ ಶಿಕ್ಷಕ ನಾಗರಾಜ್ ಬಂಜಾರ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಷಫಿವುಲ್ಲಾ ಮತ್ತಿತರರಿಗೆ ವಿಷಯ ತಿಳಿಸಿ ಅಂತ್ಯ ಸಂಸ್ಕಾರ ಕೈಗೊಳ್ಳಲು ಸಹಾಯ ಯಾಚಿಸಿದರು. ಅವರ ಕೂಡಲೇ ದಾವಿಸಿ ಬಂದು ಸುಮಂಗಲಮ್ಮನವರ ಮೃತ ದೇಹವನ್ನು ವಾಹನದಲ್ಲಿ ಪಟ್ಟಣದ ರುದ್ರಭೂಮಿಗೆ ತಂದು ಅಂತ್ಯಸಂಸ್ಕಾರ ನೆರೆವೇರಿಸಿದರು.