ಮಂಡ್ಯ (ಜೂ.01): ಅಮೆರಿಕಾದಲ್ಲಿ ಸರ್ಜನ್ ಜನರಲ್ ಆಗಿರುವ ಡಾ.ವಿವೇಕ್‌ಮೂರ್ತಿ ಅವರು ಮಂಡ್ಯ ಮತ್ತು ಮಡಿಕೇರಿ ಜಿಲ್ಲೆಗಳಿಗೆ 1.40 ಕೋಟಿ ರು. ಮೌಲ್ಯದ ವೈದ್ಯಕೀಯ ನೆರವನ್ನು ನೀಡಿದ್ದಾರೆ.
ಈ ಮೂಲಕ ಕೊರೋನಾ ಸಂಕಷ್ಟದ ಕಾಲದಲ್ಲಿ ತವರೂರಿನ ಜನರ ಕಷ್ಟಕ್ಕೆ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದವರಾದ ಡಾ.ವಿವೇಕ ಸ್ಪಂದಿಸಿದ್ದಾರೆ. 70 ಆಕ್ಸಿಜನ್ ಕಾನ್ಸಂಟ್ರೇಟರ್, 25 ಡಿಜಿಟಲ್ ಥರ್ಮಾಮೀಟರ್, 1.96 ಲಕ್ಷ ಎನ್-95 ಮಾಸ್ಕ್‌ಗಳು, 5000 ಫೇಸ್‌ಶೀಲ್ಡ್, 400 ಗ್ಲೌವ್ಸ್, 50 ಆಕ್ಸಿಜನ್ ಕ್ಯಾನುಲಾ, 5 ವೋಲ್ಟೇಜ್ ಟ್ರಾನ್ಸ್ಫಾರ್ಮರ್ಸ್ಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಚೇತರಿಕೆ ಹಾದಿಗೆ ಕರ್ನಾಟಕ, 44473 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇ. 13.5ಕ್ಕೆ ಇಳಿಕೆ ...
ಈ ವೈದ್ಯಕೀಯ ಸಲಕರಣೆಗಳೆಲ್ಲವೂ ಅಮೆರಿಕಾದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದು, ಅಲ್ಲಿಂದ ವಿವೇಕ್ ಕುಟುಂಬದವರು ಮಂಡ್ಯದ ಮಿಮ್ಸ್ ಹಾಗೂ ಮಡಿಕೇರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.