ಪ್ರಧಾನಿ ಮೋದಿ ಕನಸಿನ‌ ಕೆರೆ ಯೋಜನೆಗಾಗಿ ಸಚಿವ ರಾಜೀವ್ ಚಂದ್ರಶೇಖರ್ ಬೆಂಗಳೂರು ರೌಂಡ್ಸ್

By Suvarna News  |  First Published Apr 12, 2022, 6:39 PM IST

* ಪ್ರಧಾನಿಯವರ ಕನಸಿನ‌  ಕೆರೆ ಯೋಜನೆ, 
* ಸಚಿವ ರಾಜೀವ್ ಚಂದ್ರಶೇಖರ್ ಬೆಂಗಳೂರು ರೌಂಡ್ಸ್
 * ಬೆಂಗಳೂರು ನಗರ ಜಿಲ್ಲೆಯ ಸುಮಾರು 75 ಕೆರೆಗಳನ್ನ ಕೈಗೆತ್ತಿಗೊಂಡಿರುವುದಾಗಿ ಹೇಳಿಕೆ


ವರದಿ - ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು, (ಏ.12):
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅಮೇತ್ ಕೆರೆ ಅಭಿವೃದ್ಧಿ ಪಡಿಸಲು ಬೆಂಗಳೂರು ನಗರ ಜಿಲ್ಲೆಯ ಸುಮಾರು 75 ಕೆರೆಗಳನ್ನ ಕೈಗೆತ್ತಿಗೊಂಡಿರುವುದಾಗಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಗುಬ್ಬಲಾಳ ಕೆರೆಗೆ ರಾಜೀವ್ ಚಂದ್ರಶೇಖರ್ ಭೇಟಿ

ಬೆಂಗಳೂರಿನ ಕನಕಪುರ ರಸ್ತೆಯ ಗುಬ್ಬಲಾಳ ಕೆರೆಗೆ ಇಂದು ಬೆಳಿಗ್ಗೆ  ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ನೀಡಿ ಕೆರೆ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ್ರು..ಗುಬ್ಬಲಾಳ ಕೆರೆಯನ್ನ 2021 ರಲ್ಲಿ ಸುಮಾರು 3.47 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.ಇದರ ವಿಸ್ತೀರ್ಣ ಒಟ್ಟು 8.10 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದೆ..

Tap to resize

Latest Videos

ಅಮೃತ್ ಕೆರೆ ಯೋಜನೆ ಅಡಿಯಲ್ಲಿ ಕೆರೆ ಪಕ್ಕದಲ್ಲಿ ಎಸ್.ಟಿ.ಪಿ ಘಟಕ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಚಿವ ರಾಜೀವ್ ಚಂದ್ರಶೇಖರ್ ಸೂಚನೆ ನೀಡಿದ್ರು. ಆಲ್ಲದೆ 1.50 MLD ಘಟಕ ಸ್ಥಾಪನೆಗೆ  1 ಕೋಟಿ ವೆಚ್ಚ ತಗಲುವ ಸಾಧ್ಯತೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ‌ ನೀಡಿದ್ರು.

ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

ಈ ವೇಳೆ ಸ್ಥಳೀಯರಿಗೆ ರೆಸಿಡೆನ್ಸಿಯಲ್ ಏಷಿಯಾದಲ್ಲಿ ವಾಕಿಂಗ್ ‌ಮಾಡಲು ನಿಗದಿತ ಜಾಗ ಇರಲಿಲ್ಲ. ಕೆರೆ ಅಭಿವೃದ್ಧಿಯಿಂದ ಸುತ್ತ ಮುತ್ತಲಿನ ನಿವಾಸಿಗಳಿಗೆ ವಾಕಿಂಗ್ ಮಾಡಲು ಅನುಕೂಲ ವಾಗಿದೆ ಅಂತ ಸ್ಥಳೀಯರು ರಾಜೀವ್ ಚಂದ್ರಶೇಖರ್ ಗೆ ಅಭಿನಂದನೆ ತಿಳಿಸಿದ್ರು..ಈ ವೇಳೆ  ಸ್ಥಳೀಯ ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ರು..

ಕೆಂಪಾಂಬುದಿ ಕೆರೆ ವೀಕ್ಷಣೆ ಮಾಡಿದ ಸಚಿವ ರಾಜೀವ್ ಚಂದ್ರಶೇಖರ್
ಕನಕಪುರ ರಸ್ತೆಯಲ್ಲಿರುವ ಗುಬ್ಬಲಾಳ ಕೆರೆ ಭೇಟಿ ಬಳಿಕ ಕೆಂಪಾಂಬುದಿ ಕೆರೆಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಹಾಗೂ ಕೆರೆ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಸ್ಥಳೀಯ ಶಾಸಕರಾದ ರವಿ ಸುಬ್ರಹ್ಮಣ್ಯ ಹಾಗೂ ಉದಯ್ ಬಿ ಗರುಡಾಚಾರ್ ಹಾಗೂ ಅಧಿಕಾರಿಗಳು ಚರ್ಚೆ ನಡೆಸಿದ್ರು..

ಬಳಿಕ ಕೆಂಪಾಂಬುದಿ ಕೆರೆ ರೌಂಡ್ಸ್ ಹಾಕಿ ಮುಂದಿನ ಯೋಜನೆ ಗಳ ಕುರಿತು ಸ್ಥಳೀಯ ಶಾಸಕರ ಜೊತೆ ಚರ್ಚೆ ನಡೆಸಿದ್ರು.ಕೆಂಪಾಂಬುದಿ ಕೆರೆಯನ್ನ 2018 ರಲ್ಲಿ ಕೆರೆಗಳ ಪುನಃಶ್ಚೇತನ ಮಾಡಲಾಗಿದೆ.ಕೆಂಪಾಂಬುದಿ ಕೆರೆಯ ಸುತ್ತಮುತ್ತಲಿನ ಕೊಳಚೆ ನೀರನ್ನ ಎಸ್.ಟಿ.ಪಿ ಘಟಕದಲ್ಲಿ ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ.ಆಲ್ಲದೆ ಕೆಂಪಾಂಬುದಿ ಕೆರೆಯನ್ನ ಪ್ರವಾಸಿತಾಣವಾಗಿ ಮಾಡಲು ಕೇಬಲ್ ಕಾರು ಅಳವಡಿಕೆ ಯೋಜನೆ ಇದ್ದು, ಚಿಂತನೆ ನಡೆಸಲಾಗಿದೆ ಅಂತ ಶಾಸಕ ರವಿ ಸುಬ್ರಹ್ಮಣ್ಯ ಸಚಿವರಿಗೆ ಮಾಹಿತಿ ನೀಡಿದ್ರು.ಈ ವೇಳೆ ಶಾಸಕ ಉದಯ್ ಬಿ ಗರುಡಚಾರ್, ಕೆರೆ ಅಭಿವೃದ್ಧಿ ಮುಖ್ಯ ಇಂಜಿನಿಯರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು..

ಮೇಸ್ತ್ರಿಪಾಳ್ಯ ಕೆರೆ ವೀಕ್ಷಣೆ 

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲದ ಮೇಸ್ತ್ರಿಪಾಳ್ಯ ಕೆರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ಅಭಿವೃದ್ಧಿ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ್ರು. ಈ ವೇಳೆ ಸ್ಥಳೀಯರು ಈಗಾಗಲೇ ಈಜಿಪುರ ಮೇಲು ಸೇತುವೆ ನಿರ್ಮಾಣದ ವಿಷಯದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಇದೀಗ ಮೇಸ್ತ್ರಿಪಾಳ್ಯದ ಕೆರೆ ಪುನಃ ಶ್ಚೇತನದ ಕಾಮಗಾರಿ ವಿಷಯದಲ್ಲಿ ‌ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ.ಬಿಡಿಎ ಕೆರೆ ಅಭಿವೃದ್ಧಿ ಪಡಿಸಿ ಬಿಬಿಎಂಪಿ ವಶಕ್ಕೆ ನೀಡಿದೆ ಆದ್ರೆ ಇದುವರೆಗೂ ಅಭಿವೃದ್ಧಿ ಕಾರ್ಯ ಆಗಿಲ್ಲ ಅಂತ ಸ್ಥಳೀಯ ಹಿರಿಯ ನಾಗರೀಕರು ಆರೋಪಿಸಿದ್ರು.

ಈ ವೇಳೆ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ ಅಮೃತ್ ಕೆರೆ ಯೋಜನೆ ಅಡಿಯಲ್ಲಿ ಬೆಂಗಳೂರು ನಗರದ 75 ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ.ಅದರಲ್ಲಿ ಮೇಸ್ತ್ರಿಪಾಳ್ಯ ಕೆರೆ ಕೂಡ ಸೇರಿಕೊಂಡಿದೆ.ಈಗಾಗಲೇ ಇದರ ಮಾಸ್ಟರ್ ಪ್ಲಾನ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ಹಾಗೂ ಸ್ಥಳೀಯ ಮುಖಂಡರು ಸಚಿವರಿಗೆ ಸಾಥ್ ನೀಡಿದ್ರು..

ವ್ಯಾಕ್ಸಿನ್ ಸೆಂಟರ್ ಗೆ ಭೇಟಿ 

ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಕ್ಸಿನ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಬಳಿಕ ಲಸಿಕಾ ಕಾರ್ಯಕ್ರಮ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.

click me!