Ballari ಐತಿಹಾಸಿಕ ಮ್ಯೂಸಿಯಂಗೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ್

By Suvarna News  |  First Published Apr 12, 2022, 4:08 PM IST
  • ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗೆ ಬಂದಿರೋ ರಾಜ್ಯಪಾಲ ಥಾವರ್ ಚಂದ್
  • 5 ಸಾವಿರ ವರ್ಷಗಳ ಹಿಂದಿನ ವಸ್ತುಗಳ ವೀಕ್ಷಣೆ
  • ತುಂಗಾಭದ್ರಾ ಜಲಾಶಯದ ಸೌಂದರ್ಯ ಕಣ್ತುಂಬಿಕೊಂಡ ರಾಜ್ಯಪಾಲ ಗೆಹ್ಲೋಟ್

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಏ.12): ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ ಮತ್ತು ಹಂಪಿ ವಿಶ್ವವಿದ್ಯಾಲಯದ (Hampi University) ಘಟಿಕೋತ್ಸವದಲ್ಲಿ ಭಾಗಿಯಾಗಲು ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗೆ ಬಂದಿರೋ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot ) ಅವರು ತುಂಗಭದ್ರಾ ಜಲಾಶಯ ಸೇರಿದಂತೆ ಇಲ್ಲಿಯ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಮಾಹಿತಿ ಪಡೆದ್ರು..

Tap to resize

Latest Videos

undefined

ಪ್ರಾಗೈತಿಹಾಸಿಕ ಮ್ಯೂಸಿಯಂಗೆ ಭೇಟಿ: ಬಳ್ಳಾರಿಯ ಪ್ರಾಗೈತಿಹಾಸಿಕ ಮ್ಯೂಸಿಯಂ ಗೆ (prehistoric museum ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿ ಮ್ಯೂಸಿಯಂ ವೀಕ್ಷಣೆ ಮಾಡಿದರು. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ(ಸಂಗನಕಲ್ಲು ಮ್ಯೂಸಿಯಂ)ಗೆ ಭೇಟಿ ನೀಡಿದ ರಾಜ್ಯಪಾಲರು, ಮ್ಯೂಸಿಯಂನಲ್ಲಿನ 5 ಸಾವಿರ ವರ್ಷಗಳ ಹಿಂದಿನ ಪಳಯುಳಿಕೆಗಳ ವೀಕ್ಷಣೆ ಮಾಡಿದ್ರು. ಮಮ್ಮಿ ಮಾದರಿಯ ಶವಪೆಟ್ಟಿಗೆ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು ಅಂದಿನ ಕಾಲದಲ್ಲಿಯೇ ಈ ರೀತಿಯ ಟೆಕ್ನಾಲಜಿ ‌ಇತ್ತೇ ಇದನ್ನು ಹೇಗೆ ನಿರ್ವಹಣೆ ಮಾಡ್ತಿದ್ರು ಎನ್ನುವ ಹತ್ತು ಹಲವು ವಿಷಯಗಳನ್ನು ಇತಿಹಾಸ ಕಾರರಿಂದ ಕುತೂಹಲದಿಂದ ಮಾಹಿತಿ ಪಡೆದ್ರು.

Koppala ಮುಳ್ಳಿನ ಮೇಲೆ ಭಕ್ತಿಯ ಪರಾಕಾಷ್ಠೆ

ಇನ್ನು 5 ಸಾವಿರ ವರ್ಷಗಳ ಹಿಂದಿನದ್ದು ಎನ್ನಲಾಗುತ್ತಿರೋ ಹಳೇಯದಾದ ಅಡುಗೆ ಸಾಮಾಗ್ರಿಗಳು, ಅಂದು ಪ್ರಾಣಿಗಳನ್ನ ಭೇಟಿಯಾಡಲು ಬಳಸುತ್ತಿದ್ದ ಅಯುಧಗಳು ಸೇರಿದಂತೆ ಹಲವು ದಿನಬಳಕೆ ವಸ್ತುಗಳನ್ನ ವೀಕ್ಷಣೆ ಮಾಡಿ ಅಚ್ಚರಿ ವ್ಯಕ್ತಪಡಿಸಿದರು. ವಿಶೇಷವೆಂದರೆ ಮ್ಯೂಸಿಯಂನಲ್ಲಿರೋ ಬಹುತೇಕ ವಸ್ತುಗಳ ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಬೆಟ್ಟದ ಮೇಲೆ ದೊರಿತಿರೋ ವಸ್ತುಗಳಾಗಿವೆ. ಅದಿ ಮಾನವರು ಬಳಸುತ್ತಿದ್ರೂ ಎನ್ನುವ ಈ ಎಲ್ಲ ವಸ್ತುಗಳನ್ನು ಮುಂದಿನ ಪೀಳಿಗೆ ನೋಡಿಕಲಿಯಲಿ ಎನ್ನುವ ಉದ್ದೇಶದಿಂದ ಸಂಗ್ರಹಿಸಿಡಲಾಗಿದೆ.  ಈ ವೇಳೆ ರಾಜ್ಯಪಾಲರಿಗೆ ಶಾಸಕ ಸೋಮಶೇಖರರೆಡ್ಡಿ, ಅಪರ್ ಜಿಲ್ಲಾಧಿಕಾರಿ ಮಂಜುನಾಥ ಸಾಥ್ ನೀಡಿ ಮಾಹಿತಿ ನೀಡಿದರು.

ತುಂಗಭದ್ರಾ ಜಲಾಶಯ ವೀಕ್ಷಿಸಿದ ಥಾವರ್ ಚಂದ್ ಗೆಹ್ಲೋಟ್: ಇನ್ನೂ ನಿನ್ನೆ ಸಂಜೆಯ ಹೊಸಪೇಟೆ ಬಂದಿರೋ ಹಿನ್ನೆಲೆ ಸಂಜೆ ತುಂಗಾಭದ್ರಾ ಜಲಾಶಯ ಭೇಟಿ ನೀಡಿ ಇಲ್ಲಿಯ ಸೌಂದರ್ಯವನ್ನು ಕಣ್ತುಂಬಿಕೊಂಡರು. ಜಲಾಶಯದ ಅಪಾರ ಪ್ರಮಾಣದ ಜಲರಾಶಿ ಹಾಗೂ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನ ವೀಕ್ಷಿಸಿ ಅದರ ಸೌಂದರ್ಯಕ್ಕೆ ಮಾರುಹೋದರು. ವೈಕುಂಠ ಅತಿಥಿಗೃಹದ ಮೇಲಿಂದ ಜಲಾಶಯ ಮತ್ತು ಮುಂಭಾಗದ ಉದ್ಯಾನವನ ಹಾಗೂ ಸೂರ್ಯಾಸ್ತವಾಗುತ್ತಿರುವುದನ್ನು ಕಣ್ತುಂಬಿಕೊಂಡರು.

ನಾನು ಯಾವುದೇ ವಿವಾದದಲ್ಲಿ ಬೀಳಲು ಬಯಸುವುದಿಲ್ಲ Basavaraj Bommai

ಜಲಾಶಯದ ಮೇಲ್ಗಡೆ ಎರಡು ಕಿ.ಮೀ ಕಾಲ್ನಡಿಗೆಯಲ್ಲಿಯೇ ಸುತ್ತಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಲಾಶಯ ನಿರ್ಮಾಣ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಇದೇ ವೇಳೆ ತುಂಗಾಭದ್ರಾ ಜಲಾಶಯಕ್ಕೆ ರಾಜ್ಯಪಾಲರು ಭೇಟಿ ನೀಡಿದ ಹಿನ್ನೆಲೆ ತುಂಗಭದ್ರಾ ಬೋರ್ಡ್ ವತಿಯಿಂದ ಸನ್ಮಾನಿಸಿ ಗೌರವಿಸಿದರು.. 

ಸಚಿವ ಆನಂದ ಸಿಂಗ್ ಭೇಟಿ: ಹೊಸಪೇಟೆ ನಗರಕ್ಕೆ ಅಗಮಿಸಿರೋ ರಾಜ್ಯಪಾಲರನ್ನು ಸಚಿವ ಆನಂದ ಸಿಂಗ್ ಭೇಟಿ ಮಾಡಿ ಸನ್ಮಾನಿಸಿದ್ರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್,ಎಸ್ಪಿ ಡಾ.ಅರುಣ್ ಎಸ್.ಕೆ, ತುಂಗಾಭದ್ರಾ ಜಲಾಶಯದ ಅಧಿಕಾರಿಗಳು ಮತ್ತು ಇತರರು ಇದ್ದರು.

click me!