Bidar ಐತಿಹಾಸಿಕ ದೇಗುಲದಲ್ಲಿನ ಮೂರ್ತಿಗಳಿಗೆ ಕಿಡಿಗೇಡಿಗಳಿಂದ ಹಾನಿ

By Suvarna NewsFirst Published Apr 12, 2022, 5:22 PM IST
Highlights
  • ಶಿವ, ಗಣೇಶ್ ಹಾಗೂ ಚಾಳಕಾದೇವಿ  ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳು
  • ಕಿಡಿಗೇಡಿಗಳ ವಿರುದ್ಧ ಸ್ಥಳೀಯರ ಆಕ್ರೋಶ
  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಭೇಟಿ ನೀಡಿ ಪರಿಶೀಲನೆ

ವರದಿ: ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್  

ಬೀದರ್(ಏ.12): ಬೀದರ್ (Bidar) ಜಿಲ್ಲೆ ಭಾಲ್ಕಿ (Balki) ತಾಲೂಕಿನ ಚಳಕಾಪುರ ಗ್ರಾಮದಲ್ಲಿರುವ ಐತಿಹಾಸಿಕ ಸಂಜೀವಿನಿ ಗುಡ್ಡದಲ್ಲಿರುವ  ದೇವಸ್ಥಾನದಲ್ಲಿನ ಶಿವ (Shiva), ಗಣೇಶ್ (Ganesha), ಚಾಳಕಾದೇವಿ (Chalakadevi) ಮೂರ್ತಿಗಳನ್ನ ಕಿಡಿಗೇಡಿಗಳು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಮೂರ್ತಿ ವಿರೂಪಗೊಳಿಸಿದ್ದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಸ್ಥಳೀಯ ಭಕ್ತರ ಆಗ್ರಹವಾಗಿದೆ. 

ನಾನು ಯಾವುದೇ ವಿವಾದದಲ್ಲಿ ಬೀಳಲು ಬಯಸುವುದಿಲ್ಲ Basavaraj Bommai

ಐತಿಹಾಸ ಪ್ರಸಿದ್ಧ ಚಾಳಕಾದೇವಿ ಮಂದಿರ: ಇಲ್ಲಿನ ಚಾಳಕಾದೇವಿ ಬೆಟ್ಟಕ್ಕೆ ಸಂಜೀವಿನಿ ಪರ್ವತ ಅಂತಲೂ ಭಕ್ತರು ಕರೆಯುತ್ತಾರೆ. ತ್ರೇತಾಯುಗದಲ್ಲಿ ಹಿಮಾಲಯದಿಂದ ಹನುಮಾನ ಸಂಜೀವಿನಿ ಪರ್ವತ ಕೈಯಲ್ಲಿಟ್ಟುಕೊಂಡು ಹೋಗುವಾಗ ಚಳಕಾಪುರದಲ್ಲಿ ವಿಶ್ರಾಂತಿ ಪಡೆದಿದ್ದರು, ಈ ವೇಳೆ ಚಾಳಕಾದೇವಿ ಹನುಮಾನಿಗೆ ಉಪಚಾರ ಮಾಡಿದ್ದರು. ಈ ವೇಳೆ ಹನುಮಾನ ಕೈಯಲ್ಲಿದ್ದ ಬೆಟ್ಟ ಒಂದು ತುಂಡು ಇಲ್ಲಿ ಉಳಿದುಕೊಂಡಿದೆ ಎಂದು ಭಕ್ತರ ನಂಬಿಕೆಯಾಗಿದೆ ಹೀಗಾಗಿ ಈ ಬೆಟ್ಟಕ್ಕೆ ಸಂಜೀವಿನಿ ಬೆಟ್ಟ ಅಂತ ಕರೆಯಲಾಗುತ್ತದೆ‌.

Ballari ಐತಿಹಾಸಿಕ ಮ್ಯೂಸಿಯಂಗೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ್

ಈ ಬೆಟ್ಟದ ಮೇಲೆ ಹನುಮಾನ ಸಂಜೀವಿನಿ ಪರ್ವತ ಕೈಯಲ್ಲಿ ಹಿಡಿದಿರುವ 8 ಅಡಿಯ ಪುತ್ತಳಿ ಇದೆ. ಚಾಳಕಾದೇವಿಯ ದೇವಸ್ಥಾನ ಇದೆ, ಅದರಲ್ಲಿ ಶಿವ, ಗಣೇಶ್ ನ ಮೂರ್ತಿ ಕೂಡ ಇದೆ. ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ (ಸೋಮವಾರ) ದೇಗುಲದ ಕಡೆಗೆ ಯಾರೂ ಮುಖ ಮಾಡದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ದೇವಸ್ಥಾನದಲ್ಲಿ‌ನ ಮೂರ್ತಿಗಳನ್ನ ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ. ಇಲ್ಲಿವರೆಗೂ ಈ ಕೃತ್ಯ ಯಾರು ಎಸಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

click me!