ಕಳೆದ ಆರು ತಿಂಗಳಿನಿಂದ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಭಾರತದ ಬಗ್ಗೆ ಜಾಸ್ತಿ ಮಾತನಾಡುತ್ತಿದ್ದಾರೆ. ಆರ್ಥಿಕವಾಗಿ ಬ್ರಿಟನ್ ಹಿಂದಿಕ್ಕಿ ಭಾರತ ಐದನೇ ಸ್ಥಾನಕ್ಕೇರಿದೆ. 2047ರಲ್ಲಿ ಭಾರತ ಮೊದಲ ಸ್ಥಾನಕ್ಕೇರಿ ದೊಡ್ಡಣ್ಣ ಅಲ್ಲ ಹಿರಿಯಣ್ಣ ಸ್ಥಾನಗಳಿಸಬೇಕು ಎಂಬುದು ಮೋದಿ ಆಶಯ ಎಂದ ಸಚಿವ ಜೋಶಿ
ಹುಬ್ಬಳ್ಳಿ(ಅ.02): ವಿಶ್ವದಲ್ಲಿ ಭಾರತದ ಆರ್ಥಿಕತೆ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ವಿದ್ಯಾನಗರದ ಕೆಎಲ್‌ಇ ವಿಶ್ವವಿದ್ಯಾಲಯದ ಬಯೋಟೆಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಮೋದಿ 20 ಡ್ರಿಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಹಾಗೂ ಜನ ಕಲ್ಯಾಣ ಯೋಜನೆಯ ಕುರಿತು ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಆರು ತಿಂಗಳಿನಿಂದ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಭಾರತದ ಬಗ್ಗೆ ಜಾಸ್ತಿ ಮಾತನಾಡುತ್ತಿದ್ದಾರೆ. ಆರ್ಥಿಕವಾಗಿ ಬ್ರಿಟನ್ ಹಿಂದಿಕ್ಕಿ ಭಾರತ ಐದನೇ ಸ್ಥಾನಕ್ಕೇರಿದೆ. 2047ರಲ್ಲಿ ಭಾರತ ಮೊದಲ ಸ್ಥಾನಕ್ಕೇರಿ ದೊಡ್ಡಣ್ಣ ಅಲ್ಲ ಹಿರಿಯಣ್ಣ ಸ್ಥಾನಗಳಿಸಬೇಕು ಎಂಬುದು ಮೋದಿ ಆಶಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಅಭಿವೃದ್ಧಿಗಾಗಿ ಪ್ರಾಮಾಣಿಕ, ಪರಿಶ್ರಮ, ಸಾಮಾಜಿಕ ಕಳಕಳಿ ಹಾಗೂ ಮಾನವಿಯ ಮೌಲ್ಯಗಳ ಅರಿತುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಗಾಂಧಿಯೇತರ ಕುಟುಂಬ ಹೊರತುಪಡಿಸಿ 20 ವರ್ಷ ಆಡಳಿತ ನಡೆಸಿದ ನಾಯಕ ಅದು ಮೋದಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಈ ವರೆಗೂ ಒಂದು ಬಾರಿ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿಲ್ಲ. ಇದು ಇತಿಹಾಸವಾಗಿದೆ ಎಂದು ಹೇಳಿದರು.
ವಿಚಾರವಂತರು ಯಾರೇ ಇದ್ದರೂ ಅವರಿಂದ ಹೊಸ ವಿಚಾರ ಕಲಿಯುವ ಗುಣ ಮೋದಿ ಅವರಲ್ಲಿದೆ. ಬಿಡುವಿಲ್ಲದೆ ದೇಶ ಅಭಿವೃದ್ಧಿಗೆ ಶ್ರಮಿಸುವ ಜೀವ ಅವರದು. ಭಾರತೀಯ ಎಲ್ಲ ಭಾಷೆಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ. ಜನ್‌ಧನ್, ಆಧಾರ್ ಹಾಗೂ ಮೊಬೈಲ್ ಮೂಲಕ ಸರ್ಕಾರದ ಆಡಳಿತದಲ್ಲಿ ಪಾದರ್ಶಕತೆ ತಂದು ಪ್ರಸ್ತುತ ಭ್ರಷ್ಟಾಚಾರ ಮುಕ್ತವಾಗಿ ಮಾಡಿದ್ದಾರೆ ಎಂದು ತಿಳಿಸಿದರು.
Dharwad; ರಸ್ತೆ ಅಪಘಾತವಾದ್ರೆ ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್, ಪ್ರಹ್ಲಾದ್ ಜೋಶಿ ವಾರ್ನಿಂಗ್
ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಅಶೋಕ ಶೆಟ್ಟರ್ ಮಾತನಾಡಿ, ಮೋದಿ ಅವರಿಂದ ದೇಶದಲ್ಲಿ ಶೇ. 40ರಷ್ಟುವ್ಯವಹಾರಗಳು ಡಿಜಿಟಲ್‌ನಲ್ಲಿ ನಡೆಯುತ್ತಿದೆ. ಮೊಬೈಲ್, ಎಲೆಕ್ಟ್ರಿಕಲ್ ವಾಹನ ಹಾಗೂ ಸೆಮಿಕಂಡಕ್ಟರ್ ದೇಶದಿಂದ ಅತೀ ಹೆಚ್ಚು ರಫ್ತು ಮಾಡಲಾಗುತ್ತಿದೆ ಎಂದರು.
ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಪ್ರಧಾನಿ ಬಹಳ ಉತ್ತಮವಾಗಿ ನಿಭಾಯಿಸಿದರು. ಕಳೆದ 20 ವರ್ಷದಿಂದ ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆಡಳಿತದಲ್ಲಿದ್ದ ಭ್ರಷ್ಟಾಚಾರ ತೊಲಗಿಸಿದ್ದಾರೆ. ರಾಜ್ಯ ಸರ್ಕಾರ ಬಿಯಾಂಡ್ ಬೆಂಗಳೂರು ಎನ್ನುತ್ತಿದೆ. ಕಳೆದ ಆರು ತಿಂಗಳಿನಿಂದ ಯಾವುದೇ ಬೆಳವಣಿಗೆ ಇಲ್ಲ. ಅದು ಸಮಾರಂಭಕ್ಕೆ ಮಾತ್ರ ಸೀಮಿತವಾಗಿದೆ. ಕೇಂದ್ರದ ಹಾದಿಯಲ್ಲಿ ರಾಜ್ಯ ಸರ್ಕಾರ ನಡೆಯಬೇಕು, ಅಂದಾಗ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಬಿಜೆಪಿ ಮುಖಂಡರಾದ ನಾಗೇಶ ಕಲಬುರಗಿ, ಚಂದ್ರಶೇಖರ ಗೋಕಾಕ, ಕೆಸಿಸಿಐ ಅಧ್ಯಕ್ಷ ವಿನಯ ಚವಳಿ, ಮಹೇಂದ್ರ ಲಡ್ಡದ, ಪಾಲಿಕೆ ಸದಸ್ಯ ರೂಪಾ ಶೆಟ್ಟಿ ಇದ್ದರು.