ಕೊಪ್ಪಳ: ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು..!

By Girish Goudar  |  First Published Oct 1, 2022, 11:27 PM IST

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹಳ್ಳದಲ್ಲಿ ನಡೆದಿದ ಘಟನೆ 


ವರದಿ- ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕೊಪ್ಪಳ

ಕೊಪ್ಪಳ(ಅ.01): ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸಾಕಷ್ಟು ಅನಾಹುತಹಳನ್ನು ಮಾಡುತ್ತಿದೆ.‌ ಇಲ್ಲೊಂದು ಊರಲ್ಲಿ  ಭಾರೀ ಮಳೆಗೆ ನಾಲ್ಕು ಜನ ಮಹಿಳೆಯರು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಎಲ್ಲಿ ಈ ಘಟನೆ ನಡೆದಿರೋದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

Latest Videos

undefined

ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ನಾಲ್ವರು ಮಹಿಳೆಯರು

ಎಂದಿನಂತೆ ಆ ಮಹಿಳೆಯರು ಕಾಟನ್ ಜೀನಿನ‌ ಕೆಲಸಕ್ಕೆ ಹೋಗಿದ್ದರು.‌ ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ಊರಿಗೆ ತಾವು ಬರುತ್ತಿದ್ದರು. ಈ ವೇಳೆಯಲ್ಲಿ ಊರಿಗೆ ಹೊಂದಿಕೊಂಡಂತೆ ಇರುವ ಹಳ್ಳದಲ್ಲಿ ನೀರಿನ ರಭಸ ಲೆಕ್ಕಿಸದೆ ನಾಲ್ವರು ಹಳ್ಳಕ್ಕೆ ಇಳಿದಿದ್ದಾರೆ. ಈ ವೇಳೆಯಲ್ಲಿ ನಾಲ್ವರೂ ಮಹಿಳೆಯರು ಹಳ್ಳ ದಾಟುವ ಸಮಯದಲ್ಲಿ ನೀರಿನ‌ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಕೊಪ್ಪಳ‌ ಪಿಎಫ್ಐ ಜಿಲ್ಲಾಧ್ಯಕ್ಷ ಫಯಾಜ್ ವ್ಯವಹಾರ ನೋಡಿ ಬೆಚ್ಚಿಬಿದ್ದ ಪೊಲೀಸ್!

ಎಲ್ಲಿ ಈ ಘಟನೆ ನಡೆದಿರೋದು?

ಬರಪೀಡಿತ ಪ್ರದೇಶ ಎಂದು ಕರಡಯಿಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹಳ್ಳದಲ್ಲಿ ಈ ಘಟನೆ ನಡೆದಿದೆ.‌

ಹಳ್ಳದಲ್ಲಿ ಕೊಚ್ಚಿ ಹೋದವರು ಯಾರು?

ಇನ್ನು ಸಂಕನೂರು ಗ್ರಾಮದ ನಾಲ್ವರು ಮಹಿಳೆಯರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇವರು ಯಾರು ಅಂತ ನೋಡೋದಾದ್ರೆ  ಹತ್ತಿ ಜೀನ್ ನಿಂದ ಕೆಲಸವನ್ನು 40 ವರ್ಷದ ಭುವನೇಶ್ವರಿ ಪೋಲಿಸ ಪಾಟೀಲ್, 32 ವರ್ಷದ ಗೀರಿಜಾ ಮಾಲಿಪಾಟೀಲ್, 19 ವರ್ಷದ ವೀಣಾ ಪೋಲಿಸ್ ಪಾಟೀಲ್, 45 ವರ್ಷದ ಪವಿತ್ರಾ ಪೊಲೀಸ್ ಪಾಟೀಲ್ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ದುರ್ದೈವಿಗಳು.

ಸ್ಥಳಕ್ಕೆ ಅಧಿಕಾರಿಗಳ ದೌಡು

ಇನ್ನು ನಾಲ್ವರು ಮಹಿಳೆಯರು ಹಳ್ಳಕ್ಕೆ ಕೊಚ್ಚಿಕೊಂಡು ಹೋದ ಸುದ್ದಿ ತಿಳಿಯುತ್ತಲೆ ಸಂಕನೂರು ಗ್ರಾಮಕ್ಕೆ  ತಹಶೀಲ್ದಾರ ಶ್ರೀಶೈಲ್ ತಳವಾರ,ಯಲಬುರ್ಗಾ ಸಿಪಿಐ ಹಾಗೂ ಪಿಎಸ್ಐ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯದ ಕುರಿತು ಚರ್ಚಿಸಿದರು.
 

click me!