Latest Videos

ಆತ್ಮನಿರ್ಭರ ಯೋಜನೆಯಡಿ ವಿಐಎಸ್‌ಎಲ್ ಕಾರ್ಖಾನೆ ಉಳಿಸಲು ಅವಕಾಶವಿದೆ; ಕೇಂದ್ರ ಸಚಿವ ಕುಮಾರಸ್ವಾಮಿ

By Sathish Kumar KHFirst Published Jun 30, 2024, 6:27 PM IST
Highlights

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉಳಿಸಲು ಆತ್ಮ ನಿರ್ಭರ ಯೋಜನೆಯಡಿ ಅವಕಾಶವಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ (ಜೂ.30): ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ ಸಂಬಂಧ ಕಾರ್ಮಿಕರ ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ.ಪ್ರಧಾನಿ ಮೋದಿಯವರ ಆತ್ಮ ನಿರ್ಭರ ಕಾರ್ಯಕ್ರಮ ಸೇರಿದಂತೆ ಹಲವು ರೀತಿಯಲ್ಲಿ ಕಾರ್ಖಾನೆ ಉಳಿಸಲು ಅವಕಾಶವಿದೆ. ಅದರಡಿ ವಿಐಎಸ್ಎಲ್ ಕಾರ್ಖಾನೆ ಉಳಿಸಲು ಚರ್ಚೆ ಮಾಡಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭಧ್ರಾವತಿಯಲ್ಲಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಘಟಕಕ್ಕೆ (Vishweshwaraiah Iron and Steel Limited -VISL) ಭಾನುವಾರ ಭೇಟಿ ನೀಡಿದ ಅವರು ಕಾರ್ಮಿಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕರಾಗಿದ್ದ ಅಪ್ಪಾಜಿಗೌಡ  ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈಗ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ ಸಂಬಂಧ ಕಾರ್ಮಿಕರ ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಲೋಕಸಭಾ ಕಲಾಪ ನಡೆಯುತ್ತಿರುವ ಹಿನ್ನೆಲೆ ನಿರ್ಧಾರ ಪ್ರಕಟ ಮಾಡಲು ಬರುವುದಿಲ್ಲ. ವಿಐಎಸ್ಎಲ್ ಕಾರ್ಖಾನೆ ಉಳಿಸಿ ಕೊಡಲು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ವರ್ಷಕ್ಕಿಂತ ದುಪ್ಪಟ್ಟು ತುಂಬಿದ ಕೆಆರ್‌ಎಸ್ ಜಲಾಶಯ; 18 ಸಾವಿರ ಕ್ಯೂಸೆಕ್ ಒಳಹರಿವು

ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಕಾರ್ಯಕ್ರಮ ಸೇರಿದಂತೆ ಹಲವು ರೀತಿಯಲ್ಲಿ ಕಾರ್ಖಾನೆ ಉಳಿಸಲು ಅವಕಾಶವಿದೆ. ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಗುರಿ ಹೊಂದಿದ್ದು ಅದಕ್ಕೆ ಪೂರಕವಾಗಿ ತೀರ್ಮಾನಕ್ಕೆ ಬರುತ್ತೇವೆ. ಜೊತೆಗೆ, ವಿಎಸ್‌ಐಎಲ್ ಆಸ್ತಿ ಉಳಿಸಿ, ಕಾರ್ಮಿಕರ ಮುಂದಿನ ದಿನಗಳಲ್ಲಿ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ. ಬಳ್ಳಾರಿಯ ರಮಣದುರ್ಗದಲ್ಲಿ ಕಬ್ಬಿಣದ ಆದಿರಿಗಾಗಿ ಗಣಿ ಅನುಮೋದನೆ ಸಿಕ್ಕಿದೆ. ಭದ್ರಾವತಿ ವಿಎಸ್ಐಎಲ್ ಉಳಿಸಲು ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಅದೆಲ್ಲಾ ನಮ್ಮ ಪಕ್ಷಕ್ಕೆ ಸೇರಿಲ್ಲ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಅವರು ತೀರ್ಮಾನ ಮಾಡಬೇಕು. ಮಂಡ್ಯದಲ್ಲಿ ವಿಮಾನ ನಿಲ್ದಾಣ ವಿಚಾರದ ಬಗ್ಗೆ ಮಾತನಾಡಿ ಇದು ಸಚಿವ ಚೆಲುವರಾಯಸ್ವಾಮಿಯವರ ಬೇಡಿಕೆ, ಈಡೇರಿಸಲು ಅವಕಾಶವಿದ್ದರೆ ಈಡೇರಿಸಲಿ. ಇನ್ನು ಹಾವೇರಿ ಬಳಿ ಆಕ್ಸಿಡೆಂಟ್ ನಲ್ಲಿ 13 ಜನರ ದುರಂತ ಸಾವು ವಿಚಾರದ ಬಗ್ಗೆ ಎಮ್ಮೆಹಟ್ಟಿ ಗ್ರಾಮದಲ್ಲಿ ಕುಟುಂಬಗಳ ಪರಿಸ್ಥಿತಿ ಧಾರುಣವಾಗಿದ್ದು ಅವರಿಗೆ ಅಗತ್ಯ ಸಹಕಾರ ನೀಡಲು ಬದಲಾಗಿದ್ದೇವೆ ಎಂದು ಮಾಹಿತಿ ನೀಡದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ ಪುತ್ರಿ ವಿಯೋಗ; ಅನಾರೋಗ್ಯದಿಂದ ಹಂಸ ಮೊಯ್ಲಿ ವಿಧಿವಶ

ಕೇಂದ್ರ ಸಚಿವ ಹೆಚ್‍.ಡಿ. ಕುಮಾರಸ್ವಾಮಿಯವರು ಸೈಲ್ ಅಧ್ಯಕ್ಷರೊಂದಿಗೆ ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾರ್ಖಾನೆಗೆ ಬಂಡವಾಳ ಹಿಂತೆಗೆತ ಹಾಗೂ ನೀತಿ ಆಯೋಗದಿಂದ ಹಿಂಪಡೆಯುವ ದೊಡ್ಡ ಸವಾಲಿದೆ. ವಿಐಎಸ್ಎಲ್ ಮೇಲಿರುವ ಕರಾಳ ಛಾಯೆಯನ್ನು ತೆಗೆಯುವ ಆಶಾಭಾವನೆ ಮೂಡಿದೆ. ಕಾರ್ಖಾನೆ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆ ಬಗ್ಗೆ ಇದೊಂದು ಮಹತ್ವದ ಹೆಜ್ಜೆ ಆಗಿದೆ.
-ಬಿ.ವೈ. ರಾಘವೇಂದ್ರ, ಸಂಸದ, ಶಿವಮೊಗ್ಗ

click me!