ರೇಣುಕಾಸ್ವಾಮಿ ಕೊಲೆ ಕೇಸ್‌: ಕಿತ್ತು ತಿನ್ನುವ ಬಡತನ, ಮಗನ ನೋಡೋಕೆ ಜೈಲಿಗೆ ಹೋಗಲು ಬಸ್ಸಿಗೂ ದುಡ್ಡಿಲ್ಲ..!

By Kannadaprabha News  |  First Published Jun 30, 2024, 11:55 AM IST

ತಮ್ಮ ಸಂಕಟಗಳನ್ನು ತೆರೆದಿಟ್ಟ ಅವರು ನನ್ನ ಮಗ ದರ್ಶನ್‌ ಅಭಿಮಾನಿಯಾಗಿದ್ದ. ಅವರ ಸಿನೆಮಾ ಬಿಡುಗಡೆ ಆದಾಗ ಅದರ ಪೋಸ್ಟರ್‌ ಹಂಚುವ ಕೆಲಸಕ್ಕೆ ಹೋಗುತ್ತಿದ್ದ. ಅಂತಹವನಿಗೆ ಈ ದುರ್ಗತಿ ಬರುತ್ತದೆಂದು ನಾವು ಭಾವಿಸಿರಲಿಲ್ಲ. ಅವನಿಲ್ಲದೆ ನಮ್ಮ ಜೀವನ ತುಂಬಾ ದುಸ್ತರವಾಗಿದೆ. ಶಾಲೆಗೆ ಹೋಗುವ ಮಕ್ಕಳ ಶುಲ್ಕ ತುಂಬಲೂ ಆಗುತ್ತಿಲ್ಲ. ಇದರ ಮಧ್ಯೆ ಮನೆಗೆ ಎಡತಾಕುವ ಪೊಲೀಸರನ್ನು ನೋಡಿದ್ರೆ ನಡುಕ ಬರುತ್ತದೆ ಎಂದ ಆರೋಪಿಯ ತಾಯಿ ಸುಲೋಚನಮ್ಮ 
 


ಚಿತ್ರದುರ್ಗ(ಜೂ.30):  ದರ್ಶನ್‌ ಮತ್ತು ಗ್ಯಾಂಗ್‌ನ ಕೊಲೆ ಪ್ರಕರಣದಲ್ಲಿ ಎ೬ ಆರೋಪಿಯಾಗಿರುವ ಜಗದೀಶ್‌ ಅವರಿಗೆ ಜಾಮೀನು ಕೊಡಿಸುವುದು ಒತ್ತಟ್ಟಿಗಿರಲಿ, ಅವನನ್ನು ನೋಡಿಕೊಂಡು ಬರಲು ಬೆಂಗಳೂರಿಗೆ ಹೋಗಿ ಬರಲೂ ನಮ್ಮಲ್ಲಿ ಹಣ ಇಲ್ಲ ಎಂದು ಆರೋಪಿಯ ತಾಯಿ ಸುಲೋಚನಮ್ಮ ತಮ್ಮ ಅಳಲನ್ನು ತೋಡಿಕೊಂಡರು.

ಸುದ್ದಿಗಾರರ ಜೊತೆಗೆ ತಮ್ಮ ಸಂಕಟಗಳನ್ನು ತೆರೆದಿಟ್ಟ ಅವರು ನನ್ನ ಮಗ ದರ್ಶನ್‌ ಅಭಿಮಾನಿಯಾಗಿದ್ದ. ಅವರ ಸಿನೆಮಾ ಬಿಡುಗಡೆ ಆದಾಗ ಅದರ ಪೋಸ್ಟರ್‌ ಹಂಚುವ ಕೆಲಸಕ್ಕೆ ಹೋಗುತ್ತಿದ್ದ. ಅಂತಹವನಿಗೆ ಈ ದುರ್ಗತಿ ಬರುತ್ತದೆಂದು ನಾವು ಭಾವಿಸಿರಲಿಲ್ಲ. ಅವನಿಲ್ಲದೆ ನಮ್ಮ ಜೀವನ ತುಂಬಾ ದುಸ್ತರವಾಗಿದೆ. ಶಾಲೆಗೆ ಹೋಗುವ ಮಕ್ಕಳ ಶುಲ್ಕ ತುಂಬಲೂ ಆಗುತ್ತಿಲ್ಲ. ಇದರ ಮಧ್ಯೆ ಮನೆಗೆ ಎಡತಾಕುವ ಪೊಲೀಸರನ್ನು ನೋಡಿದ್ರೆ ನಡುಕ ಬರುತ್ತದೆ ಎಂದರು.

Tap to resize

Latest Videos

undefined

ಅಪಾಯದ ಸೆನ್ಸ್ ಮೊದ್ಲೇ ಆಗಿದೆ, ಆದ್ರೂ ಬೆಂಗಳೂರು ಬಿಟ್ಟು ಹೋಗದೇ ಜೈಲು ಸೇರ್ಕೊಂಡ್ರು ದರ್ಶನ್!

ಕಿತ್ತು ತಿನ್ನುವ ಬಡತನ ಮನೆಯಲ್ಲಿ ಕಾಡ್ತಿದೆ. ಅಕ್ಕಪಕ್ಕದವರು ರೇಷನ್‌, ತರಕಾರಿ ಕೊಟ್ಟಿದ್ದಾರೆ. ಆದರೆ ಎಷ್ಟು ದಿನ ಇದು ನಡೆಯುತ್ತದೆ. ನನಗೆ ಹುಷಾರಿಲ್ಲ, ಮನೆಯ ಯಜಮಾನರು ಅನಾರೋಗ್ಯದಿಂದ ಇದ್ದಾರೆ ಎಂದು ಮಾಧ್ಯಮದ ಮುಂದೆ ತಾಯಿ ಸುಲೋಚನಮ್ಮ ಸಂಕಟಗಳನ್ನು ತೆರೆದಿಟ್ಟರು.

click me!