ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣದ ಅಕ್ರಮ ವಹಿವಾಟು ಸಂಬಂಧ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಬಿ ನಾಗೇಂದ್ರ ಆರೋಪ ಮುಕ್ತರಾಗಲೆಂದು ಬಳ್ಳಾರಿಯ ಅಭಿಮಾನಿಯೊಬ್ಬ ತಿರುಪತಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ್ದಾರೆ.
ಬಳ್ಳಾರಿ (ಜೂ.30): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣದ ಅಕ್ರಮ ವಹಿವಾಟು ಸಂಬಂಧ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಬಿ ನಾಗೇಂದ್ರ ಆರೋಪ ಮುಕ್ತರಾಗಲೆಂದು ಬಳ್ಳಾರಿಯ ಅಭಿಮಾನಿಯೊಬ್ಬ ತಿರುಪತಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ್ದಾರೆ.
ಎಂಜಿ ಕನಕ, ತಿರುಪತಿ ಬೆಟ್ಟ ಮೆಟ್ಟಿಲು ಏರಿ ಮುಡಿ ಅರ್ಪಿಸಿರುವ ಅಭಿಮಾನಿ. ಬಳ್ಳಾರಿ ಮಾಜಿ ಸಚಿವ ಬಿ ನಾಗೇಂದ್ರ ಅವರ ಅಪ್ಪಟ ಅಭಿಮಾನಿಯಾಗಿರುವ ಕನಕ. ಕಳೆದ ಎರಡು ತಿಂಗಳ ಹಿಂದೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಕೆಲವು ಖಾಸಗಿ ವ್ಯಕ್ತಿಗಳು ಸೇರಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿದ್ದರು. ಆದರೆ ಈ ಅಕ್ರಮಕ್ಕೆ ಬಿ ನಾಗೇಂದ್ರ ಅವರೇ ಕಾರಣರು ಎಂದು ವಿರೋಧ ಪಕ್ಷಗಳ ನಾಯಕರು ಆರೋಪ ಮಾಡಿದ್ದರು.
undefined
'ನೀವು ಮಠಕ್ಕೆ ಕಾಲಿಡಬೇಡಿ, ನಾವೂ ರಾಜಕೀಯಕ್ಕೆ ಬರೊಲ್ಲ': ಡಿಕೆಶಿ ವಿರುದ್ಧ ಪ್ರಣವಾನಂದಶ್ರೀ ಕಿಡಿ
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಚಿವ ಬಿ ನಾಗೇಂದ್ರರ ರಾಜೀನಾಮೆ ಪಡೆದಿದ್ದ ಸಿಎಂ ಸಿದ್ದರಾಮಯ್ಯ. ಆದರೆ ನಾನು ಅಕ್ರಮದಲ್ಲಿ ಭಾಗಿಯಾಗಿಲ್ಲ ನೈತಿಕ ಹೊಣೆಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿರುವ ಬಿ ನಾಗೇಂದ್ರ. ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ತನಿಖೆ ನ್ಯಾಯಯುತವಾಗಿ ನಡೆದು, ಈ ಪ್ರಕರಣದಲ್ಲಿ ತಮ್ಮ ನೆಚ್ಚಿನ ನಾಯಕ ಬಿ ನಾಗೇಂದ್ರ ಅವರು ಆರೋಪ ಮುಕ್ತರಾಗಿ ಹೊರಗೆ ಬರಲಿ, ಮತ್ತೊಮ್ಮೆ ಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿ ಮುಡಿ ಕೊಟ್ಟಿರುವ ಅಭಿಮಾನಿ.