Udupi : ರಂಗಭೂಮಿ ಸಂಸ್ಥೆಯ ರಾಜ್ಯಮಟ್ಟದ ನಾಟಕ ಪ್ರಶಸ್ತಿ ಘೋಷಣೆ

By Sathish Kumar KH  |  First Published Dec 6, 2022, 3:34 PM IST

ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ 43ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಹಾವೇರಿ ಶೇಷಗಿರಿ ಗಜಾನನ ಯುವಕ ಮಂಡಲ ತಂಡದ ವಾಲಿವಧೆ ನಾಟಕ ಪ್ರಥಮ ಬಹುಮಾನ ಗೆದ್ದುಕೊಂಡಿದೆ.


ಉಡುಪಿ (ಡಿ.6): ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ 43ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಹಾವೇರಿ ಶೇಷಗಿರಿ ಗಜಾನನ ಯುವಕ ಮಂಡಲ ತಂಡದ ವಾಲಿವಧೆ ನಾಟಕ ಪ್ರಥಮ ಬಹುಮಾನ ಗೆದ್ದುಕೊಂಡು 35,000ರೂ. ನಗದು ಮತ್ತು ಸ್ಮರಣಿಕೆ ಹಾಗೂ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವನ್ನು ತೀರ್ಥಹಳ್ಳಿಯ ನಟಮಿತ್ರರು ತಂಡದ ತುರುಬ ಕಟ್ಟುವ ಹದನ ನಾಟಕ (25,000ರೂ. ನಗದು ಮತ್ತು ಸ್ಮಾರಕ ಸ್ಮರಣಿಕೆ) ಹಾಗೂ ತೃತೀಯ ಬಹುಮಾನವನ್ನು ಮಂದಾರ ಬೈಕಾಡಿ ತಂಡದ ಕೊಳ್ಳಿ ನಾಟಕ (15,000ರೂ. ಮತ್ತು ಸ್ಮಾರಕ ಸ್ಮರಣಿಕೆ) ಪಡೆದುಕೊಂಡಿದೆ.

ಮೆಚ್ಚುಗೆ ಬಹುಮಾನಗಳು: ಬಿಂಕ ಬಿನ್ನಾಣರು ರಂಗತಂಡ ಬೆಂಗಳೂರು ತಂಡದ ಸುಯೋಧನ ನಾಟಕದ ಸುಯೋಧನಪಾತ್ರಧಾರಿ ಶಿವು ಹೊನ್ನಿಗನ ಹಳ್ಳಿ, ತದ್ರೂಪಿ ನಾಟಕದ ತದ್ರೂಪಿ ಪಾತ್ರಧಾರಿ ಕೃಷ್ಣ ಹೆಬ್ಬಾಲೆ, ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕದ ಓಕ್ಕಾಕ ಪಾತ್ರಧಾರಿ ಸುನಿಲ್ ಪಾಂಡೇಶ್ವರ, ತುರುಬ ಕಟ್ಟುವ ಹದನ ನಾಟಕದದುರ್ಯೋಧನ ಪಾತ್ರಧಾರಿ ಶರತ್ ಕುಮಾರ್ ಇ.ಜಿ., ರಂಗಪಯಣ ಬೆಂಗಳೂರು ತಂಡದ ಪೂಲನ್ ದೇವಿ ನಾಟಕದ ಪೂಲನ್ ದೇವಿ ಪಾತ್ರಧಾರಿಣಿ ನಯನಾ ಜೆ.ಸೂಡ.

Latest Videos

undefined

Dharmasthala Laksha Deepotsava: ಸಿರಿ ವಾನಳ್ಳಿಯವರ ಏಕ ವ್ಯಕ್ತಿ ನಾಟಕ, ರಸಮಂಜರಿಯ ರಸದೌತಣ

ಶ್ರೇಷ್ಠ ನಿರ್ದೇಶಕ: ಪ್ರಥಮ-ವಾಲಿವಧೆ ನಾಟಕದ ಗಣೇಶ್ ಮಂದಾರ್ತಿ(10,000ರೂ. ನಗದು ಹಾಗೂ ಪರ್ಯಾಯ ಫಲಕ), ದ್ವಿತೀಯ- ತುರುಬ ಕಟ್ಟುವ ಹದನ ನಾಟಕದ ಶ್ರೀಕಾಂತ್ ಕುಮುಟಾ (6,000ರೂ. ನಗದು ಮತ್ತು ಸ್ಮರಣಿಕೆ), ತೃತೀಯ- ಸಂಚಯ ಟ್ರಸ್ಟ್ ಬೆಂಗಳೂರು ತಂಡದ ತದ್ರೂಪಿ ನಾಟಕದ ಜೋಸೆಫ್ ಜಾನ್ (4,000ರೂ. ನಗದು ಮತ್ತು ಸ್ಮರಣಿಕೆ).

  • ಶ್ರೇಷ್ಠ ನಟ: ಪ್ರಥಮ- ವಾಲಿವಧೆ ನಾಟಕದ ವಾಲಿ ಪಾತ್ರಧಾರಿ ದೇವಿ ಪ್ರಸಾದ ವೈ., ದ್ವಿತೀಯ- ವಾಲಿವಧೆ ನಾಟಕದ ಸುಗ್ರೀವ ಪಾತ್ರಧಾರಿ ಸಿದ್ದು ಎಸ್.ಕೆ., ತೃತೀಯ- ತದ್ರೂಪಿ ನಾಟಕದ ಜನರಲ್ ಪೋಪಟ್ ಪಾತ್ರಧಾರಿ ಕೀರ್ತಿಭಾನು ಎಂ.ವಿ. 
  • ಶ್ರೇಷ್ಠ ನಟಿ: ಪ್ರಥಮ-ಕೊಳ್ಳಿ ನಾಟಕದ ದೌಪದಿ ಪಾತ್ರಧಾರಿಣಿ ಪ್ರಿಯಾ ಬ್ರಹ್ಮಾವರ, ದ್ವಿತೀಯ- ಉಡುಪಿ ಸುಮನಸಾ ಕೊಡವೂರು ತಂಡದ ಅರುಂಧತಿ ಆಲಾಪ ನಾಟಕದ ಆರುಂದತಿ ಪಾತ್ರಧಾರಿಣಿ ಪ್ರಜ್ಞಾಶ್ರೀ ಹಾಗೂ ಭೂಮಿಕಾ ಹಾರಾಡಿ ತಂಡದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕದ ಶೀಲವತಿ ಪಾತ್ರಧಾರಿಣಿ ರಂಜಿತಾ ಶೇಟ್, ತೃತೀಯ- ಕೊಳ್ಳಿ ನಾಟಕದ ಉಜ್ಜಿ ಪಾತ್ರಧಾರಿಣಿ ಶ್ವೇತಾ ಮಣಿಪಾಲ.
  • ಸಂಗೀತ: ಪ್ರಥಮ- ವಾಲಿವಧೆ ನಾಟಕದ ಅನುಷ್ ಶೆಟ್ಟಿ,ದ್ವಿತೀಯ- ತುರುಬ ಕಟ್ಟುವ ಹದನ ನಾಟಕದ ಶ್ರೀಪಾದ್ ತೀರ್ಥಹಳ್ಳಿ, ತೃತೀಯ- ಕೊಳ್ಳಿ ನಾಟಕದ ವಾಸುದೇವ ಗಂಗೇರ, 

Mysuru News: ಟಿಪ್ಪು ಕುರಿತ ನಾಟಕ ರದ್ದುಪಡಿಸಲು ದಲಿತ ಮಹಾಸಭಾ ಆಗ್ರಹ

  • ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರಥಮ- ತುರುಬ ಕಟ್ಟುವ ಹದನ ನಾಟಕ, ದ್ವಿತೀಯ- ವಾಲಿವಧೆ ನಾಟಕ, ತೃತೀಯತೃ- ಸೂರ್ಯಾ ಸ್ತದಿಂದ ಸೂರ್ಯೋದಯದವರೆಗೆ ನಾಟಕ.
  • ಶ್ರೇಷ್ಠ ಪ್ರಸಾಧನ: ಪ್ರಥಮ- ತುರುಬ ಕಟ್ಟುವ ಹದನ ನಾಟಕದ ನಿರಂಜನ್ ಪವರ್, ದ್ವಿತೀಯ- ವಾಲಿವಧೆ ನಾಟಕದ ಪೃಥ್ವಿನ್ ಕೆ.ವಾಸು, ತೃತೀಯ- ಕೊಳ್ಳಿ ನಾಟಕದ ರಮೇಶ್ ಕಪಿಲೇಶ್ವರ, 
  • ಶ್ರೇಷ್ಠ ರಂಗ ಬೆಳಕು: ಪ್ರಥಮ- ಕೊಳ್ಳಿ ನಾಟಕದ ರಾಜು ಮಣಿಪಾಲ, ದ್ವಿತೀಯ- ವಾಲಿವಧೆ ನಾಟಕದ ಪೃಥ್ವಿನ್ ಕೆ.ವಾಸು, ತೃತೀಯ- ತುರುಬ ಕಟ್ಟುವ ಹದನ ನಾಟಕದ ಚಂದನ್ ಶಿವಮೊಗ್ಗ, 
  • ಶ್ರೇಷ್ಠ ಹಾಸ್ಯ ನಟನೆ: ಪ್ರಥಮ- ತುರುಬ ಕಟ್ಟುವ ಹದನ ನಾಟಕದ ಉತ್ತರ ಕುಮಾರ ಪಾತ್ರಧಾರಿ ನಂದನ್ ಎಂ.ಎಸ್. 
  • ಶ್ರೇಷ್ಠ ಬಾಲ ನಟನೆ: ವಾಲಿವಧೆ ನಾಟಕದ ಬಾಲ ಸುಗ್ರೀವ ಪಾತ್ರಧಾರಿ ಉದಯ್ ಬಿ.

ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭವು 2023ರ ಜನವರಿ 3ನೇ ವಾರದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ವಾಲಿವಧೆ ನಾಟಕದ ಮರು ಪ್ರದರ್ಶನ ಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

click me!