ಅಮೆರಿಕಾದಲ್ಲಿ ಸುಗುಣೇಂದ್ರ ತೀರ್ಥರು: ಶುದ್ಧ ದೇಸಿ ಹಸು ಸಾಕಿದ ದಾಸ್‌ ಮನೆಯಲ್ಲಿ ಗೋಪೂಜೆ

Published : Aug 28, 2022, 02:25 PM ISTUpdated : Aug 28, 2022, 02:27 PM IST
ಅಮೆರಿಕಾದಲ್ಲಿ ಸುಗುಣೇಂದ್ರ ತೀರ್ಥರು: ಶುದ್ಧ ದೇಸಿ ಹಸು ಸಾಕಿದ ದಾಸ್‌ ಮನೆಯಲ್ಲಿ ಗೋಪೂಜೆ

ಸಾರಾಂಶ

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಮೆರಿಕದಲ್ಲಿ ಅಪರೂಪದ ಮನೆಯೊಂದಕ್ಕೆ ಭೇಟಿ ನೀಡಿದರು. ತಮ್ನ ಮನೆಯಲ್ಲಿಯೇ  ಗೋಶಾಲೆಯನ್ನು ನಿರ್ಮಿಸಿ ಹಸುಗಳನ್ನು  ಸಾಕಿಕೊಂಡಿರುವ ಮತ್ತು ಇಂಜಿನಿಯರ್ ಆಗಿರುವ  ಶ್ರೀಕೃಷ್ಣ ಪುರುಷೋತ್ತಮ ದಾಸ್ ರವರ ಮನೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು .

ಉಡುಪಿ: ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 49ನೇ ಚಾತುರ್ಮಾಸ್ಯ ಸದ್ಯ ಅಮೆರಿಕಾದಲ್ಲಿ ನಡೆಯುತ್ತಿದೆ. ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಿಗೆ ಖುಷಿ ಕೊಟ್ಟಿದೆ. ನೂರಾರು ಕೃಷ್ಣಭಕ್ತರು ಚಾತುರ್ಮಾಸ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಡುವೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಮೆರಿಕದಲ್ಲಿ ಅಪರೂಪದ ಮನೆಯೊಂದಕ್ಕೆ ಭೇಟಿ ನೀಡಿದರು. ತಮ್ನ ಮನೆಯಲ್ಲಿಯೇ  ಗೋಶಾಲೆಯನ್ನು ನಿರ್ಮಿಸಿ ಹಸುಗಳನ್ನು  ಸಾಕಿಕೊಂಡಿರುವ ಮತ್ತು ಇಂಜಿನಿಯರ್ ಆಗಿರುವ  ಶ್ರೀಕೃಷ್ಣ ಪುರುಷೋತ್ತಮ ದಾಸ್ ರವರ ಮನೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು .

ಇವರ ತಮ್ಮ ಶ್ರೀ ರಾಮದಾಸಪ್ರಭು ಇವರು ಉಡುಪಿ ಸಮೀಪದ ಹೆಬ್ರಿಯಲ್ಲಿ ಬೃಹತ್ ಗೋಶಾಲೆಯೊಂದನ್ನು ನಡೆಸುತ್ತಿದ್ದಾರೆ. ಕಳೆದ ಬಾರಿ  ಸ್ವಾಮೀಜಿ ಹೆಬ್ರಿಗೆ ಬಂದಾಗ ಬೃಹತ್ ಗೋಶಾಲೆಯೊಂದಕ್ಕೆ ಶಿಲಾನ್ಯಾಸ ಮಾಡಿದ್ದು  ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ. ಗೋಪೂಜೆಯ ಬಳಿಕ ಮಾತನಾಡಿದ ಶ್ರೀ ಸುಗುಣೇಂದ್ರ ತೀರ್ಥರು, ಗೋ ರಕ್ಷಣೆ ಬಗೆಗೆ ಇರುವ ಕಾಳಜಿಯನ್ನು ಮೆಚ್ಚಿ ಶುಭಹಾರೈಸಿದರು . ಇಲ್ಲಿರುವ ದೇಸೀ ಗೋ ತಳಿ ಗೀರ್ ಜಾತಿಯ ದನ ಕರುಗಳಿಗೆ ಲಕ್ಷ್ಮಿ , ರುಕ್ಮಿಣಿ ಎಂದೂ  ಹೋರಿಯೊಂದಕ್ಕೆ  ಗಿರಿರಾಜ  ಎಂದು ನಾಮಕರಣ ಮಾಡಲಾಗಿದೆ.

ಸ್ಯಾನ್‌ ಹೋಸೆ ತಂತ್ರಜ್ಞಾನದ  ಕಾಶಿ

ಅಮೆರಿಕಾದ ಸ್ಯಾನ್‌ ಹೋಸೆಯಲ್ಲೇ ಜಗದ್ಗುರು ಶ್ರೀಮದಾನಂದತೀರ್ಥರ  ಮೂಲಸಂಸ್ಥಾನವಾದ ಪುತ್ತಿಗೆಮಠದ ಸ್ವಾಮಿಗಳಾದ  ಶ್ರೀಸುಗುಣೇಂದ್ರತೀರ್ಥರು ಈ ವರ್ಷ ತಮ್ಮ ಚಾತುರ್ಮಾಸ್ಯವನ್ನು ನೆರವೇರಿಸುತ್ತಿದ್ದಾರೆ. ಶ್ರೀಮದ್ಭಗವದ್ಗೀತೆಯ ಉಪದೇಶಾಮೃತವನ್ನು ಜಗದುದ್ದಗಲಕ್ಕೂ ಪಸರಿಸಲು ದೀಕ್ಷಾಬದ್ಧರಾದ ಶ್ರೀಗಳ ಕಾರ್ಯವ್ಯಾಪ್ತಿಯಲ್ಲಿ  ಸ್ಯಾನ್‌ ಹೋಸೆಯ ತಂತ್ರಜ್ಞಾನೋದ್ಯಮ ವಲಯವೂ ಸೇರಿರುವುದು ವಿಶೇಷವಾಗಿದೆ.

ಹಣದ ಬಿಕ್ಕಟ್ಟು ನಿವಾರಣೆಗೆ ಈ 5 ವಸ್ತು ಮನೆಯ ಪೂಜಾಗೃಹದಲ್ಲಿರಿಸಿ

ಶ್ರೀಗಳ ಆದೇಶದಂತೆ 2022 ರ ಚಾತುರ್ಮಾಸ್ಯ ಸೇವಾ ಸಮಿತಿಯು ಸ್ಪಿರಿಚುಲವಲ್‌ ಎಕಾನಮಿಯ ಒಂದು ಶೃಂಗಸಭೆಯನ್ನು  ಸ್ಯಾನ್‌ ಹೋಸೆಯ ಶ್ರೀಕೃಷ್ಣ ವೃಂದಾವನದಲ್ಲಿ (ಆಗಸ್ಟ್‌ 27)  ಶನಿವಾರ ಬೆಳಗ್ಗೆ ಆಯೋಜಿಸಲಾಗಿತ್ತು. ಸಿಲಿಕಾನ್ ವ್ಯಾಲಿಯ ಸುಮಾರು ನಲವತ್ತು ಕಂಪನಿಗಳ ಧುರೀಣರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅನೇಕರು ಸಕುಟುಂಬ ಸಮೇತರಾಗಿ ಆಗಮಿಸಿದ್ದರು. ಶ್ರೀಗಳು ಭಗವದ್ಗೀತೆಯ ಉಪದೇಶಗಳನ್ನು  ಕಂಪನಿಗಳ ಧುರೀಣರು ತಮ್ಮ ಕಾರ್ಯನಿರ್ವಹಣೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸುಲಭವಾದ ಸರಳವಾದ ಇಂಗ್ಲೀಷಿನಲ್ಲಿ ಸುಮಾರು ಒಂದು ಗಂಟೆಗಳಷ್ಟು ಕಾಲ ತಿಳಿಸಿದರು.

ದೇಶಿ ಹಸು ಸಾಕುವವರೇ ಗಮನಿಸಿ! ಹಾಲಿಗೆ ಕೆಎಂಎಫ್ ಕೊಡುತ್ತೆ ಅಧಿಕ ಬೆಲೆ!

ಬಳಿಕ ಪಾಲ್ಗೊಂಡಿದ್ದವರಲ್ಲಿ ಅನೇಕರು ಕೇಳಿದ ಪ್ರಶ್ನೆಗಳಿಗೆ ಸೂಕ್ತವಾದ ಪರಿಹಾರಗಳನ್ನು ಶ್ರೀಗಳು ಸೂಚಿಸಿದರು. ಮೂರಕ್ಕೂ ಹೆಚ್ಚು ಗಂಟೆಗಳ ಈ  ಸ್ಪಿರಿಚುಲವಲ್‌ ಎಕಾನಮಿಯ ಒಂದು ಶೃಂಗಸಭೆಯು ಸಾರ್ಥಕ್ಯ ಭಾವದಲ್ಲಿ ಸಂಪನ್ನವಾಯ್ತು ಎಂದು ಭಾಗವಹಿಸಿದ  ಸದಸ್ಯರು ತಿಳಿಸಿದ್ದಾರೆ.
 

PREV
Read more Articles on
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌