ರಾಜ್ಯದ ಗೃಹಸಚಿವರೇ ಉಸ್ತುವಾರಿಯಾಗಿರುವ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಎಸ್ಪಿ ಅವರ ವರ್ಗಾವಣೆಯನ್ನು ರದ್ದುಗೊಳಿಸುವ ಗೃಹ ಇಲಾಖೆಯ ಆದೇಶ ಅಚ್ಚರಿಗೆ ಕಾರಣವಾಗಿದೆ.
ಉಡುಪಿ(ಜ.02): ಉಡುಪಿಯ ಹೊಸ ಎಸ್ಪಿಯಾಗಿ ಕಲಬುರ್ಗಿ ಎಎಸ್ಪಿ ಅಕ್ಷಯ್ ಹಾಕೆ ಮಚ್ಚಿಂದ್ರ ಅವರ ವರ್ಗಾವಣೆಯನ್ನು ರದ್ದುಗೊಳಿಸಿ, ಅವರ ಬದಲಿಗೆ, ಬೆಂಗಳೂರು ನಗರ ಉಪಾಯುಕ್ತ (ಆಡಳಿತ)ರಾಗಿರುವ ಎನ್.ವಿಷ್ಣುವರ್ಧನ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಜ್ಯದ ಗೃಹಸಚಿವರೇ ಉಸ್ತುವಾರಿಯಾಗಿರುವ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಎಸ್ಪಿ ಅವರ ವರ್ಗಾವಣೆಯನ್ನು ರದ್ದುಗೊಳಿಸುವ ಗೃಹ ಇಲಾಖೆಯ ಆದೇಶ ಅಚ್ಚರಿಗೆ ಕಾರಣವಾಗಿದೆ.
ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಮುಗಿಯಲು ಕನಿಷ್ಠ 3 ತಿಂಗಳು..!
ಕಳೆದ ಫೆಬ್ರವರಿ ತಿಂಗಳಲ್ಲಿ ನಿಷಾ ಜೇಮ್ಸ್ ಅವರು ಉಡುಪಿಯ ಎಸ್ಪಿಯಾಗಿ ಬಂದಿದ್ದರು. ಆದರೆ ವರ್ಷ ಕಳೆಯುವದೊಳಗೆ ಅವರನ್ನು ವರ್ಗಾವಣೆ ಮಾಡಿ, ಮಂಗಳವಾರ ಅವರ ಜಾಗಕ್ಕೆ ಅಕ್ಷಯ್ ಹಾಕೆ ಮಚ್ಚಿಂದ್ರ ಅವರನ್ನು ಆದೇಶಿಸಲಾಗಿತ್ತು. ಅವರು ಉಡುಪಿಗೆ ಬಂದು ಅಧಿಕಾರ ಸ್ವೀಕಾರಕ್ಕೆ ಮೊದಲೇ ಅವರನ್ನು ಕಾರ್ಕಳದ ನಕ್ಸಲ್ ನಿಗ್ರಹ ಪಡೆಗೆ ಎಸ್ಪಿಯಾಗಿ ವರ್ಗ ಮಾಡಲಾಗಿದೆ.
ಉಡುಪಿ ಎಸ್ಪಿಯಾಗಿ ವಿಷ್ಣುವರ್ಧನ್ ಅವರನ್ನು ವರ್ಗಗೊಳಿಸಲಾಗಿದೆ. 2015ನೇ ಬ್ಯಾಚಿನ ಅಧಿಕಾರಿಯಾಗಿರುವ ಅವರು ಈ ಹಿಂದೆ ಕಾರ್ಕಳದ ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.
ವಿದೇಶದಿಂದ ಬಂದ ಮೇಸೇಜ್‌ಗಳಿಂದ ಮಂಗಳೂರಲ್ಲಿ ಗಲಭೆ..?