ಬೆಂಗಳೂರಿನಿಂದ 2000 ಕಿ.ಮೀ ಅತೀ ದೂರದ ಬಸ್‌ ಸೇವೆ

By Kannadaprabha NewsFirst Published Jan 2, 2020, 8:30 AM IST
Highlights

ಬೆಂಗಳೂರಿನಿಂದ ಅತೋ ದೂರದ ಪ್ರದೇಶಕ್ಕೆ ಬಸ್ ಸೇವೆಯೊಂದು ಇರುವುದು ತಿಳಿದು ಬಂದಿದೆ. 2000 ಕಿ.ಮೀ ಕ್ರಮಿಸುವ ಈ ಬಸ್ ಬರೋಬ್ಬರಿ ಎರಡು ದಿನ ತೆಗೆದುಕೊಳ್ಳುತ್ತದೆ. 

ನವದೆಹಲಿ [ಜ.02]: ಸಿಲಿಕಾನ್‌ ಸಿಟಿ ಬೆಂಗಳೂರಿನಿಂದ ರಾಜಸ್ಥಾನದ ಜೈತರಾನ್‌ಗೆ ತೆರಳುವ ಖಾಸಗಿ ಬಸ್ಸೊಂದು ದೇಶದ ಅತೀ ಉದ್ದದ ದಾರಿ ಕ್ರಮಿಸುವ ಬಸ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ರೆಡ್‌ ಬಸ್‌ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದ್ದು, ಖಾಸಗಿ ಸಂಸ್ಥೆಗೆ ಸೇರಿದ ಎಂಆರ್‌ ಟ್ರಾವೆಲ್ಸ್‌ ಪ್ರತಿ ದಿನ ಸಂಜೆ ಬೆಂಗಳೂರಿನ ಆನಂದ್‌ ರಾವ್‌ ವೃತ್ತದಿಂದ ಸಂಜೆ ಏಳು ಗಂಟೆಗೆ ಹೊರಟು, ಎರಡು ದಿನಗಳ ಬಳಿಕ ಬೆಳಿಗ್ಗೆ 8.30ಕ್ಕೆ ರಾಜಸ್ಥಾನದ ಪಾಲಿ ಜಿಲ್ಲೆಯ ಜೈತರಾನ್‌ಗೆ ತಲುಪುತ್ತದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಟ್ಟು 37 ಗಂಟೆ 30 ನಿಮಿಷದಲ್ಲಿ 1954 ಕಿಲೋ ಮೀಟರ್‌ ಕ್ರಮಿಸುವ ಈ ಬಸ್‌ ದರ 3500 ರು. ಇದೆ. ಇದೇ ದೇಶದಲ್ಲೇ ಅತ್ಯಂತ ಹೆಚ್ಚು ದೂರ ಕ್ರಮಿಸುವ ಬಸ್ ಸೇವೆ ಆಗಿದೆ.  

ದೇಶದ ಯಾವುದೇ ಪ್ರದೇಶಕ್ಕೂ ಕೂಡ ಇಷ್ಟು ದೂರದ ಬಸ್ ಸೇವಾ ಸೌಲಭ್ಯವಿಲ್ಲ. 

click me!