ಬಳ್ಳಾರಿ: ವಿಜಯಪುರ-ಯಶವಂತಪುರ ರೈಲು ವೇಳೆ ಬದಲಿಸಲು ಒತ್ತಾಯ

By Suvarna News  |  First Published Jan 2, 2020, 8:41 AM IST

ವಿಜಯಪುರ-ಯಶವಂತಪುರ ರೈಲು ವೇಳಾಪಟ್ಟಿ ಪರಿಷ್ಕರಿಸಿದ ದಕ್ಷಿಣ ಮಧ್ಯೆರೈಲ್ವೆ ವಿಭಾಗ| ಜಿಲ್ಲೆಯ ಪಶ್ಚಿಮ ತಾಲೂಕುಗಳ ಪ್ರಯಾಣಿಕರಿಗೆ ಅನುಕೂಲಕ್ಕಿಂತ, ಅನಾನುಕೂಲವೇ ಹೆಚ್ಚು| ಈ ಭಾಗದ ಪ್ರಯಾಣಿಕರಿಗೆ ಪರಿಷ್ಕೃತ ವೇಳೆಯಲ್ಲಿ ರೈಲು ಸಂಚಾರ ಮಾಡಲು ಸೂಕ್ತವಾಗಿಲ್ಲ| ತಕ್ಷಣವೇ ಬಳ್ಳಾರಿ ಸಂಸದರು, ಪರಿಷ್ಕತ ವೇಳಾಪಟ್ಟಿ ಬದಲಿಸಲು ಸೂಚಿಸಬೇಕು|


ಮರಿಯಮ್ಮನಹಳ್ಳಿ(ಜ.02): ವಿಜಯಪುರ-ಯಶವಂತಪುರ ರೈಲು ವೇಳಾಪಟ್ಟಿಯನ್ನು ದಕ್ಷಿಣ ಮಧ್ಯೆರೈಲ್ವೆ ವಿಭಾಗವು ಪರಿಷ್ಕರಿಸಿ ಪ್ರಕಟಿಸಿದ್ದು, ಈ ಹಿಂದೆ ವಿಜಯಪುರದಿಂದ ಮಧ್ಯಾಹ್ನ 1.30ಕ್ಕೆ ಹೊರಟು ಮರಿಯಮ್ಮನಹಳ್ಳಿಗೆ ಸಂಜೆ 7.15ಕ್ಕೆ ತಲುಪುತ್ತಿತ್ತು. ಯಶವಂತಪುರದಿಂದ ಸಂಜೆ 4.15ಕ್ಕೆ ಹೊರಟು ಮಧ್ಯೆರಾತ್ರಿ 1 ಗಂಟೆಗೆ ಮರಿಯಮ್ಮನಹಳ್ಳಿ ತಲುಪುತ್ತಿತ್ತು. ಆದರೆ ಜನವರಿ 1 ರಿಂದ ಜಾರಿಗೆ ಬರುವಂತೆ ರೈಲ್ವೆ ಇಲಾಖೆ ವೇಳಾಪಟ್ಟಿಯನ್ನು ಬದಲಿಸಿದೆ.

ಮರಿಯಮ್ಮನಹಳ್ಳಿಗೆ ವಿಜಯಪುರದಿಂದ ಸಂಜೆ 7.15ಕ್ಕೆ ಬರುತ್ತಿದ್ದ ರೈಲು ಈಗ ಮಧ್ಯರಾತ್ರಿ 1.36ಕ್ಕೆ ಬರಲಿದೆ. ಯಶವಂತಪುರಕ್ಕೆ ಬೆಳಗ್ಗೆ 6 ಗಂಟೆಗೆ ತಲುಪಲಿದೆ. ಇದರಿಂದ ಬೆಂಗಳೂರಿಗೆ ತೆರಳುವವರಿಗೆ ಅನಾನುಕೂಲದ ಜೊತೆಗೆ ಮರಿಯಮ್ಮನಹಳ್ಳಿ ನಿಲ್ದಾಣದಿಂದ ಮುಂದಿನ ಎಲ್ಲಾ ನಿಲ್ದಾಣಗಳಲ್ಲೂ ಪ್ರಯಾಣಿಕರ ಕೊರತೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇದರಿಂದ ವರಮಾನಕ್ಕೂ ಕೋತ ಬೀಳುತ್ತದೆ. ತಕ್ಷಣವೇ ರೈಲ್ವೆ ಇಲಾಖೆಯು ವಿಜಯಪುರದಿಂದ ಸಂಜೆ 4.15ರ ಬದಲಾಗಿ, ಮಧ್ಯಾಹ್ನ ವೇಳೆ ಆರಂಭವಾದರೆ, ಪಟ್ಟಣಕ್ಕೆ ರಾತ್ರಿ 10.11ಕ್ಕೆ ಗಂಟೆಗೆ ತಲುಪಬಹುದು. ಪರಿಷ್ಕೃತ ವೇಳಾ ಪಟ್ಟಿಯನ್ನು ಬದಲಿಸಿದರೆ ರೈಲು ಮೊದಲಿನಂತೆಯೆ ತನ್ನ ವರಮಾನ ಕಾಯ್ದು ಕೊಳ್ಳಬಹುದು ಎಂಬುದು ಪ್ರಯಾಣಿಕರ ಒತ್ತಾಯಿಸುತ್ತಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

‘ವಿಜಯಪುರ- ಯಶವಂತಪುರ ರೈಲಿನ ವೇಳಾ ಪಟ್ಟಿಯನ್ನು ದಕ್ಷಿಣ ಮಧ್ಯೆ ರೈಲ್ವೆಯು ಪರಿಷ್ಕರಿಸಿ ಪ್ರಕಟಿಸಿರುವುದು ಜಿಲ್ಲೆಯ ಪಶ್ಚಿಮ ತಾಲೂಕುಗಳ ಪ್ರಯಾಣಿಕರಿಗೆ ಅನುಕೂಲಕ್ಕಿಂತ, ಅನಾನುಕೂಲವಾಗಿದೆ. ಇದರಿಂದ ಈ ಭಾಗದ ಪ್ರಯಾಣಿಕರಿಗೆ ಪರಿಷ್ಕೃತ ವೇಳೆಯಲ್ಲಿ ರೈಲು ಸಂಚಾರ ಮಾಡಲು ಸೂಕ್ತವಾಗಿಲ್ಲ. ತಕ್ಷಣವೇ ಬಳ್ಳಾರಿ ಸಂಸದರು, ಪರಿಷ್ಕತ ವೇಳಾಪಟ್ಟಿಯನ್ನು ಬದಲಿಸಲು ಸೂಚಿಸಬೇಕು ಎಂದು ಮರಿಯಮ್ಮನಹಳ್ಳಿ ವರ್ತಕರಾದ ಡಿ. ರಾಘವೇಂದ್ರಶೆಟ್ಟಿ, ಎಂ. ವಿಶ್ವನಾಥ ಶೆಟ್ಟಿ, ಜಿ. ಸತ್ಯನಾರಾಯಣ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
 

click me!