ರಾಯಚೂರು: ಟಂಟಂ-ಕಾರು ಅಪಘಾತ, ಇಬ್ಬರ ಸಾವು

Kannadaprabha News   | Asianet News
Published : Mar 24, 2021, 03:23 PM IST
ರಾಯಚೂರು: ಟಂಟಂ-ಕಾರು ಅಪಘಾತ, ಇಬ್ಬರ ಸಾವು

ಸಾರಾಂಶ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಸಮೀಪ ನಡೆದ ಘಟನೆ| ಇಬ್ಬರಿಗೆ ಗಾಯ| ಗಾಯಾಳುಗಳಿಗೆ ಇವರನ್ನು ರಾಯಚೂರು ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ| ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲು| 

ರಾಯಚೂರು(ಮಾ.24): ಚಾಲಕನ ನಿಯಂತ್ರಣ ತಪ್ಪಿದ ಟಂಟಂ ಆಟೋ-ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಸಮೀಪ ಮಂಗಳವಾರ ಸಂಭವಿಸಿದೆ. 

ಮಾನ್ವಿ ತಾಲೂಕಿನ ಗಣಮೂರು ಗ್ರಾಮದ ಟಂಟಂ ಆಟೋ ಚಾಲಕ ದೇವಪ್ಪ (22), ಚೀಕಲಪರ್ವಿ ಗ್ರಾಮದ ಕೃಷ್ಣಯ್ಯ ಭಾಸ್ಕರರಪ್ಪ ಚೀಕಲಪರ್ವಿ (45) ಮೃತ ದುರ್ದೈವಿಗಳಾಗಿದ್ದಾರೆ. 

ಯಲ್ಲಾಪುರ: ಟಿಪ್ಪರ್‌-ಲಾರಿ ನಡುವೆ ಸಿಲುಕಿದ ಬೊಲೆರೋ, ಇಬ್ಬರ ದುರ್ಮರಣ

ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಇವರನ್ನು ರಾಯಚೂರು ರಿಮ್ಸ್‌ ಬೋಧಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟಂಟಂ ಆಟೋ ರಾಯಚೂರಿನಿಂದ ಮಾನ್ವಿಯತ್ತೆ ಹೋಗುತ್ತಿದ್ದ ಸಮಯಲ್ಲಿ ಆಕಡೆಯಿಂದ ಬರುತ್ತಿದ್ದ ಕಾರಿನ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ಅಪಘಾವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!