ಹೊಸಪೇಟೆಗೆ ಮತ್ತೆ ಎರಡು ಹೊಸ ರೈಲು..!

By Kannadaprabha NewsFirst Published Aug 28, 2023, 3:30 AM IST
Highlights

ಕಳೆದ ಐದು ವರ್ಷಗಳಿಂದ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಹೋರಾಟ, ರೈಲ್ವೆ ಸಲಹಾ ಸಮಿತಿಯ ಬಾಬುಲಾಲ್‌ ಜೈನ್‌, ಬಳ್ಳಾರಿ, ಕೊಪ್ಪಳ, ಭಾಗಲಕೋಟೆ, ವಿಜಯಪುರ ಸಂಸದರ ಸಂಘಟಿತ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವರು ಈ ಎರಡು ರೈಲುಗಳನ್ನು ಹೊಸಪೇಟೆಯವರೆಗೆ ವಿಸ್ತರಿಸಲು ಅನುಮತಿ ನೀಡಿದ್ದಾರೆ. 

ಹೊಸಪೇಟೆ(ಆ.28): ಮುಂಬೈ- ಗದಗ(ಸಿಎಸ್‌ಟಿ ಛತ್ರಪತಿ ಶಿವಾಜಿ ಟರ್ಮಿನಸ್‌) ಮತ್ತು ಸೊಲ್ಲಾಪುರ- ಗದಗ ಈ ಎರಡು ರೈಲುಗಳನ್ನು ಹೊಸಪೇಟೆವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಅನುಮತಿ ನೀಡಿದ್ದು, ಆ. 29ರಂದು ಸಂಚಾರ ಆರಂಭವಾಗಲಿದೆ.

ಕಳೆದ ಐದು ವರ್ಷಗಳಿಂದ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಹೋರಾಟ, ರೈಲ್ವೆ ಸಲಹಾ ಸಮಿತಿಯ ಬಾಬುಲಾಲ್‌ ಜೈನ್‌, ಬಳ್ಳಾರಿ, ಕೊಪ್ಪಳ, ಭಾಗಲಕೋಟೆ, ವಿಜಯಪುರ ಸಂಸದರ ಸಂಘಟಿತ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವರು ಈ ಎರಡು ರೈಲುಗಳನ್ನು ಹೊಸಪೇಟೆಯವರೆಗೆ ವಿಸ್ತರಿಸಲು ಅನುಮತಿ ನೀಡಿದ್ದಾರೆ. ಆ. 29ರಂದು ಸಂಸದರಾದ ವೈ. ದೇವೇಂದ್ರಪ್ಪ ಹಾಗೂ ಕರಡಿ ಸಂಗಣ್ಣ ಅವರು ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ನೂತನ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ

ಮುಂಬೈ ದೇಶದ ವಾಣಿಜ್ಯ ಹಾಗೂ ಆರ್ಥಿಕ ರಾಜಧಾನಿಯಾಗಿದ್ದು, ಮಹಾನಗರದ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ನಿಲ್ದಾಣವು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿದ್ದು, ಈ ಮಾರ್ಗದ ಮತ್ತೊಂದು ತುದಿಯಲ್ಲಿರುವ ಹೊಸಪೇಟೆಯು ವಿಶ್ವ ಪಾರಂಪರಿಕ ತಾಣ ಹಂಪಿಗೆ ಹೊಂದಿಕೊಂಡಿರುವುದರಿಂದ ಎರಡು ವಿಶ್ವ ಪಾರಂಪರಿಕ ಕೇಂದ್ರಗಳ ನಡುವೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಯುರೋಪಿಯನ್‌ ವಾಸ್ತುಶೈಲಿಯಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ನಿಲ್ದಾಣವು ವಿಶ್ವದ ಅತ್ಯಂತ ಆಕರ್ಷಕ ಹಾಗೂ ಸುಂದರ ನಿಲ್ದಾಣವೆಂದು ಹೆಸರಾಗಿದ್ದು, ದೇಶದ ಅತ್ಯಂತ ಹೆಚ್ಚು ಜನನಿಬಿಡ ನಿಲ್ದಾಣಗಳಲ್ಲಿ ಒಂದಾಗಿದೆ. ಅಲ್ಲದೆ ದೇಶದ ಪ್ರಥಮ ಪ್ಯಾಸೆಂಜರ್‌ ರೈಲು 1853ರ ಏ. 16ರಂದು ಛತ್ರಪತಿ ಶಿವಾಜಿ ನಿಲ್ದಾಣ ಹಾಗೂ ಠಾಣೆಗಳ ನಡುವೆ ಸಂಚಾರ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯನಗರ: ಕೈಕೊಟ್ಟ ಮಳೆ, ಒಣಗುತ್ತಿದೆ ಬೆಳೆ..!

ಮುಂಬೈ(ಸಿಎಸ್‌ಎಂಟಿ) ಗಾಡಿ ಸಂಖ್ಯೆ: 11139 ಪ್ರತಿದಿನ ರಾತ್ರಿ 9.20 ಮುಂಬೈನಿಂದ ನಿರ್ಗಮಿಸಿ ಪುಣೆ, ಸೊಲ್ಲಾಪುರ, ವಿಜಯಪುರ, ಗದಗ, ಕೊಪ್ಪಳ ಮಾರ್ಗವಾಗಿ ಸಂಚರಿಸಿ ಮಾರನೇ ದಿನ 12.45ಕ್ಕೆ ಹೊಸಪೇಟೆಗೆ ಆಗಮಿಸಿ ಅಂದೇ ಮಧ್ಯಾಹ್ನ 2 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸಿ ಅದೇ ಮಾರ್ಗವಾಗಿ ಮರುದಿನ ಬೆಳಗ್ಗೆ 5.10 ನಿಮಿಷಕ್ಕೆ ಮುಂಬಯಿ ತಲುಪುವುದು.

ಸೊಲ್ಲಾಪುರ- ಹೊಸಪೇಟೆ ಗಾಡಿ ಸಂಖ್ಯೆ: 11305/306 ಪ್ರತಿದಿನ ಬೆಳಗ್ಗೆ 11.50ಕ್ಕೆ ಅಲ್ಲಿಂದ ನಿರ್ಗಮಿಸಿ, ವಿಜಯಪುರ ಗದಗ ಮಾರ್ಗವಾಗಿ ರಾತ್ರಿ 10 ಗಂಟೆಗೆ ಆಗಮಿಸಿ ಅಂದೇ ರಾತ್ರಿ 12.15ಕ್ಕೆ ಹೊಸಪೇಟೆಯಿಂದ ಅದೇ ಮಾರ್ಗವಾಗಿ ಮರುದಿನ ಬೆಳಗ್ಗೆ 9.30 ಸೊಲ್ಲಾಪುರ ತಲುಪಲಿದೆ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ವೈ. ಯಮುನೇಶ್‌, ಕೆ. ಮಹೇಶ್‌ ತಿಳಿಸಿದ್ದಾರೆ.

click me!