* ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದ ಘಟನೆ
* ಶಬರಿಮಲೆ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವ ವೇಳೆ ನಡೆದ ದುರ್ಘಟನೆ
* ಅಪಘಾತದ ಕ್ಯಾಂಟರ್ ಲಾರಿ ಬಿಟ್ಟು ಚಾಲಕ ಪರಾರಿ
ಚಿಕ್ಕಬಳ್ಳಾಪುರ(ಜ.08): ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ(Collision) ಹೊಡೆದ ಇಬ್ಬರು ಸ್ಥಳದಲ್ಲೇ ಮೃತಪಟ್ಟು(Death) ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಇಂದು(ಶನಿವಾರ) ಬೆಳಗಿನ ಜಾವ ನಡೆದಿದೆ. ಮೃತರನ್ನ ಧರಣೀಶ್ (22) ಹಾಗೂ ನಿರಂಜನ್ ಸಿಂಗ್ (52) ಎಂದು ಗುರುತಿಸಲಾಗಿದೆ. ಮೃತಪಟ್ಟರೆಲ್ಲ ಆಂಧ್ರ ಪ್ರದೇಶದ(Andhra Pradesh) ಅನಂತಪುರ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ಶಬರಿಮಲೆ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಂಚರ್ ಆಗಿದ್ದ ಕಾರನ್ನು ರಸ್ತೆ ಬದಿ ನಿಲ್ಲಿಸಿ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಕಾರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಅಪಘಾತದಲ್ಲಿ ಮೂರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ಕ್ಯಾಂಟರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Accident: ಹಿಟಾಚಿ ಹರಿದು ಮೂರು ವರ್ಷದ ಮಗು ದಾರುಣ ಸಾವು
ನೈಸ್ ರಸ್ತೆಯಲ್ಲಿ ಸರಣಿ ಅಪಘಾತ: ನಾಲ್ವರು ಬಲಿ
ಬೆಂಗಳೂರು: ಭೀಕರ ಸರಣಿ ಅಪಘಾತದಲ್ಲಿ(Accident) ಕಾರ್‌ನಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿರುವ(Dead) ಘಟನೆ ನೈಸ್ ರಸ್ತೆ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ವೆಗನ್‌ಆರ್ ಕಾರ್‌ನಲ್ಲಿದ್ದ ಫಾಸಿಲ್(32) ಮೃತಪಟ್ಟಿದ್ದಾರೆ. ಇನ್ನುಳಿದ ಮೂವರ ಹೆಸರು ತಿಳಿದುಬಂದಿಲ್ಲ. ಬೇರೆ ಕಾರಿನಲ್ಲಿದ್ದ ಇನ್ನಿತರ ನಾಲ್ವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಟ್ರಕ್‌ವೊಂದು ವೆಗನ್‌ಆರ್ ಕಾರಿಗೆ ಗುದ್ದಿದೆ. ವೆಗನ್‌ಆರ್, ಕ್ವಾಲೀಸ್, ಸ್ವಿಫ್ಟ್ ಸೇರಿದಂತೆ ಒಟ್ಟು ಆರು ವಾಹನಗಳ ನಡುವೆ ಡಿಕ್ಕಿ(Collision) ಸಂಭವಿಸಿ ಈ ದುರಂತ ನಡೆದಿದೆ.
ಶುಕ್ರವಾರ ರಾತ್ರಿ 3.45ರ ಸುಮಾರಿಗೆ ತಮಿಳುನಾಡು ನೋಂದಣಿಯ ಲಾರಿಯೊಂದು ಬನ್ನೇರುಘಟ್ಟಕಡೆಯಿಂದ ಕನಕಪುರ ರಸ್ತೆಯ ಕಡೆಗೆ ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಪುರವಂಕರ ಅಪಾರ್ಟ್‌ಮೆಂಟ್ ಬಳಿ ನಿಧಾನಗತಿಯ ವಾಹನ ಸಂಚಾರವಿತ್ತು. ಈ ವೇಳೆ ವೇಗವಾಗಿ ಬಂದ ಲಾರಿಯು ಹಿಂಬದಿಯಿಂದ ವೆಗನ್‌ಆರ್ ಕಾರಿಗೆ ಗುದ್ದಿದೆ. ವೆಗನ್‌ಆರ್ ಕಾರು ಕ್ವಾಲಿಸ್‌ಗೆ ಡಿಕ್ಕಿ ಹೊಡೆದಿದೆ. ರಭಸದಿಂದ ಗುದ್ದಿದ್ದರಿಂದ ವೆಗನ್‌ಆರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕ್ವಾಲಿಸ್, ಸ್ವಿಫ್ಟ್ ಸೇರಿದಂತೆ ಇನ್ನಿತರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಆ ವಾಹನಗಳಲ್ಲಿ ಇದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
Bengaluru Road Accident : ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್
ಅಪಘಾತದಿಂದಾಗಿ ನೈಸ್ ರಸ್ತೆಯಲ್ಲಿ(NICE Road) ಕೆಲ ಸಮಯ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತಗೊಂಡ ವಾಹನಗಳನ್ನು ತಕ್ಷಣ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತದಲ್ಲಿ ಮುಖ್ಯ ಪೇದೆ ಸಾವು
ಹರಪನಹಳ್ಳಿ: ಹಾಸನದಲ್ಲಿ ಕೆಎಸ್‌ಆರ್‌ಪಿಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಲಿದ್ದ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದ ಪಡುಗವನವರ್ ಶಿವರಾಜ (30) ಬೈಕ್(Bike) ಅಪಘಾತದಲ್ಲಿ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ಬೈಕ್‌ಗೆ ಕೆಎಸ್‌ಆರ್‌ಟಿಸಿ(KSRTC) ಬಸ್ ನಡುವೆ ಡಿಕ್ಕಿ ಸಂಭವಿಸಿ ತೀವ್ರ ಗಾಯಗೊಂಡಿದ್ದ ಶಿವರಾಜರನ್ನು ಹಾಸನದ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಸುನೀಗಿದ್ದಾರೆ. ಮೃತರಿಗೆ ಪತ್ನಿ ಮತ್ತು ಒಬ್ಬ ಮಗ, ಒಬ್ಬ ಮಗಳು ಇದ್ದಾರೆ. ಅಂತ್ಯ ಕ್ರಿಯೇ ಸ್ವ-ಗ್ರಾಮವಾದ ಮೈದೂರು ಗ್ರಾಮದಲ್ಲಿ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.