Uttara Kannada: ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಾಂಕ ನಿಗದಿ

By Kannadaprabha NewsFirst Published Jan 8, 2022, 8:13 AM IST
Highlights

*  ದೇವಾಲಯದ ಆವರಣದಲ್ಲಿ ಜಾತ್ರಾ ಮುಹೂರ್ತ ನಿಗದಿ ಸಭೆ
*  ಕೋವಿಡ್‌ ನಿಯಮಕ್ಕೆ ಒಳಪಟ್ಟು ಆಯೋಜಿಸಲು ತೀರ್ಮಾನ
*  ಕೋವಿಡ್‌ ಜನರನ್ನು ನಿಸ್ಸಹಾಯಕ ಸ್ಥಿತಿಗೆ ತಲುಪಿಸಿದೆ
 

ಶಿರಸಿ(ಜ.08): ರಾಜ್ಯದ(Karnataka) ಶಕ್ತಿ ದೇವತೆಗಳಲ್ಲಿ ಒಂದಾದ ಮತ್ತು ಅತಿ ದೊಡ್ಡ ಜಾತ್ರೆ ಎಂದು ಗುರುತಿಸಿಕೊಂಡಿರುವ ಶಿರಸಿಯ ಮಾರಿಕಾಂಬಾ ದೇವಿ(Sirsi Marikamba Devi Fair) ಜಾತ್ರೆಗೆ ಮುಹೂರ್ತ ನಿಗದಿಗೊಂಡಿದೆ. ಮಾ. 15ರಿಂದ 23ರ ವರೆಗೆ ನಡೆಯಲಿದ್ದು, ಸಂಪ್ರದಾಯದಂತೆ, ಕೋವಿಡ್‌(Covid19) ನಿಯಮಕ್ಕೆ ಒಳಪಟ್ಟು ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ.

ದೇವಾಲಯದ(Temple) ಆವರಣದಲ್ಲಿ ಶುಕ್ರವಾರ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ವಿ. ರಾಮಕೃಷ್ಣ ಭಟ್‌ ಕೆರೆಕೈ ಜಾತ್ರಾ ಸಮಯ ತಿಳಿಸಿದರು. ಬಳಿಕ ದೀಪ ಬೆಳಗಿ ಜಾತ್ರಾ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

ಬಳಿಕ ಮಾತನಾಡಿದ ತಹಸೀಲ್ದಾರ್‌ ಎಂ.ಆರ್‌. ಕುಲಕರ್ಣಿ, ಜಾತ್ರೆ ಸುಗಮವಾಗಲು ಈಗಿನಿಂದಲೇ ಜಾಗೃತಿ, ಶ್ರಮ ವಹಿಸಬೇಕಿದೆ. ಕೋವಿಡ್‌ ಜನರನ್ನು ನಿಸ್ಸಹಾಯಕ ಸ್ಥಿತಿಗೆ ತಲುಪಿಸಿದೆ. ತಂಡವಾಗಿ ಕಾರ್ಯ ಕಾರ್ಯ ನಿರ್ವಹಿಸಿ ಜಾತ್ರೆಯನ್ನು ಸುಗಮಗೊಳಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಬರುವ ಜಾತ್ರೆ ಇದಾಗಿದೆ. ಅದರೆ, ಕಳೆದ ಜಾತ್ರೆ ಮುಕ್ತಾಯವಾಗುತ್ತಿದ್ದಂತೆಯೇ ಕೋವಿಡ್‌ ಪ್ರಮಾಣ ಎಲ್ಲೆಡೆ ಕಾಣಿಸಿ ಲಾಕ್‌ಡೌನ್‌(Lockdown) ಆರಂಭಗೊಂಡಿತ್ತು. ಆದರೆ, ಈ ವರ್ಷವೂ ಕೋವಿಡ್‌ ಆತಂಕ ಜನರಲ್ಲಿ ಮನೆ ಮಾಡಿದೆ. ಯಾವುದೇ ಕುಂದು-ಕೊರತೆ ಆಗದಂತೆ ಜಾತ್ರೆ ಸುಗಮವಾಗಿ ನಡೆಯುವಂತೆ ಎಲ್ಲ ಸೇರಿ ಮಾರಿಕಾಂಬೆಯಲ್ಲಿ ಕೇಳಿಕೊಳ್ಳೋಣ. ನೀರು, ಸ್ವಚ್ಛತೆಯ ಎಲ್ಲ ಕಾಳಜಿಯನ್ನು ನಗರಸಭೆ ವಹಿಸಲಿದೆ. ಮಾರಿಕಾಂಬಾ ದೇವಾಲಯದ ಸುತ್ತಲಿನ ರಸ್ತೆ, ಫುಟ್‌ಪಾತ್‌ ನವೀಕರಣಕ್ಕೆ ನಗರಸಭೆ 65 ಲಕ್ಷ ವಿನಿಯೋಗಿಸಲಿದೆ. ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ(Chief Minister of Karnataka) ಅವರಲ್ಲಿಯೂ ವಿನಂತಿಸಿಕೊಳ್ಳಲಿದ್ದೇವೆ ಎಂದರು.

Karnataka Politics: 'ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ದೇಶವನ್ನೇ ಮಾರಾಟ ಮಾಡುತ್ತೆ'

ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿಬೇರೆ ರಾಜ್ಯದವರಿಗೂ ಮಾದರಿ ಆಗುವ ಮಾದರಿಯಲ್ಲಿ ಮಾರಿಕಾಂಬೆ ಜಾತ್ರೆ ನೆರವೇರಿಸೋಣ ಎಂದರು. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕಳೆದ ವರ್ಷ 100 ಬಸ್‌ ತರಿಸಿ, ಗ್ರಾಮೀಣ ಸಾರಿಗೆ ರದ್ದು ಮಾಡದೇ ಕಾರ್ಯಾಚರಣೆ ನಡೆಸಿದ್ದೇವೆ. ಈ ವರ್ಷವೂ ಉತ್ತಮ ಸೇವೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ದೇವಾಲಯದ ಅಧ್ಯಕ್ಷ ರವೀಂದ್ರ ಗಣಪತಿ ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರರಾದ ಜಗದೀಶ ಗೌಡ, ಅಜಯ ನಾಡಿಗ ಇತರರಿದ್ದರು.

ಜಾತ್ರೆ ಮಾಹಿತಿ...

ಜ. 26 : ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು.
ಫೆ. 22: ಪೂರ್ವ ದಿಕ್ಕಿನ ಮೊದಲ ಹೊರಬೀಡು
ಫೆ. 25: ಉತ್ತರ ದಿಕ್ಕಿನ ಎರಡನೇ ಹೊರಬೀಡು
ಮಾ. 1: ಪೂರ್ವ ದಿಕ್ಕಿಗೆ ಮೂರನೇ ಹೊರಬೀಡು
ಮಾ. 4: ರಥಕ್ಕಾಗಿ ವೃಕ್ಷ ಪೂಜೆ, ಉತ್ತರ ದಿಕ್ಕಿಗೆ ನಾಲ್ಕನೇ ಹೊರಬೀಡು
ಮಾ. 8: ದೇವಿಯ ರಥದ ಮರ ತರುವುದು
ಮಾ. 8: ಪೂರ್ವ ದಿಕ್ಕಿಗೆ ಅಂಕೆಯ ಹೊರಬೀಡು
ಮಾ. 9: ಅಂಕೆ ಹಾಕುವುದು, ದೇವಿಯ ವಿಗ್ರಹ ವಿಸರ್ಜನೆ
ಮಾ. 15: ದೇವಿ ರಥದ ಕಲಶ ಪ್ರತಿಷ್ಠೆ, ಸಂಜೆ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ
ಮಾ. 16: ದೇವಿಯ ರಥೋತ್ಸವ
ಮಾ. 16: ಬೆಳಗ್ಗೆ 8.36ರಿಂದ ದೇವಿಯ ಶೋಭಾ ಯಾತ್ರೆ
ಮಾ. 17: ಬೆಳಗ್ಗೆ 5ರಿಂದ ಸೇವೆ ಸ್ವೀಕಾರ
ಮಾ. 23: ಬೆಳಗ್ಗೆ 9.33ರಿಂದ ಜಾತ್ರೆ ಮುಕ್ತಾಯ, ಗದ್ದುಗೆಯಿಂದ ಏಳಲಿರುವ ದೇವಿ.
ಏ. 2: ಯುಗಾದಿಯಂದು ದೇವಿ ದೇವಸ್ಥಾನದಲ್ಲಿ ಪ್ರತಿಷ್ಠೆ
 

click me!