ಕೊಡಗು: ಲಾರಿ, ಬೈಕ್ ಮಧ್ಯೆ ಅಪಘಾತ, ಯುವಕರಿಬ್ಬರ ದುರ್ಮರಣ

By Girish Goudar  |  First Published Jul 16, 2024, 6:09 PM IST

ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಲಾರಿ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
 


ಕೊಡಗು(ಜು.16):  ಲಾರಿ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕರಿಬ್ಬರು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಸಮೀಪ ಇಂದು(ಮಂಗಳವಾರ) ನಡೆದಿದೆ. ಮಂಜು (24), ರಕ್ಷಿತ್(22) ಮೃತ ಯುವಕರು. 

ಮೃತ ಯುವಕರು ಸುಂಟಿಕೊಪ್ಪ ಹಾಗೂ ಗರಗಂದೂರು ಗ್ರಾಮದವರು ಎಂದು ತಿಳಿದು ಬಂದಿದೆ. 

Tap to resize

Latest Videos

ಹೃದಯ ವಿದ್ರಾವಕ ವಿಡಿಯೋ, ರೈಲು ಡಿಕ್ಕಿಯಾಗಿ ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣ ಬಿಟ್ಟ ಆನೆ!

ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಲಾರಿ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!