ಬೆಂಗಳೂರಲ್ಲಿ ಆಕ್ಸಿಡೆಂಟ್ ಆಗಿದೆ, ಪಕ್ಕದಲ್ಲಿ ಪೊಲೀಸರ ಕಾರು ಇದೆ; ಆದ್ರೂ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಿಲ್ಲ!

By Sathish Kumar KH  |  First Published Jul 16, 2024, 5:43 PM IST

ಬೆಂಗಳೂರಿನಲ್ಲಿ ರಾತ್ರಿ ಅಪಘಾತಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗಾಯಾಳುವನ್ನು ಕಾರಿನಲ್ಲಿ ಬಂದ ಪೊಲೀಸರು ನೋಡಿದರೂ ಆಸ್ಪತ್ರೆಗೆ ಸೇರಿಸದೇ ನೋಡುತ್ತಾ ನಿಂತರು..


ಬೆಂಗಳೂರು (ಜು.16): ಬೆಂಗಳೂರಿನಲ್ಲಿ ರಾತ್ರಿ ಅಪಘಾತಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗಾಯಾಳುವನ್ನು ಕಾರಿನಲ್ಲಿ ಬಂದ ಪೊಲೀಸರು ನೋಡಿದರೂ ಆಸ್ಪತ್ರೆಗೆ ಸೇರಿಸದೇ ನೋಡುತ್ತಾ ನಿಂತರು.. ಇದೆಂಥಾ ಸಾರ್ವಜನಿಕ ಸೇವೆ ಪೊಲೀಸರೇ...?

ಬೆಂಗಳೂರಿನಲ್ಲಿ ರಾತ್ರಿ ವೇಳೆ ಬೈಕ್ ಸವಾರನೊಬ್ಬನಿಗೆ ಆಕ್ಸಿಡೆಂಡ್ ಆಗಿದ್ದು, ಕಿವಿಯಲ್ಲಿ ರಕ್ತಸ್ರಾವ ಉಂಟಾಗುತ್ತಿದೆ. ಇಲ್ಲಿ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗಲು ಕಾರಿನಲ್ಲಿ ಬಂದಿದ್ದು, ಗಾಯಾಳುವನ್ನು ನೊಡುತ್ತಾ ನಿಂತಿದ್ದಾರೆ. ಸಾವು ಬದುಕಿನ ನಡುವೆ ಗಾಯಾಳು ಒದ್ದಾಡುತ್ತಿದ್ದರೂ ಪೊಲೀಸರು ಆಂಬುಲೆನ್ಸ್‌ಗಾಗಿ ಕಾಯುತ್ತಾ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ. ಬೆಂಗಳೂರು ಪೊಲೀಸರದ್ದು ಇದೆಂಥಾ ಸಾರ್ವಜನಿಕ ಸೇವೆ ಎಂದು ಸ್ಥಳೀಯ ಜನರು ವಾಗ್ದಾಳಿ ನಡೆಸಿದ್ದಾರೆ.

Tap to resize

Latest Videos

ಹೌದು, ಸಿಲಿಕಾನ್ ಸಿಟಿ ಪೋಲಿಸರು ಮಾನವೀಯತೆ ಮರೆತಂತೆ ಕಾಣುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಯಾದಾಗ ಸ್ಪಂದಿಸುವುದು ಹಾಗೂ ಮಾನವೀಯ ಮೌಲ್ಯಗಳ ಪಾಠವನ್ನು ಮಾಡುವುದಿಲ್ಲವೇ ಎಂಬ ಅನುಮಾನ ಮೂಡಿಸುವಂತಿದೆ ಈ ದೃಶ್ಯ... ಇನ್ನು ಈ ದೃಶ್ಯಾವಳಿನ್ನು ಬೆಂಗಳೂರು ಪೋಲಿಸ್ ಕಮೀಷನರ್ ದಯಾನಂದ್ ಅವರು ಒಮ್ಮೆಯಾದರೂ ನೋಡಿ, ನಿಮ್ಮ ಇಲಾಖಾ ಸಿಬ್ಬಂದಿಗೆ ಮಂಗಳಾರತಿ ಮಾಡಬೇಕಾದ ಸ್ಟೋರಿ ಇದು..

ಬೆಂಗಳೂರು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ: ದಿನಕ್ಕೆ 3 ಪಾಳಿ ಕೆಲಸ ಮಾಡಿಸುತ್ತಿದ್ದರಾ ಮೇಲಧಿಕಾರಿಗಳು?

ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿವೇಣಿ ರಸ್ತೆಯಲ್ಲಿ ತಡರಾತ್ರಿ ವೇಳೆ ವಾಹನ ಸವಾರನೊಬ್ಬ ಅಪಘಾತವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಸಾವು ಬದುಕಿನ ನಡುವೆ ನರಳಾಡುತ್ತಿದ್ದಾನೆ. ಗಾಯಾಳು ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಗಂಭೀರ ಗಾಯವಾಗಿದೆ. ಕಿವಿಯಲ್ಲಿ ರಕ್ತಸ್ರಾವ ಉಂಟಾದಲ್ಲಿ ತುರ್ತು ಚಿಕಿತ್ಸೆ ಸಿಗದೇ ಹೋದರೆ ಪ್ರಾಣವೇ ಹೋಗುತ್ತದೆ.  ಇನ್ನು ಪ್ರಜ್ಞೆಯಿಲ್ಲದೇ ಪ್ರಾಣ ಉಳಿಸಿಕೊಳ್ಳಲು ನರಳುತ್ತಿರುವ ವ್ಯಕ್ತಿಯನ್ನು ನೋಡಿದರೆ ಎಂಥವರ ಮನಸ್ಸೂ ಕೂಡ ನಮ್ಮ ಕೂಲಾದ ಸಹಾಯವನ್ನು ಮಾಡೋಣ ಎಂಬ ಮನಸ್ಸು ಬರುತ್ತದೆ. ಆದರೂ, ಹೊಯ್ಸಳ ವಾಹನದಲ್ಲಿ ಗಸ್ತು ತಿರುಗಲು ಬಂದ ಪೊಲೀಸರು ಈ ಎಲ್ಲ ದೃಶ್ಯವನ್ನು ನೋಡುತ್ತಾ ಮೂಕ ಪ್ರೇಕ್ಷಕರಂತೆ ನಿಂತುಕೊಂಡರೇ ಹೊರತು, ತಾವು ಬಂದಿದ್ದ ಸಾರ್ವಜನಿಕ ಸೇವೆಯಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಯಾವುದೇ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. 

ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಇತರೆ ವಾಹನಗಳ ಸವಾರರು ತಮ್ಮ ಗಾಡಿಗಳನ್ನು ನಿಲ್ಲಿಸಿ ಸಾರ್ ದಯವಿಟ್ಟು ನಿಮ್ಮ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಎಷ್ಟೇ ಮನವಿ ಮಾಡಿದರೂ ಅವರ ಮನಸ್ಸು ಒಂದಷ್ಟು ಮರುಕ ಪಡಲಿಲ್ಲ. ಪೊಲೀಸರಿಗೆ ಮನವಿ ಮಾಡಿದವರಿಗೆ ರೀ.. ಹೊಯ್ಸಳ ಕಾರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಇರುವುದಲ್ಲ. ಯಾವುದಾದರೂ ಆಟೋ ಬಂದರೆ ಕಳಿಸಿಕೊಡ್ತೇವೆ ನೀವೇ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದರು. ಇದಕ್ಕೆ ನೀವು ಬಳಸುವ ಕಾರು ಸಾರ್ವಜನಿಕರ ಸೇವೆಗೆ ಇರುವುದಲ್ಲವೇ ಅದರಲ್ಲಿ ಕೂಡಲೇ ಆಸ್ಪತ್ರೆಗೆ ರವಾನಿಸೋಣ, ಆತನ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಹೀಗೆಯೇ ಬಿಟ್ಟರೆ ಪ್ರಾಣವೇ ಹೋಗಬಹುದು. ಆತನ ಪ್ರಾಣ ಹೋದರೆ ಅವರ ಕುಟುಂಬವನ್ನು ನೀವು ನೋಡಿಕೊಳ್ಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟಾದರೂ ಪೊಲೀಸರು ಮಾತ್ರ ಕ್ಯಾರೇ ಎನ್ನಲ್ಲಿಲ್ಲ.

Bengaluru: ತುಂತುರು ಮಳೆಯಲ್ಲಿ ರಸ್ತೆ ಮದ್ಯದಲ್ಲಿಯೇ ಕಿಸ್ಸಿಂಗ್, ಹಗ್ಗಿಂಗ್ ಮಾಡಿದ ಬೆಂಗಳೂರಿನ ಲಜ್ಜೆಗೆಟ್ಟ ಜೋಡಿ!

ಸರ್... ಪೊಲೀಸ್ ಇಲಾಖೆ ಕಾರಿನಲ್ಲಿ ಈತನನ್ನು ಆಸ್ಪತ್ರೆಗೆ ಸಾಗಿಸೋಣ ಬನ್ನಿ ಎಂದರೂ ಆಂಬುಲೆನ್ಸ್ ಬರ್ಲಿ ಇರ್ರೀ... ಎಂದು ಉಡಾಫೆಯಾಗಿ ವರ್ತನೆ ತೋರಿದ್ದಾರೆ. ನಿಮ್ಮ ನಿರ್ಲಕ್ಷ್ಯವನ್ನು ಮಾಧ್ಯಮಗಳ ಮುಂದೆ ವಿಡಿಯೋ ಮಾಡಿ ಕೊಡುವುದಾಗಿ ಹೇಳಿದರೂ ಯಾವೊಬ್ಬ ಪೊಲೀಸರು ಗಾಯಾಳು ರಕ್ಷಣೆಗೆ ಮುಂದಾಗಲಿಲ್ಲ. ನಾವು ಪೊಲೀಸ್ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವುದಿಲ್ಲ, ಬೇಕಾದರೇ ನೀವೇ ನಿಮ್ಮ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಎಂದು ಹೇಳುತ್ತಾರೆ. ಆಗ ಪೊಲೀಸರಿಗೆ ಮಾನವೀಯತೆಯೇ ಇಲ್ಲವೆಂಬುದನ್ನು ಅರಿತ ವ್ಯಕ್ತಿ ತನ್ನ ಖಾಸಗಿ ಕಾರಿನಲ್ಲಿಯೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾನೆ.

click me!