ಹುಬ್ಬಳ್ಳಿ: ಹೈಮಾಸ್ಟ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಇಬ್ಬರ ಸಾವು

Kannadaprabha News   | Asianet News
Published : Aug 27, 2021, 11:14 AM IST
ಹುಬ್ಬಳ್ಳಿ: ಹೈಮಾಸ್ಟ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಇಬ್ಬರ ಸಾವು

ಸಾರಾಂಶ

*  ಉಣಕಲ್‌ ಕೆರೆ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ ಬಳಿ ನಡೆದ ಘಟನೆ *  ಬೈಕ್‌ ನಿಯಂತ್ರಣ ತಪ್ಪಿ ಹೈಮಾಸ್ಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್‌ *  ಈ ಬಗ್ಗೆ ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಹುಬ್ಬಳ್ಳಿ(ಆ.27): ಹೈಮಾಸ್ಟ್‌ ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಮೃತಪಟ್ಟು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಉಣಕಲ್‌ ಕೆರೆ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ ಹತ್ತಿರ ನಡೆದಿದೆ.

ಹಳೇಹುಬ್ಬಳ್ಳಿ ಕೆಇಬಿ ಕ್ವಾಟರ್ಸ್‌ ನಿವಾಸಿ ನವೀನ ಮಂಜುನಾಥ ಗೊಲ್ಲರ(20) ಮತ್ತು ಮೂಲತಃ ಹಾವೇರಿ ಜಿಲ್ಲೆ ಹಾಲಿ ಹಳೇಹುಬ್ಬಳ್ಳಿ ನಿವಾಸಿ ಗಿರೀಶ ಗಂಗಾಧರ ಕಬ್ಬಿಣಕಂತಿಮಠ ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇಟ್ಟಿಗಟ್ಟಿಗ್ರಾಮದ ಯಲ್ಲಪ್ಪ ಗುರುಸಿದ್ದಪ್ಪ ಸೋಲಾರಗೊಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ : KSRTC ಬಸ್ ಬೈಕ್ ನಡುವೆ ಭೀಕರ ಅಪಘಾತ

ಮಧ್ಯರಾತ್ರಿ 1 ಗಂಟೆಗೆ ಸುಮಾರಿಗೆ ವೇಗವಾಗಿ ಹೋಗುತ್ತಿರುವಾಗ ಬೈಕ್‌ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲಿರುವ ಹೈಮಾಸ್ಟ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಡಿವೈಡರ್‌ ಮೇಲೆ ಬಿದ್ದ ಬೈಕ್‌ ಸವಾರರು ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ. 

ಘಟನಾ ಸ್ಥಳಕ್ಕೆ ಉತ್ತರ ಸಂಚಾರ ಠಾಣೆ ಪಿಐ ಶ್ರೀಕಾಂತ ತೋಟಗಿ ಮತ್ತು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರಲ್ಲದೇ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ, ನವೀನ, ಗಿರೀಶ ಮೃತಪಟ್ಟಿದ್ದಾರೆ. ಈ ಬಗ್ಗೆ ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!