ಶ್ವಾಸಕೋಶದ ಕ್ಯಾನ್ಸರ್‌ ಇದ್ದವರಲ್ಲಿ ಕೋವಿಡ್‌ ಸೋಂಕಿನ ಅಪಾಯ ಹೆಚ್ಚು

By Kannadaprabha News  |  First Published Aug 27, 2021, 9:56 AM IST
  • ಶ್ವಾಸಕೋಶದ ಕ್ಯಾನ್ಸರ್‌ ಪೀಡಿತರಲ್ಲಿ ಕೋವಿಡ್‌ ಸೋಂಕು ತೀವ್ರ
  •  ಸಾಮಾನ್ಯ ರೋಗಿಗಿಂತ ಕ್ಯಾನ್ಸರ್‌ ರೋಗಿಯಲ್ಲಿ ರೋಗದ ತೀವ್ರತೆ ಹೆಚ್ಚಾಗಿ ಕಾಡಲಿದೆ
  • ಭಾರತ್‌ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್‌. ವಿಶ್ವೇಶ್ವರ

 ಮೈಸೂರು (ಆ.27):  ಶ್ವಾಸಕೋಶದ ಕ್ಯಾನ್ಸರ್‌ ಪೀಡಿತರಲ್ಲಿ ಕೋವಿಡ್‌ ಸೋಂಕು ತೀವ್ರವಾಗಿ ಬಾಧಿಸಲಿದ್ದು, ಸಾಮಾನ್ಯ ರೋಗಿಗಿಂತ ಕ್ಯಾನ್ಸರ್‌ ರೋಗಿಯಲ್ಲಿ ರೋಗದ ತೀವ್ರತೆ ಹೆಚ್ಚಾಗಿ ಕಾಡಲಿದೆ ಎಂದು ಭಾರತ್‌ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್‌. ವಿಶ್ವೇಶ್ವರ ಹೇಳಿದರು.

ಶ್ವಾಸಕೋಶದ ಕ್ಯಾನ್ಸರ್‌ಕುರಿತು ಭಾಷಣ ಮಾಡಿದ ಡಾ. ವಿಶ್ವೇಶ್ವರ ಅವರು, ಕೊರೋನಾ ವೈರಸ್‌ ಶ್ವಾಸಕೋಶದ ಕ್ಯಾನ್ಸರ್‌ ಜೊತೆಗೆ ಹೇಗೆ ಸಂಪರ್ಕಿಸುತ್ತದೆ ಎಂಬುದರ ಬಗ್ಗೆ ಈವರೆಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆದರೆ, ವುಹಾನ್ನ ಆರಂಭಿಕ ಅಧ್ಯಯನದ ಪ್ರಕಾರ ಸಾಮಾನ್ಯ ಜನರಿಗಿಂತ ಶ್ವಾಸಕೋಶದ ಕ್ಯಾನ್ಸರ್‌ ರೋಗಿಗಳಿಗೆ ಕೋವಿಡ್‌ ಸೋಂಕು ಎರಡು ಪಟ್ಟು ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ ಎಂದರು.

Tap to resize

Latest Videos

ಟಿಬಿಗೆ ಸಂಬಂಧಿಸಿದ ಈ ಆರು ಸುಳ್ಳು ವಿಷಯ ನಂಬಬೇಡಿ

ಪುರುಷರಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಹೊಂದಿರುವ ರೋಗಿಗಳ ಅಂದಾಜು ಪ್ರಮಾಣ 679,421 (100,000 ಕ್ಕೆ 94.1) ಮತ್ತು ಮಹಿಳೆಯರಲ್ಲಿ 712,758 (100,000 ಕ್ಕೆ 103.6). 2020 ರಲ್ಲಿ 68 ಪುರುಷರಲ್ಲಿ ಒಬ್ಬರು (ಶ್ವಾಸಕೋಶದ ಕ್ಯಾನ್ಸರ್‌), 29 ಮಹಿಳೆಯರಲ್ಲಿ 1 (ಸ್ತನ ಕ್ಯಾನ್ಸರ್‌) ಮತ್ತು 9 ರಲ್ಲಿ 1 ಭಾರತೀಯರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ. (0-74 ವರ್ಷಗಳು) ಶ್ವಾಸಕೋಶದ ಕ್ಯಾನ್ಸರ್‌ ಶ್ವಾಸಕೋಶದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಶೇ. 90 ರಿಂದ 95 ಶ್ವಾಸಕೋಶದ ಕ್ಯಾನ್ಸರ್‌ ಎಪಿಥೇಲಿಯಲ್‌ ಕೋಶಗಳಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ ಎಂದು ಅವರು ತಿಳಿಸಿದರು.

ದಾಖಲೆಯ 1.95 ಲಕ್ಷ ಪರೀಕ್ಷೆ: 4.98 ಲಕ್ಷ ಜನಕ್ಕೆ ಲಸಿಕೆ

ಶ್ವಾಸಕೋಶದ ಕ್ಯಾನ್ಸರ್‌ ಇದ್ದವರಲ್ಲಿ ವಾಸಿಯಾಗದ ಅಥವಾ ನಿರಂತರ ಕೆಮ್ಮು, ಕೆಮ್ಮಿನ ಮೂಲಕ ರಕ್ತ ಅಥವಾ ತುಕ್ಕು ಬಣ್ಣದ ಕಫ, ಎದೆಯ ನೋವು ಆಳವಾದ ಉಸಿರಾಟ, ಕೆಮ್ಮು ಅಥವಾ ನಕ್ಕಾಗ ಉಸಿರುಗಟ್ಟುವುದು, ಒರಟುತನ, ಹಸಿವು ಉಂಟಾಗದೆ ಇರುವುದು, ಕಾರಣವಿಲ್ಲದೆ ದೇಹದ ತೂಕ ಕಡಿಮೆ ಆಗುವುದು, ಉಸಿರಾಟದ ತೊಂದರೆ, ಆಯಾಸ ಅಥವಾ ದುರ್ಬಲಗೊಂಡೆ ಎಂಬ ಭಾವನೆ, ಬ್ರಾಂಕೈಟಿಸ್‌ ಮತ್ತು ನ್ಯುಮೋನಿಯಾದಂತಹ ಸೋಂಕುಗಳು ಪದೇ ಪದೇ ಕಾಣಿಸಿಕೊಳ್ಳುತ್ತದೆ ಎಂದು ಅವರು ವಿವರಿಸಿದರು.

click me!