ಬೆಂಗಳೂರಿನಲ್ಲಿ ಡೆಂಘೀಗೆ ಇಬ್ಬರು ಬಲಿ..!

By Girish Goudar  |  First Published Jun 29, 2024, 9:36 AM IST

ಪ್ರಸಕ್ತ ವರ್ಷದಲ್ಲಿ ಎರಡು ಡೆಂಘೀ ಮರಣ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಒಟ್ಟಾರೆ 9 ಡೆಂಘೀ ಮರಣ ಪ್ರಕರಣಗಳು ದಾಖಲಾಗಿದ್ದವು. 


ಬೆಂಗಳೂರು(ಜೂ.29):  ಬೆಂಗಳೂರಿನಲ್ಲಿ ಡೆಂಘೀಗೆ ಇಬ್ಬರು ಬಲಿಯಾಗಿದ್ದಾರೆ. 27 ವರ್ಷದ ಯುವಕ ಹಾಗೂ 80 ವರ್ಷದ ವೃದ್ಧೆ ಸೇರಿ ಒಟ್ಟು ಇಬ್ಬರು ಮೃತಪಟ್ಟಿದ್ದಾರೆ. ಈ ಎರಡೂ ಪ್ರಕರಣಗಳು ಬಿಬಿಎಂಪಿಯ ಪೂರ್ವ ವಲಯದಲ್ಲಿ ದಾಖಲಾಗಿವೆ. 

ಜ್ವರದಿಂದ ಬಳಲುತ್ತಿದ್ದ ಸಿ.ವಿ.ರಾಮನ್ ನಗರದ ವಾಸಿ ಅಭಿಲಾಷ್ ಜೂ.25 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡೆಂಘೀ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು, ಚಿಕಿತ್ಸೆ ಫಲಕಾರಿಯಾಗದೇ ಜೂ.27 ರಂದು ಮೃತಪಟ್ಟಿದ್ದಾರೆ.

Tap to resize

Latest Videos

ರಾಜ್ಯಾದ್ಯಂತ ಡೆಂಘೀ ಹಾವಳಿ, ಆಘಾತಕಾರಿ ರೀತಿಯಲ್ಲಿ ಸೋಂಕು ಏರಿಕೆ!

ಮತ್ತೊಂದು ಡೆಂಘೀ ಪ್ರಕರಣದಲ್ಲಿ ಮೃತಪಟ್ಟ ವೃದ್ಧೆ ನೀರಜಾದೇವಿ ತಮಿಳುನಾಡಿನ ಮೂಲದವರಾಗಿದ್ದು, ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಜೂ.20 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೃದ್ಧೆಗೆ ಡೆಂಘೀ ಇರುವುದು ತಿಳಿದು ಬಂದಿದೆ. ಚಿಕಿತ್ಸೆ ಫಲಕಾರಿಯಾಗದೇ ಜೂ.23ರಂದು ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. 

ಪ್ರಸಕ್ತ ವರ್ಷದಲ್ಲಿ ಎರಡು ಡೆಂಘೀ ಮರಣ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಒಟ್ಟಾರೆ 9 ಡೆಂಘೀ ಮರಣ ಪ್ರಕರಣಗಳು ದಾಖಲಾಗಿದ್ದವು. 

click me!