ವಿದ್ಯುತ್ ಪರಿವರ್ತಕಗಳಲ್ಲಿನ ನಿರ್ವಹಣೆ ಕಾರಣ ನೀಡಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಬ್ಯಾಟರಾಯನಪುರ, ಸಹಕಾರನಗರ, ಅಮೃತ ಹಳ್ಳಿ, ಜಕ್ಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಿದೆ.
ಬೆಂಗಳೂರು(ಜೂ.29): ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಮುಂದುವರೆದಿದ್ದು, ಸಹಕಾರ ನಗರ ವಿದ್ಯುತ್ ಕೇಂದ್ರದ ನಿರ್ವಹಣೆ ಕಾರಣ ನೀಡಿ ಶನಿವಾರ ಬೆಳಗ್ಗೆ 10 ರಿಂದ 4 ಗಂಟೆವರೆಗೆ ಬ್ಯಾಟರಾಯನಪುರ, ಸಹಕಾರನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಸ್ಕಾಂ ವಿದ್ಯುತ್ ಕಡಿತ ಮಾಡಲಿದೆ.
ವಿದ್ಯುತ್ ಪರಿವರ್ತಕಗಳಲ್ಲಿನ ನಿರ್ವಹಣೆ ಕಾರಣ ನೀಡಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಬ್ಯಾಟರಾಯನಪುರ, ಸಹಕಾರನಗರ, ಅಮೃತ ಹಳ್ಳಿ, ಜಕ್ಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಿದೆ. ಕಳೆದ ಮೂರು ವಾರಗಳಿಂದ ದಿನಕ್ಕೊಂದು ಪ್ರದೇಶದಂತೆ ವ್ಯಾಪಕ ವಿದ್ಯುತ್ ಕಡಿತ ಮಾಡ ಲಾಗುತ್ತಿದೆ. ಶುಕ್ರವಾರವು ಬಾಣಸ ವಾಡಿ ಸುತ್ತಮುತ್ತ ವಿದ್ಯುತ್ ಕಡಿತ ಮಾಡಲಾಗಿತ್ತು. ಹೀಗೆ ನಿತ್ಯ ಒಂದೊಂದು ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಕೆಲವು ಕಡೆ ಎರಡು-ಮೂರು ದಿನ 5-6 ಗಂಟೆಗಳ ಕಾಲ ಕಡಿತ ಮಾಡಲಾಗಿದೆ.
Bengaluru ಅರ್ಧ ಬೆಂಗಳೂರಿಗೆ ಎರಡು ದಿನ ಪವರ್ ಕಟ್!
ಇದೇ ರೀತಿ ಜೂ.29 ರಂದು ಶನಿವಾರ ಸಹ ಕಾರನಗರ 66/11 ಕೆವಿ ವಿದ್ಯುತ್ ಕೇಂದ್ರ ಹಾಗೂ ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿನಗರ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಶೋಧನಗರ, ಅಮೃತಹಳ್ಳಿ ಬಿ ಮತ್ತು ಸಿ ಬ್ಲಾಕ್, ಸಿಕ್ಯುಎಎಲ್ ಲೇ ಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಕೋಗಿಲು ಬಡಾವಣೆ, ಅಗ್ರಹಾರ ಬಡಾವಣೆ, ಅರ್ಕಾವತಿ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.