ನೀರಿನಿಂದ ಹೊರ ತೆಗೆದ ಬಳಿಕ ಲಕ್ಷ್ಮೀ ಅವರನ್ನು ಕುಟುಂಬಸ್ಥರು ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪರಿಣಾಮ ಮಹಿಳೆ ಬದುಕುಳಿದಿದ್ದಾರೆ. ಇವರನ್ನು ರಕ್ಷಿಸಲು ನದಿಗೆ ಧುಮುಕಿದ ಪತಿ ಶಿವಕುಮಾರ ಹಾಗೂ ಸಂಬಂಧಿ ರಾಜು ಅವರು ಮಾತ್ರ ಹಿಂದಿರುಗಿ ಬಾರದೆ ಜಲ ಸಮಾಧಿಯಾಗಿದ್ದಾರೆ.
ಚವಡಾಪುರ(ಆ.01): ಭೀಮಾ ನದಿಗೆ ಹಾರಿದ್ದ ತನ್ನ ಪತ್ನಿ ಜೀವ ಉಳಿಸಬೇಕೆಂದು ಪತಿ ಶಿವಕುಮಾರ್ ಮತ್ತವನ ಬಂಧು ರಾಜು ಅಂಕಲಗಿ ಇಬ್ಬರು ಭೀಮಾನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಜು.30ರಂದು ಸಂಭವಿಸಿತ್ತು. ಇದೀಗ ಪೊಲೀಸರು ನಿರಂತರ ಶೋಧ ನಡೆಸಿ ಇವರಿಬ್ಬರ ಶವ ಹೊರಗೆ ತೆಗೆದಿದ್ದಾರೆ.
ಅಫಜಲ್ಪುರ ಪಟ್ಟಣದಲ್ಲಿ ವಾಸವಿದ್ದ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶಿವಕುಮಾರ (38) ಮತ್ತು ಪತ್ನಿ ಲಕ್ಷ್ಮೀ ಶಿವಕುಮಾರ (28) ಕೌಟುಂಬಿಕ ಕಲಹದ ಕಾರಣದಿಂದ ತನ್ನ ತವರೂರಾದ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮಕ್ಕೆ ತೆರಳುವಾಗ ಅಫಜಲ್ಪುರ ತಾಲೂಕಿನ ಸೊನ್ನ, ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮಗಳ ನಡುವಿನ ಭೀಮಾನದಿ ಸೇತುವೆ ಮೇಲಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.
undefined
ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?
ನೀರಿನಿಂದ ಹೊರ ತೆಗೆದ ಬಳಿಕ ಲಕ್ಷ್ಮೀ ಅವರನ್ನು ಕುಟುಂಬಸ್ಥರು ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪರಿಣಾಮ ಮಹಿಳೆ ಬದುಕುಳಿದಿದ್ದಾರೆ. ಇವರನ್ನು ರಕ್ಷಿಸಲು ನದಿಗೆ ಧುಮುಕಿದ ಪತಿ ಶಿವಕುಮಾರ ಹಾಗೂ ಸಂಬಂಧಿ ರಾಜು ಅವರು ಮಾತ್ರ ಹಿಂದಿರುಗಿ ಬಾರದೆ ಜಲ ಸಮಾಧಿಯಾಗಿದ್ದಾರೆ.
ಕಲಬುರಗಿ: ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ವೈದ್ಯನ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ..!
ಬುಧವಾರ ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಭೀಮಾ ನದಿ ಬ್ರೀಜ್ ನಿಂದ ಸುಮಾರು ಒಂದೆರಡು ಕಿಲೋಮೀಟರ್ ದೂರದಲ್ಲಿ ಎರಡು ಶವಗಳು ನೀರಲ್ಲಿ ತೇಲುತ್ತಿರುವ ದೃಶ್ಯಗಳು ಸ್ಥಳಿಯರ ಮೊಬೈಲ್ ನಲ್ಲಿ ಪತ್ತೆ ಆಗಿವೆ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿ ಬೋಟ್ ಸಹಾಯದಿಂದ ಎರಡು ಶವಗಳನ್ನು ಹೊರತಂದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ:
ಈ ದುರ್ಘಟನೆಯ ಬಳಿಕ ಜಲಸಮಾಧಿ ಆಗಿರುವ ಶಿವಕುಮಾರ ಅವರ ಸ್ವಗ್ರಾಮ ಕಲಬುರಗಿ ತಾಲೂಕಿನ ಕಡಣಿ ಹಾಗೂ ರಾಜು ಅಂಕಲಗಿ ಅವರ ಸ್ವಗ್ರಾಮ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮಗಳಲ್ಲಿ ಅಂತ್ಯಕ್ರಿಯೆ ಜರುಗಿದ್ದು ಎರಡು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಶಿವಕುಮಾರ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೃತ ರಾಜು ಅಂಕಲಗಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಒರ್ವ ಗಂಡು ಮಗನಿದ್ದಾನೆ.