ಆರ್.ತಾರಾನಾಥ್
ಚಿಕ್ಕಮಗಳೂರು (ಅ.9) : ಸರಣಿ ರಜೆ, ನೂರಾರು ವಾಹನಗಳು, ಸಾವಿರ ಮಂದಿ ಪ್ರವಾಸಿಗರು.- ಈ ಚಿತ್ರಣ ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಸಹಜ. ಆದರೆ, ಇದಕ್ಕೂ ಮೀರಿದ ಬೆಳವಣಿಗೆ ಕಾಫಿಯ ನಾಡಿನಲ್ಲಿ ನಡೆದಿದೆ. ಇದು, ಪ್ರವಾಸೋದ್ಯಮದ ಬೆಳವಣಿಗೆ ಎನ್ನಬೇಕೋ ಅಥವಾ ಗಿರಿ ಪ್ರದೇಶದಲ್ಲಿ ಮುಂದೊಂದು ದಿನ ಅಪಾಯ ಕಾದಿದೆ ಎನ್ನಬೇಕೋ ಎಂಬ ತರ್ಕವೊಂದು ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ.
undefined
Chikkamagaluru: ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು, 15KM ಟ್ರಾಫಿಕ್ ಜಾಮ್!
ಅದು, ಅತ್ಯಂತ ಕಡಿಮೆ ಅವಧಿಯಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರು ಬಂದು ಹೋಗಿರುವುದು. ಜಿಲ್ಲೆಯ ಗಿರಿ ಭಾಗದಲ್ಲಿ ಇದೊಂದು ಹೊಸ ದಾಖಲೆ ಎಂದರೆ ತಪ್ಪಾಗಲಾರದು. ಈ ವಿಷಯವನ್ನು ಅಂಕಿ ಅಂಶಗಳು ದೃಢಪಡಿಸುತ್ತಿವೆ. ಕಳೆದ ಜೂನ್ ಮಾಹೆಯಿಂದ ಅಕ್ಟೋಬರ್ 7 ರವರೆಗೆ ಗಿರಿಪ್ರದೇಶದಲ್ಲಿ ಪ್ರವೇಶ ಮಾಡಿರುವ ಪ್ರವಾಸಿಗರ ಸಂಖ್ಯೆ ಬರೋಬರಿ 4 ಲಕ್ಷ ದಾಟಿದೆ. ಅಂದರೆ, ಈ ಅವಧಿಯಲ್ಲಿ ಪ್ರವಾಸಿಗರ 10,117 ದ್ವಿಚಕ್ರ ವಾಹನಗಳು, 55261 ಕಾರ್‌ಗಳು, 3573 ಟಿ.ಟಿ., ಮಿನಿ ಬಸ್ಸುಗಳು ಗಿರಿ ಪ್ರದೇಶದಲ್ಲಿ ಪ್ರವೇಶ ಮಾಡಿವೆ.
ಗಿರಿ ಮಾರ್ಗದಲ್ಲಿ ಚಲಿಸುವ ವಾಹನಗಳಿಂದ ಪ್ರವೇಶ ಶುಲ್ಕ ಪಡೆಯಲು ಕೈಮರದಲ್ಲಿ ಚೆಕ್ ಪೋಸ್ಟ್‌ವನ್ನು ತೆರೆಯಲಾಗಿದೆ. ಇಲ್ಲಿ ದಾಖಲಾಗಿರುವ ವಾಹನಗಳ ಸಂಖ್ಯೆಗಳಿಗೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆ ಅಂದಾಜು ಮಾಡಲಾಗಿದೆ. ಕೆಲವು ಸಂದರ್ಭದಲ್ಲಿ ಚೆಕ್‌ಪೋಸ್ಟ್ ಬಳಿ ನೂರಾರೂ ವಾಹನಗಳು ಸಾಲುಗಟ್ಟಿನಿಂತ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಕಂಡುಬಂದರೆ ಪ್ರವೇಶ ಶುಲ್ಕ ಪಡೆಯದೇ ಹಾಗೆಯೇ ಕಳುಹಿಸಿರುವ ನಿದರ್ಶನಗಳು ಸಹ ಇದೆ. ಅಂದರೆ, ಗಿರಿಪ್ರದೇಶದಲ್ಲಿ ಇನ್ನು ಹೆಚ್ಚು ವಾಹನಗಳು ಹೋಗಿವೆ ಎಂದು ಹೇಳಲಾಗುತ್ತಿದೆ.
14 ಸಾವಿರ ವಾಹನಗಳು:
ಸರಣಿ ದಸರಾ ರಜೆ ಮುಗಿದರೂ ಪ್ರವಾಸಿಗರು ಬರುವುದು ನಿಂತಿಲ್ಲ, ಪ್ರತಿದಿನ ನಿರಂತರವಾಗಿ ಸಾವಿರಾರು ಪ್ರವಾಸಿಗರು ಗಿರಿಪ್ರದೇಶಕ್ಕೆ ಬರುತ್ತಿದ್ದಾರೆ. ಇದಕ್ಕೆ ಕಾರಣ, ಕುರುಂಜಿ ಹೂವುಗಳು. ಅ.1ರಿಂದ 7ರವರೆಗೆ ಈ ಭಾಗಕ್ಕೆ ಬಂದಿರುವ ಪ್ರವಾಸಿಗರ ವಾಹನಗಳ ಸಂಖ್ಯೆ 14,248, ಪ್ರವಾಸಿಗರ ಸಂಖ್ಯೆ ಸುಮಾರು 74739. ಅಂದರೆ, ಕಳೆದ ಜೂನ್‌ನಿಂದ ಸೆಪ್ಟಂಬರ್ ತಿಂಗಳವರೆಗಿನ ದಾಖಲೆಯನ್ನು ಮುರಿದಿದೆ. ದಿನೇದಿನೇ ಕುರುಂಜಿ ಹೂವಿನ ವಿಸ್ತೀರ್ಣ ಕಡಿಮೆ ಆಗುತ್ತಿದೆ. ಅರಳಿದ ಹೂವುಗಳು ಬಾಡಿ ಹಿಂದಿನ ಯಥಾಸ್ಥಿತಿಗೆ ಬೆಟ್ಟಗಳ ಹಸಿರು ಬರುತ್ತಿದೆ. ಆದರೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಗಿರಿಯಲ್ಲಿ ಪ್ರತಿದಿನ ಕಾರುಗಳು ಕಾರುಬಾರು ಮುಂದುವರಿದಿವೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಿರ್ಮಾಣವಾಗಲಿದೆ ಬೃಹತ್ ಎತ್ತರದ ಹನುಮಂತನ ಪ್ರತಿಮೆ
ರೂಂ ರೆಂಟ್ ದುಬಾರಿ:
ಪ್ರವಾಸಿಗರ ಸಂಖ್ಯೆ ಏರಿಕೆ ಆಗಿದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಲಾಡ್ಜ್‌ಗಳ ರೂಂ ಬಾಡಿಗೆಯಲ್ಲೂ ದಿಢೀರ್ ಏರಿಕೆಯಾಗಿತ್ತು. ಡಬಲ್ ಬೆಡ್ ರೂಂಗೆ ಇದ್ದ ದಿನದ ಬಾಡಿಗೆ 1000 ದಿಂದ 2000 ರು.ಗಳಿಗೆ ಏರಿಕೆಯಾಗಿತ್ತು. 5 ಬೆಡ್‌ಗೆ 2000 ದಿಂದ 5000 ರು.ಗೆ ಏರಿಸಲಾಗಿತ್ತು. ಸಾಧಾರಣ ಲಾಡ್ಜ್‌ಗಳಲ್ಲಿ ಸಿಂಗಲ್ ಬೆಡ್‌ಗೆ ದಿನಕ್ಕೆ 500 ರು. ಬಾಡಿಗೆ ಪಡೆಯಲಾಗುತ್ತಿತ್ತು. ಕಳೆದ ಒಂದು ವಾರದಲ್ಲಿ 800 ರು.ಗಳಿಂದ 1000 ರು.ಗೆ ಹೆಚ್ಚಳ ಮಾಡಲಾಗಿತ್ತು. ಚಿಕ್ಕಮಗಳೂರಿನ ಹಲವು ಲಾಡ್ಜ್‌ಗಳು ಪ್ರವಾಸಿಗರಿಂದ ದುಬಾರಿ ಬಾಡಿಗೆ ವಸೂಲಿ ಮಾಡಿದವು.
ಗಿರಿಪ್ರದೇಶದಲ್ಲಿ ಪ್ರವೇಶಿಸಿದ ಪ್ರವಾಸಿ ವಾಹನಗಳ ವಿವರ
ತಿಂಗಳು ಸಂಖ್ಯೆ