
ಬೆಳಗಾವಿ(ಜೂ.30): ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ. ಶ್ರೇಯಸ್ ಬಾಪಶೇಟ್(13), ರೋಹಿತ್ ಪಾಟೀಲ್ (15) ಎಂಬ ಬಾಲಕರೇ ನದಿಯಲ್ಲಿ ಶವವಾಗಿ ಪತ್ತೆಯಾದ ಮಕ್ಕಳಾಗಿದ್ದಾರೆ.
ಮೃತ ಬಾಲಕರು ಖಾನಾಪುರ ಪಟ್ಟಣದ ದುರ್ಗಾನಗರ ನಿವಾಸಿಗಳು ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರಿಗೂ ಹೇಳದೇ ಐವರು ಸ್ನೇಹಿತರು ಸೇರಿ ಕಳೆದ ಎರಡು ದಿನಗಳ ಹಿಂದೆ ಮಲಪ್ರಭಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ಶ್ರೇಯಸ್ ಹಾಗೂ ರೋಹಿತ್ ಇಬ್ಬರೂ ನೀರು ಪಾಲಾಗಿದ್ದರು.
ಅಥಣಿ: ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನೀರು ಪಾಲಾಗಿದ್ದವರ ಶವ ಪತ್ತೆ
ಇಬ್ಬರೂ ಬಾಲಕರು ನೀರಿನಲ್ಲಿ ಮುಳುಗುವದನ್ನ ಕಂಡು ಇತರ ಬಾಲಕರು ಹೆದರಿ ಓಡಿ ಹೋಗಿದ್ದರು. ಬಾಲಕರು ಮನೆಗೆ ವಾಪಸಾಗದ ಹಿನ್ನೆಲೆ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.