ಮಂಗಳೂರು : ಪ್ರಯಾಣಿಕರಿಗೆ ಬಸ್‌ ದರ ಏರಿಕೆ ಶಾಕ್

By Suvarna NewsFirst Published Jun 30, 2021, 1:05 PM IST
Highlights
  • ನಾಳೆಯಿಂದ ಮಂಗಳೂರಿನ ಪ್ರಯಾಣಿಕರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ 
  • 20 % ಬಸ್ ಟಿಕೆಟ್ ದರ ಏರಿಕೆಯೊಂದಿಗೆ ನಾಳೆಯಿಂದ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ 

ಮಂಗಳೂರು (ಜೂ.30):  ನಾಳೆಯಿಂದ ಮಂಗಳೂರಿನ ಪ್ರಯಾಣಿಕರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ ಕಾದಿದೆ.  20 % ಬಸ್ ಟಿಕೆಟ್ ದರ ಏರಿಕೆಯೊಂದಿಗೆ ನಾಳೆಯಿಂದ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ. 

ಬರೋಬ್ಬರಿ 65 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್ ಗಳು ನಾಳೆ (ಜು.1) ಸಂಚಾರ ಶುರು ಮಾಡಲಿವೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಖಾಸಗಿ ಬಸ್ ಗಳಿದ್ದು, ನಾಳೆಯಿಂದ 500 ಬಸ್ ಗಳ ಸಂಚಾರ ಆರಂಭವಾಗಲಿದೆ.

ಮಂಗಳೂರು: ಸ್ಮಾರ್ಟ್ ಸಿಟಿ ಹೆಸರಲ್ಲಿ ಪಾಲಿಕೆ ಎಡವಟ್ಟು, ನಗರ ಸಂಪೂರ್ಣ ತೆರೆಯೋದು ಡೌಟ್! . 

ದಕ್ಷಿಣ ಕನ್ನಡ ಜಿಲ್ಲೆ ಮಧ್ಯಾಹ್ನದವರೆಗೆ ಅನ್ ಲಾಕ್ ಆಗಿದ್ದರೂ ರಸ್ತೆಗಿಳಿಯದಿದ್ದ ಖಾಸಗಿ ಬಸ್ ಗಳು ಇದೀಗ ಮತ್ತೆ ಸಂಚಾರ ನಡೆಸಲಿವೆ. ಡೀಸೆಲ್ ಬೆಲೆಯೇರಿಕೆ, ಟ್ಯಾಕ್ಸ್ ಸೇರಿ ನಿರ್ವಹಣಾ ವೆಚ್ಚದ ಕಾರಣಕ್ಕೆ ಸಂಚಾರ ಸ್ಥಗಿತವಾಗಿದ್ದು, ಸದ್ಯ ಜಿಲ್ಲಾಧಿಕಾರಿ ಮಧ್ಯ ಪ್ರವೇಶದ ಬಳಿಕ 20% ಬಸ್ ಟಿಕೆಟ್ ದರ ಏರಿಕೆಯೊಂದಿಗೆ ಸಂಚಾರ ನಡೆಸಲಿವೆ. 

ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ ...

ಬಸ್ ಗಳಲ್ಲಿ 50% ಪ್ರಯಾಣಿಕರ ಸಂಚಾರದ ಮಾರ್ಗಸೂಚಿ ಇರುವ ತನಕವಷ್ಟೇ ಟಿಕೆಟ್ ದರ ಏರಿಕೆಗೆ ಒಪ್ಪಿಗೆ ನೀಡಿದ್ದು, ಸರ್ಕಾರ ಬಸ್‌ಗಳಲ್ಲಿ ಪೂರ್ಣ ಪ್ರಮಾಣದ ಪ್ರಯಾಣಿಕರಿಗೆ ಅವಕಾಶ ಕೊಟ್ಟ ಬಳಿಕ ದರ ಇಳಿಕೆ ಮಾಡಬೇಕಾಗುತ್ತದೆ.  ಖಾಸಗಿ ಬಸ್ ಸಂಚಾರ ಹಿನ್ನೆಲೆ ನಾಳೆಯಿಂದ ಮತ್ತಷ್ಟು ಅನ್ ಲಾಕ್ ಆಗಲಿದೆ.

click me!