ಚಾಮರಾಜನಗರ.(ಜೂ.30): ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಸಂಬಂಧ ಸ್ಥಳ ಪರಿಶೀಲನೆಗೆ ತೆರಳಿದ್ದ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ವ್ಯಾಪ್ತಿಯ ಹೂಕುಂದ ಬಳಿಯ ಕೌಗಲ್ ವಾಚಿಂಗ್ ಟವರ್ ಸಮೀಪ ಸ್ಯಾಟಲೈಟ್ ಪೋನ್
ನಕ್ಸಲ್ ರು ಬಳಕೆ ಮಾಡಿರುವ ಶಂಕೆ ಹಿನ್ನಲೆ ಪರಿಶೀಲನೆಗೆ ತೆರಳಿದ ವೇಳೆ ಇಂದು ಈ ದುರ್ಘಣಟೆಯಾಗಿದೆ.
undefined
ಕೆಲಸವಿಲ್ಲದ ಕಾರಣ ಬಿಲ್ಡಿಂಗ್‌ನಿಂದ ಹಾರಿದ ಮಾಡೆಲ್ ...
ಸ್ಥಳ ಪರಿಶೀಲನೆಗೆ ಆಂತರಿಕ ಭದ್ರತಾ ಸಿಬ್ಬಂದಿಗಳು ತೆರಳಿದ್ದು, ಈ ವೇಳೆ ಹೃದಯಾಘಾತವಾಗಿ ಆಂತರಿಕ ಭಧ್ರತಾ ವಿಭಾಗದ ಪೋಲೀಸ್ ಕಾನ್ಸ್‌ಟೇಬಲ್ ಬಾಬು (35) ನಿಧನರಾಗಿದ್ದಾರೆ..
ಕೆಲ ದಿನಗಳ ಹಿಂದೆ ಬಂಡೀಪುರ ವ್ಯಾಪ್ತಿಯ ಕಬ್ಬೇಪುರದ ಕರಡಿಗುಡ್ಡ ಹಾಗೂ ಚಾಮರಾಜನಗರದ ಗಣಿಗನೂರು ಬಳಿ ಸ್ಯಾಟಲೈಟ್ ಪೋನ್ ಬಳಕೆಯಾಗಿರುವ ಮಾಹಿತಿ.ಲಭ್ಯವಾಗಿತ್ತು..
ಇದೀಗ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆಯಿಂದ ಆತಂಕ ಹೆಚ್ಚಾಗಿದ್ದು, ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮೂರು ಬಾರಿ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿದೆ.
ಒಂದೇ ಕುಟುಂಬದ ನಾಲ್ವರು ಸಹೋದರರು ನೀರು ಪಾಲು ...
ನಕ್ಸಲರು ನುಸುಳಿದ್ದಾರಾ? ಉಗ್ರಗಾಮಿಗಳ ಬಳಸಿದ್ದಾರಾ..? ಎಂಬುವ ಬಗ್ಗೆ ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದ ವೇಳೆಯೇ ಈ ದುರ್ಘಟನೆಯಾಗಿದೆ. ಕಳೆದ ವರ್ಷವು ಇಲ್ಲಿ ವಿದೇಶಿಗರೊಬ್ಬರು ಸ್ಯಾಟಲೈಟ್ ಪೋನ್ ಬಳಕೆ ಮಾಡಿದ್ದು, ಇದೀಗ ಮತ್ತೊಮ್ಮೆ ಈ ಬಗ್ಗೆ ಮಾಹಿತಿ ಲಭಿಸಿದೆ. .