Turuvekere: 26 ಲಕ್ಷ ನೀಡಿ ಹಳ್ಳಿಕಾರ್‌ ಹೋರಿ ಖರೀದಿಸಿದ ಶಾಸಕ ಜಯರಾಮ್‌!

By Suvarna News  |  First Published Feb 11, 2022, 12:47 AM IST

ಶಾಸಕ ಮಸಾಲ ಜಯರಾಮ್‌ ಅವರು 26 ಲಕ್ಷ ರೂ.ಗೆ ಏಕಲವ್ಯ ಎಂಬ ಹೆಸರಿನ ಹಳ್ಳಿಕಾರ್‌ ಹೋರಿಯನ್ನು ಖರೀದಿ ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳನ್ನು ಜಯರಾಮ್ ಖರೀದಿಸಿದ್ದಾರೆ. 


ತುರುವೇಕೆರೆ (ಫೆ.11): ಶಾಸಕ ಮಸಾಲ ಜಯರಾಮ್‌ (Masala Jayaram) ಅವರು 26 ಲಕ್ಷ ರೂ.ಗೆ ಏಕಲವ್ಯ ಎಂಬ ಹೆಸರಿನ ಹಳ್ಳಿಕಾರ್‌ ಹೋರಿಯನ್ನು ಖರೀದಿ ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳನ್ನು ಜಯರಾಮ್ ಖರೀದಿಸಿದ್ದಾರೆ. 

ಟಿ.ನರಸೀಪುರ ತಾಲೂಕು ಬನ್ನೂರಿನ ಕೃಷ್ಣೇಗೌಡ (Krishnegowda) ಎಂಬುವವರು ಸಾಕಿದ್ದ ಮೂರು ವರ್ಷದ ಹೋರಿ ಏಳು ಅಡಿ ಎತ್ತರವಿದ್ದು, ಸಾಕಷ್ಟು ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಸಹ ಪಡೆದಿದೆ. ಈ ಹೋರಿಗೆ ಫೆ.20ರಂದು ಮಂಡ್ಯದ (Mandya) ಬನ್ನೂರು ಗ್ರಾಮದಲ್ಲಿ ಅದ್ಧೂರಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 6.5 ಲಕ್ಷ ರೂ. ಬೆಲೆಯ ಅಮೃತ್ ಮಹಲ್ ತಳಿ ಜೋಡಿ ಎತ್ತುಗಳನ್ನು ಶಾಸಕ ಜಯರಾಮ್ ಖರೀದಿಸಿದ್ದಾರೆ. ಅಂಕಲಕೊಪ್ಪ ಗ್ರಾಮ ಶಾಸಕರ ತೋಟದಲ್ಲಿ ಜಾನುವಾರುಗಳು ಇವೆ.

Tap to resize

Latest Videos

1 ಕೋಟಿಯ ಹಳ್ಳಿಕಾರ್‌ ಹೋರಿ ನೋಡಿ ನಿಬ್ಬೆರಗಾದ ಜನ: ಜಿಕೆವಿಕೆಯಲ್ಲಿ(GKVK) ಆಯೋಜಿಸಿರುವ ಕೃಷಿ ಮೇಳಕ್ಕೆ(Krishimela) ಆಗಮಿಸಿದ್ದ 1 ಕೋಟಿ ಮೌಲ್ಯದ ಹಳ್ಳಿಕಾರ್‌ ಹೋರಿ(Hallikar Hori) ‘ಕೃಷ್ಣ’ನೇ ಚರ್ಚಾ ವಿಷಯವೂ ಆಗಿದ್ದು ವಿಶೇಷವಾಗಿತ್ತು. ಹೋರಿ ಎಲ್ಲಿದೆ ಎಂದು ಬಹುತೇಕರು ಹುಡುಕುತ್ತಿದ್ದುದು ಕಂಡುಬಂತು. ವಿದ್ಯಾರ್ಥಿಗಳು(Students), ರೈತರು(Farmers), ಮಾಧ್ಯಮದವರ ಕೇಂದ್ರ ಬಿಂದುವೂ ಆಗಿದ್ದ. 

Covid ಹೋರಿ ಬೇದರಿಸುವ ಸ್ಪರ್ಧೆ ಆಯೋಜಕರ ವಿರುದ್ಧ FIR, ರೇಣುಕಾಚಾರ್ಯ ಹೆಸ್ರು ನಾಪತ್ತೆ

ಒಂದು ಕೋಟಿ ರು. ಬೆಲೆಯ ಹೋರಿಯ ಮಾಲಿಕ ಮಂಡ್ಯ ಜಿಲ್ಲೆ ಮಳವಳ್ಳಿಯ ಬೋರೇಗೌಡ ಹೋರಿಯ ವೀರ್ಯ(Sperm) ಮಾರಾಟದ ಅಂಕಿ ಅಂಶ ನೀಡುತ್ತಿದ್ದಂತೆ ಅಬ್ಬಬ್ಬಾ ಎಂದು ಹುಬ್ಬೇರಿಸಿದರು. ‘ವಾರಕ್ಕೆ ಎರಡು ಬಾರಿ ಕೃಷ್ಣನಿಂದ ವೀರ್ಯ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಕಡಿಮೆ ಎಂದರೂ ಒಂದು ಸಲಕ್ಕೆ 300 ಸ್ಟಿಕ್‌ ವೀರ್ಯ ಸಂಗ್ರಹಿಸಿ ಕೆಡದಂತೆ ನೈಟ್ರೋಜನ್‌ ಕಂಟೈನರ್‌ನಲ್ಲಿ ಸಂಗ್ರಹಿಸಲಾಗುವುದು.  ಇದಕ್ಕಾಗಿಯೇ ವೀರ್ಯ ಸಂವರ್ಧನ ಕೇಂದ್ರವನ್ನು ಸ್ಥಾಪಿಸಲಾಗಿದೆ. 

ಹಳ್ಳಿಕಾರ್‌ ವೀರ್ಯ ಸಂವರ್ಧನ ಕೇಂದ್ರವನ್ನು ಖಾಸಗಿಯಾಗಿ ಪ್ರಪಂಚದಲ್ಲೇ(World) ಯಾರೂ ಸ್ಥಾಪಿಸಿಲ್ಲ ಎಂಬ ಹೆಗ್ಗಳಿಕೆ ಇದೆ. ಗುಜರಾತ್‌ನಿಂದ(Gujrath) ತಜ್ಞರನ್ನು ಕರೆಸಿ ಈಗಾಗಲೇ ಹಲವು ಬಾರಿ ವೀರ್ಯ ಪಡೆಯಲಾಗಿದೆ. ಒಂದು ಸ್ಟಿಕ್‌ ವೀರ್ಯವನ್ನು ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದೇನೆ. ವೀರ್ಯ ಸಂವರ್ಧನ ಕೇಂದ್ರ ಸ್ಥಾಪನೆ ಮತ್ತಿತರ ಕಾರ್ಯಗಳಿಗೆ ಈಗಾಗಲೇ 10 ಲಕ್ಷ ರುಪಾಯಿ ಖರ್ಚು ಮಾಡಿದ್ದು ಈ ವೆಚ್ಚ ವೀರ್ಯ ಮಾರಾಟದಿಂದ ವಾಪಾಸ್‌ ಬಂದಿದೆ. ಹೀಗಿರುವಾಗ ಈ ಹೋರಿ ಒಂದು ಕೋಟಿ ರುಪಾಯಿ ಬೆಲೆ ಬಾಳುವುದಿಲ್ಲವೇ’ ಎಂದು ಬೋರೇಗೌಡ ಪ್ರಶ್ನಿಸುತ್ತಾರೆ.

ಆಟ ನಿಲ್ಲಿಸಿದ ಹಾವೇರಿ ಡಾನ್‌ 111... ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ

ವೀರ್ಯ ಮಾರಾಟಕ್ಕೆ ಏಜೆನ್ಸಿ: ಇಂತಹ ದಷ್ಟಪುಷ್ಟವಾದ ಹಳ್ಳಿಕಾರ್‌ ತಳಿ ಎಲ್ಲೂ ಇಲ್ಲ. ಈ ಸಂತತಿ ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಮೊದಲು ನೈಸರ್ಗಿಕವಾಗಿ ಹಸುಗಳಿಗೆ ವೀರ್ಯ ನೀಡುತ್ತಿದ್ದೆ. ಹೋರಿಯ ಮೌಲ್ಯ ಗೊತ್ತಾದ ನಂತರ ವೀರ್ಯ ಸಂಗ್ರಹಿಸಿ ಏಕೆ ಮಾರಾಟ ಮಾಡಬಾರದು ಎಂಬ ಯೋಚನೆ ಬಂತು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಇಲ್ಲಿಯವರೆಗೂ ಒಂದು ಸಾವಿರಕ್ಕೂ ಅಧಿಕ ವೀರ್ಯದ ಸ್ಟಿಕ್‌ಗಳನ್ನು ಮಾರಾಟ ಮಾಡಿದ್ದು ಶೇ.95 ರಷ್ಟುಫಲಿತಾಂಶ ಕಂಡುಬರುತ್ತಿದೆ. 170 ಹಸುಗಳಿಗೆ(Cow) ನೇರವಾಗಿ ಕ್ರಾಸಿಂಗ್‌ ಮಾಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ವೀರ್ಯ ಸ್ಟಿಕ್‌ ಮಾರಾಟ ಮಾಡಲು ಏಜೆನ್ಸಿ ನೀಡಿದ್ದು ಇದನ್ನು ಇನ್ನಷ್ಟುವಿಸ್ತರಿಸಲಾಗುವುದು ಎನ್ನುತ್ತಾರೆ ಬೋರೇಗೌಡ.

click me!