BMTC: ಬೆಂಗ್ಳೂರಲ್ಲಿ ಮತ್ತೆ ಡಬಲ್‌ ಡೆಕ್ಕರ್‌ ಬಸ್‌ ಗತವೈಭವ..!

By Kannadaprabha News  |  First Published Feb 10, 2022, 11:21 AM IST

*   ಕೇಂದ್ರದಿಂದ 5 ವಿದ್ಯುತ್‌ ಚಾಲಿತ ಬಸ್‌ ವಿತರಣೆ
*  ಪ್ರಸ್ತುತ ನಷ್ಟದಲ್ಲಿರುವ ಬಿಎಂಟಿಸಿ 
*  ಡೀಸೆಲ್‌ ಬಸ್‌ಗಳ ಬದಲಿಗೆ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್‌ ಬಸ್‌ ಸೇವೆ 
 


ಬೆಂಗಳೂರು(ಫೆ.10):  ಕಳೆದ 20 ವರ್ಷಗಳ ಹಿಂದೆ ಬೆಂಗಳೂರಿನ(Bengaluru) ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ಗಳು(Double Decker Bus) ಮತ್ತೆ ನಗರದ ರಸ್ತೆಗಿಳಿಯಲಿವೆ. ಈ ಹಿಂದೆ ಸಂಚರಿಸುತ್ತಿದ್ದ ಡೀಸೆಲ್‌ ಬಸ್‌ಗಳ ಬದಲಿಗೆ ಪ್ರಾಯೋಗಿಕವಾಗಿ ಐದು ಎಲೆಕ್ಟ್ರಿಕ್‌(ಪರಿಸರ ಸ್ನೇಹಿ)ಬಸ್‌ಗಳು ನಗರಕ್ಕೆ ಆಗಮಿಸಲಿವೆ.

ಕೇಂದ್ರ ಸರ್ಕಾರದ(Central Government) ಇಂಧನ ಸಚಿವಾಲಯದ ಅಧೀನ ಎನರ್ಜಿ ಎಫಿಷಿಯನ್ಸಿ ಸರ್ವೀಸ್‌ ಲಿಮಿಟೆಡ್‌(EESL) ಸಂಸ್ಥೆಯಿಂದ ಆವಿಷ್ಕಾರಗೊಳಿಸಿರುವ ವಿದ್ಯುತ್‌ ಚಾಲಿಯ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ದೇಶದ ವಿವಿಧ ನಗರಗಳ ಸಾರಿಗೆ ನಿಗಮಗಳಿಗೆ ವಿತರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

Tap to resize

Latest Videos

undefined

BMTC Bus Fire ಪ್ರಯಾಣಿಸತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ, ಪ್ರಯಾಣಿಕರು ಅದೃಷ್ಟವಶಾತ್ ಪಾರು!

ಈ ಯೋಜನೆಯಡಿ ಬಿಎಂಟಿಸಿಗೆ(BMTC) ಪ್ರಾಯೋಗಿಕವಾಗಿ ಐದು ಬಸ್‌ಗಳು ಒದಗಿಸುವಂತೆ ಮನವಿ ಮಾಡಲಾಗಿದೆ. ಮೊದಲ ಹಂತವಾಗಿ ಪಡೆಯುವ ಡಬಲ್‌ ಡೆಕ್ಕರ್‌ ಬಸ್‌ಗಳ ಸೇವೆ ತೃಪ್ತಿಯಾದಲ್ಲಿ ಹೆಚ್ಚುವರಿ ಬಸ್‌ಗಳ ಪಡೆಯಲಾಗುವುದು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಿಕ್‌ ಚಾಲಿತ ಡಬ್ಬಲ್‌ ಡೆಕ್ಕರ್‌ ಬಸ್‌ಗಳು ರಾಜ್ಯಕ್ಕೆ(Karnataka) ಬರುವುದಕ್ಕೆ ಇನ್ನೂ ಆರು ತಿಂಗಳು ಕಳೆಯಲಿದೆ. ಈ ಬಸ್‌ಗಳು ಬೆಂಗಳೂರು ನಗರದಲ್ಲಿ ಎಲ್ಲ ರಸ್ತೆಗಳಲ್ಲಿಯೂ ಸ್ಕೈವಾಕ್‌ಗಳು, ಫ್ಲೈಓವರ್‌ಗಳಿದ್ದು, ಸಂಚಾರಕ್ಕೆ ಸೂಕ್ತವಲ್ಲ. ಆದ್ದರಿಂದ ಹೊರ ವರ್ತುಲ ರಸ್ತೆಗಳಲ್ಲಿ ಇವುಗಳ ಸೇವೆ ಒದಗಿಸಲು ಚಿಂತನೆಯಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೆಶಕ ಅನ್ಬುಕುಮಾರ್‌ ಮಾಹಿತಿ ನೀಡಿದರು.

ಖರೀದಿ ಮಾಡ್ತಿಲ್ಲ

ಪ್ರಸ್ತುತ ಬಿಎಂಟಿಸಿ ನಷ್ಟದಲ್ಲಿ ನಡೆಯುತ್ತಿದೆ. ಆದ್ದರಿಂದ ಯಾವುದೇ ಹೊಸ ಬಸ್‌ಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಬದಲಾಗಿ ಡಬ್ಬಲ್‌ ಡೆಕ್ಕರ್‌ ಬಸ್‌ಗಳನ್ನು ಕೇಂದ್ರವೇ ಒದಗಿಸುತ್ತಿದೆ. ಆದರೆ, ಬಳಕೆ ಮಾಡುವ ಬಸ್‌ಗಳಿಗೆ ಪ್ರತಿ ಕಿಲೋಮೀಟರ್‌ಗೆ ಇಂತಿಷ್ಟು ಹಣ ನಿಗದಿ ಮಾಡಿ ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದ್ದು, ಅಂತಿಮವಾಗಿಲ್ಲ ಎಂದು ಅನ್ಬುಕುಮಾರ್‌ ವಿವರಿಸಿದರು.

KSRTC ಸಿಬ್ಬಂದಿಗೆ ಸಂತಸದ ಸುದ್ದಿ ನೀಡಿದ ಸಾರಿಗೆ ಸಚಿವ ರಾಮುಲು

ಜಮಖಂಡಿ: ಸಾರಿಗೆ ಇಲಾಖೆಯ ವೇತನ ನೀಡಲು ಮೊದಲು ತೊಂದರೆ ಇತ್ತು. ಈಗ ಎಲ್ಲ ಸರಿಪಡಿಸಲಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮಲು(B Sriramulu) ಹೇಳಿದ್ದರು. 

BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

ಜ.02 ರಂದು ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಅಡಿಗಲ್ಲು ಸಮಾರಂಭ ಭೂಮಿ ಪೂಜೆ ಮಾಡಿ ಮಾತನಾಡಿದ್ದ ಅವರು, ಸಾರಿಗೆ ಇಲಾಖೆ(Transport Department) ನೌಕರ ವರ್ಗ ಮುಷ್ಕರದಲ್ಲಿ(Strike) ತೊಡಗಬೇಡಿ. ಇದರಿಂದ ನಿಮಗೆ ತೊಂದರೆ ಉಂಟಾಗುತ್ತದೆ. ಇನ್ನು 4 ವಾರಗಳಲ್ಲಿ ವರ್ಗಾವಣೆ(Transfer) ಸೇರಿದಂತೆ ವಿವಿಧ ಶಿಕ್ಷೆಗೆ ಒಳಪಟ್ಟವರನ್ನು ಮರಳಿ ತೆಗೆದುಕೊಳ್ಳಲಾಗುವುದು ಎಂದ ಅವರು, ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಹಳೆ ಬಸ್‌ಗಳನ್ನು ಮರಳಿ ಪಡೆದು ಒಳ್ಳೆಯ ಬಸ್‌ಗಳನ್ನು ಶೀಘ್ರದಲ್ಲೇ ಓಡಿಸಲಾಗುತ್ತದೆ ಎಂದು ಹೇಳಿದ್ದರು.

ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ(Siddu Savadi) ಮಾತನಾಡಿ, ವಾಹನವನ್ನು ಖರೀದಿಸಿದವರಿಗೆ ಕಡ್ಡಾಯವಾಗಿ ವಾಹನ ಪರವಾನಗಿ ಮಾಡಿಕೊಡಬೇಕು. ಹೆಚ್ಚು ಲೋಡ್‌ ತೆಗೆದುಕೊಂಡು ಸಂಚರಿಸುವವರಿಗೆ ಹೊಸ ಕಾನೂನು ಜಾರಿಗೆ ತರಬೇಕು. ಅದನ್ನು ಬಿಟ್ಟು ವಾಹನ ಸವಾರರಿಗೆ ಅಧಿಕಾರಿಗಳು ಕಿರುಕುಳ ಮಾಡಬಾರದು. ಈ ಭಾಗದಿಂದ ಬೆಂಗಳೂರಿಗೆ(Bengaluru) ಹೋಗಲು ಎರಡು ಹೊಸ ಬಸ್‌ ಪ್ರಾರಂಭಿಸಬೇಕು. ರಬಕವಿ-ಬನಹಟ್ಟಿಯ ಬಸ್‌ ನಿಲ್ದಾಣ ಬೀಳುವ ಹಂತದಲ್ಲಿವೆ. ಕೂಡಲೇ ಹೊಸ ಬಸ್‌ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ತಿಳಿಸಿದ್ದರು. 
 

click me!