ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ 2027ಕ್ಕೆ ಪೂರ್ಣ: ಕೇಂದ್ರ ಸಚಿವ ಸೋಮಣ್ಣ

By Kannadaprabha News  |  First Published Dec 27, 2024, 8:49 AM IST

ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ. ರಾಜಕೀಯ ಬಿಡಿ, ಕೋಪ, ದ್ವೇಶ, ಅಸೂಯೆ ಯಾರಿಗೂ ಒಳ್ಳೆಯದಲ್ಲ. ನಾವು ಚುನಾವಣೆ ವೇಳೆ ರಾಜಕೀಯ ಮಾಡೋಣ. ನಂತರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅಧಿಕಾರಿ ಮತ್ತು ಪಿಡಿಒಗಳಿಗೂ ಕೈ ಮುಗಿದು ಮನವಿ ಮಾಡಿದ ಸಚಿವ ಸೋಮಣ್ಣ 


ಮಧುಗಿರಿ(ಡಿ.27):  ತುಮಕೂರು -ರಾಯದುರ್ಗ ರೈಲ್ವೆ ಕಾಮಗಾರಿಯನ್ನು 2027ರ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸುವ ಜೊತೆಗೆ ಕ್ಷೇತ್ರದ ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ತಾಲೂಕಿನ ದೊಡ್ಡೇರಿ ಮತ್ತು ಮಿಡಿಗೇಶಿ ಹೋಬಳಿಗಳಲ್ಲಿ ಗುರುವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ಉಚಿತ ಸಲಕರಣಾ ವಿತರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

undefined

ಉತ್ತರ ಭಾರತದಲ್ಲಿ ಇರುವಂತೆ ಕರ್ನಾಟಕದಲ್ಲೂ ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆ: ಸೋಮಣ್ಣ

ಜಿಲ್ಲೆಯಲ್ಲಿ ಬಾಕಿ ಇರುವ ಹತ್ತಾರು ಕಾಮಗಾರಿಗಳನ್ನು ನನ್ನ ಅವಧಿಯೊಳಗೆ ಮಾಡಿ ಮುಗಿಸುವ ಜೊತೆಗೆ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ. ವಿಶೇಷ ಚೇತನರನ್ನು ಬದಲಾಯಿಸಿ ಅವರನ್ನು ದಿವ್ಯಾಂಗರನ್ನಾಗಿ ಮಾಡುವ ಕಾರ್ಯಕ್ರಮ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ದಿವ್ಯಾಂಗರು ಎಂಬ ಸಂದೇಶವನ್ನು ದೇಶಕ್ಕೆ ನೀಡಿದ್ದು, ಅವರು ಯಾವುದೇ ನೋವು ಅನುಭವಿಸುವ ಅಗತ್ಯವಿಲ್ಲ, ಅವರಿಗೆ ಅನುಕಂಪದ ಬದಲು ಅವಕಾಶ ನೀಡಿ, ವಿಕಲಾಂಗರಿಗೆ 2016ರಿಂದ ಸರ್ಕಾರಿ ಉದ್ಯೋಗದಲ್ಲಿ ಶೇ.6 ಮೀಸಲಾತಿ ಕಲ್ಪಿಸಿದೆ.563 .85 ಕೋಟಿ ರು.ನಿಗದಿಪಡಿಸಿ 1341 ಕಟ್ಟಡಗಳನ್ನು ಕಟ್ಟಿದ್ದು, ದೇಶದಾದ್ಯಂತ 8 ಲಕ್ಷ ಶಾಲೆಗಳಲ್ಲಿ ದಿವ್ಯಾಂಗರಿಗೆ ಅನುಕೂಲ ಮಾಡಿ ಕೊಡಲಾಗಿದೆ. ಶೈಕ್ಷಣಿಕ ಸಬಲೀಕರಣದಲ್ಲಿ 879 ಕೋಟಿ ಮೀಸಲು, ಕೌಶಲ್ಯಾಭಿವೃದ್ಧಿ ಯೋಜನೆಯಡಿ 1.40 ಲಕ್ಷ ವಿಕಾಲಂಗರಿಗೆ ತರಬೇತಿ ನೀಡಲಾಗಿದೆ ಎಂದರು.

ಅಧಿಕಾರಿಗಳಿಗೆ ರಾಜಕೀಯ ಸಲ್ಲದು: 

ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ. ರಾಜಕೀಯ ಬಿಡಿ, ಕೋಪ, ದ್ವೇಶ, ಅಸೂಯೆ ಯಾರಿಗೂ ಒಳ್ಳೆಯದಲ್ಲ. ನಾವು ಚುನಾವಣೆ ವೇಳೆ ರಾಜಕೀಯ ಮಾಡೋಣ. ನಂತರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅಧಿಕಾರಿ ಮತ್ತು ಪಿಡಿಒಗಳಿಗೂ ಸಚಿವ ಸೋಮಣ್ಣ ಕೈ ಮುಗಿದು ಮನವಿ ಮಾಡಿದರು.

Tumkur: ಗ್ಯಾರಂಟಿ ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ; ಸಿದ್ಧಗಂಗಾ ಮಠಕ್ಕೆ

ಮಿಡಿಗೇಶಿ ಗ್ರಾಮದಲ್ಲಿ ರೈಲ್ವೆ ಉಪ ನಿಲ್ದಾಣ ನಿರ್ಮಿಸಿ ಎಂದು ಗ್ರಾಮಸ್ಥರು ಸಚಿವ ಸೋಮಣ್ಣನವರಲ್ಲಿ ಮನವಿ ಮಾಡಿದಾಗ ಸ್ಥಳದಲ್ಲೇ ಇದ್ದ ರೈಲ್ವೆ ಅಧಿಕಾರಿಗಳಿಗೆ ಯಾವುದೇ ಕುಂಟು ನೆಪ ಹೇಳದೇ ಇದರ ಬಗ್ಗೆ ಗಮನ ಹರಿಸಿ ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ , ಎಸಿ ಗೋಟೂರು ಶಿವಪ್ಪ, ತಾಪಂ ಇಒ ಲಕ್ಷ್ಮಣ್‌, ತಹಸೀಲ್ದಾರ್‌ ಶಿರಿನ್‌ತಾಜ್‌, ತಾಪಂ ಯೋಜನಾಧಿಕಾರಿ ಮಧುಸೂದನ್‌, ಡಿಡಿಪಿಐ ಗಿರಿಜಾ, ಬಿಇಓ ಕೆ.ಎನ್‌.ಹನುಮಂತರಾಯಪ್ಪ, ವಲಯ ಅರಣ್ಯಾಧಿಕಾರಿ ಸುರೇಶ್‌,ಸಿಡಿಪಿಒ ಕಮಲ ,ಕೃಷಿ ಅಧಿಕಾರಿ ಹನುಮಂತರಾಯಪ್ಪ, ಕೆಆರ್‌ಡಿಎಲ್‌ ಸಿಂಧು,ಸಿದ್ದನಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆಂಜನಪ್ಪ, ತುಮುಲ್‌ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌, ತಾ.ಜೆಡಿಎಸ್‌ ಅಧ್ಯಕ್ಷ ಬಡವನಹಳ್ಳಿ ಬಸವರಾಜು,ಬಿಜೆಪಿ ಮುಖಂಡ ಎಲ್‌.ಸಿ .ನಾಗರಾಜು, ತಾ.ಬಿಜೆಪಿ ಅಧ್ಯಕ್ಷ ನಾಗೇಂದ್ರ ,ಬಡವನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾನುಪ್ರಿಯಾ ,ಉಪಾಧ್ಯಕ್ಷೆ ಜಯಮ್ಮ,ರಂಗಾಪುರ ಗ್ರಾಪಂ ಅಧ್ಯಕ್ಷ ನಾಗೇಶ್‌,ಮಿಡಿಗೇಶಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ,ಜಿಡೆಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

click me!