ವರಸೆಯಲ್ಲಿ ಸಹೋದರ ಆಗಬೇಕಿದ್ದವನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂಬ ಶಂಕೆಯಿಂದ ಸ್ವಂತ ಸಂಬಂಧಿಕರೆ ವ್ಯಕ್ತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ, ಜೀವಂತವಾಗಿ ಸುಡಲು ಯತ್ನಿಸಿದ್ದಾರೆ. ಪೆಟ್ಟು ತಿಂದು ತೀವ್ರವಾಗಿ ಬಳಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಕೆಲವು ಗಂಟೆಗಳಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಹಾವೇರಿ (ಡಿ.26): ವರಸೆಯಲ್ಲಿ ಸಹೋದರ ಆಗಬೇಕಿದ್ದವನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂಬ ಶಂಕೆಯಿಂದ ಸ್ವಂತ ಸಂಬಂಧಿಕರೆ ವ್ಯಕ್ತೊಯನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿ, ಜೀವಂತವಾಗಿ ಸುಡಲು ಯತ್ನಿಸಿದ್ದಾರೆ. ಪೆಟ್ಟು ತಿಂದು ತೀವ್ರವಾಗಿ ಬಳಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಕೆಲವು ಗಂಟೆಗಳಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಈ ಘಟನೆ ಹಾವೇರಿ ಜಿಲ್ಲೆ ಹಾನಹಲ್ಲ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಅನೈತಿಕ ಸಂಬಂಧ ಶಂಕೆ, ವ್ಯಕ್ತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿಹಾಕಿ ವಿಕೃತವಾಗಿ ಥಳಿಸಲಾಗಿದೆ. ಮೃತ ವ್ಯಕ್ತಿಯನ್ನು ಪ್ರಕಾಶ್ ಓಲೇಕಾರ ಎಂದು ಗುರುತಿಸಲಾಗಿದೆ. ಈತನ ದೂರದ ಸಂಬಂಧಿಕರಾದ ಬಸಪ್ಪ ಓಲೇಕಾರ, ಗದಿಗೆಪ್ಪ ಓಲೆಕಾರ್, ಪ್ರಕಾಶ್ ಓಲೆಕಾರ್ ಹಾಗೂ ಕೆಲ ಸಂಬಂಧಿಕರು ಸೇರಿ ಗುಂಪು ಕಟ್ಟಿಕೊಂಡು ಪ್ರಕಾಶನನ್ನು ಬಿಗಿಯಾಗಿ ಹಿಡಿದುಕೊಂಡು ಥಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.
undefined
ಮೃತ ಪ್ರಕಾಶ್ ವರಸೆಯಲ್ಲಿ ಸಹೋದರ ಆಗಬೇಕಿದ್ದವನ ಹೆಂಡತಿ ಪುಟ್ಟವ್ವ ಎಂಬ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಶಂಕಿಸಿ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಪ್ರಕಾಶ್ ಗಂಭೀರವಾಗಿ ಗಾಯ ಗೊಂಡಿದ್ದನು. ಇನ್ನು ಜಗಳ ಬಿಡಿಸಲು ಬಂದ ಪ್ರಕಾಶನ ಸಹೋದರರ ಮೇಲೆಯೂ ಹಲ್ಲೆ ಮಾಡಿ ಅವರನ್ನು ಅಲ್ಲಿಂದ ಕಳುಹಿಸಿ ಮನೆಯಲ್ಲಿ ಕೂಡಿ ಹಾಕಿದ್ದಾರೆ. ನಂತರ, ಪ್ರಕಾಶನನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಸ್ಥಳದಲ್ಲಿಯೇ ಜೀವಂತವಾಗಿ ಸುಡುವುದಕ್ಕೆ ಪ್ರಯತ್ನವನ್ನೂ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದೆ: ಬೊಮ್ಮಾಯಿ
ಒಟ್ಟಾರೆ ಪ್ರಕಾಶನಿಗೆ ಅನೈತಿಕ ಸಂಬಂಧದ ಆರೋಪದ ಮೇಲೆ ಮಾರಣಾಂತಿಕವಾಗಿ ಥಳಿಸಿ ಚಿತ್ರಹಿಂಸೆ ಮಾಡಿದ್ದಾರೆ. ಬದುಕಿದ್ದಾಗಲೇ ಭೂಮಿಯ ಮೇಲೆ ನರಕವನ್ನು ತೋರಿಸಿದ್ದಾರೆ. ಪ್ರಕಾಶ್ ನೋವು ತಡೆದುಕೊಳ್ಳಲಾರದೇ ಪ್ರಜ್ಞೆ ತಪ್ಪಿ ವಿದ್ಯುತ್ ಕಂಬದಲ್ಲಿಯೇ ನಿಂತಿ ಸ್ಥಿತಿಯಲ್ಲಿ ಮೂರ್ಚೆ ಹೋಗಿದ್ದಾರೆ, ಸ್ಥಳೀಯರು ಆತನನ್ನು ಬಿಚ್ಚಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಗುರುವಾರ ಮಧ್ಯಾಹ್ನದ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕಾಶ್‌ಗೆ ರಕ್ತಸಿಕ್ತ ಗಾಯಗಳಿಗಿಂತ ಹೆಚ್ಚಾಗಿ ದೇಹದ ಒಳಭಾಗದ ಸೂಕ್ಷ್ಮ ಅಂಗಾಂಗಗಳಿಗೆ ಹಲ್ಲೆ ಮಾಡಿದ್ದಾರೆ. ಜೊತೆಗೆ, ಜೀವಂತವಾಗಿ ಸುಡಲು ಯತ್ನಿಸಿದ್ದು, ದೊಡ್ಡ ಪ್ರಕರಣ ಆಗಬಹುದೆಂದು ಹೆದರಿ ಬೆಂಕಿ ಆರಿಸಿ ಓಡಿ ಹೋಗಿದ್ದಾರೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಇದನ್ನೂ ಓದಿ: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆ!