2024ರಲ್ಲಿ ಬೆಂಗಳೂರಿನ ಸಂಚಾರ ಪೂರ್ವ ವಿಭಾಗದಲ್ಲಿ 5,500ಕ್ಕೂ ಹೆಚ್ಚು ಮಂದಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕಾಗಿ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು (ಡಿ.26): ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ಪೂರ್ವ ವಿಭಾಗದಲ್ಲಿ ದಿನಾಂಕ 01.01.2024 ರಿಂದ 26.12.2024 ರವರೆಗೆ (ಜ.1 ರಿಂದ ಡಿ.26) ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ಬೈಕ್ ಸವಾರಿ ಮಾಡಿದ 5,500 ಜನರ ಚಾಲನಾ ಪರವಾನಗಿ (ಡಿಎಲ್) ಅಮಾನತು ಮಾಡುವುದಕ್ಕೆ ಸಾರಿಗೆ ಇಲಾಖೆಗೆ ಕಳುಹಿಸಿಕೊಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು, 'ದಿನಾಂಕ: 01.01.2024 ರಿಂದ 26.12.2024 ರವರೆಗೆ ಸಂಚಾರ ಪೂರ್ವ ವಿಭಾಗದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರು ಮತ್ತು ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 3,60,214 ಜನರನ್ನು ತಪಾಸಣೆಗೊಳಪಡಿಸಿದ್ದು, 5,500 ಮಂದಿ ಮದ್ಯಪಾನ ಮಾಡಿರುವುದು ಧೃಡಪಟ್ಟಿದ್ದು, ಸದರಿರವರ DL ಗಳನ್ನು RTO ಕಛೇರಿಗೆ ಅಮಾನತು ಪಡಿಸಲು ಕಳುಹಿಸಿ ಕೊಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ದಿನಾಂಕ: 01.01.2024 ರಿಂದ 26.12.2024 ರವರೆಗೆ ಸಂಚಾರ ಪೂರ್ವ ವಿಭಾಗದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರು ಮತ್ತು ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 3,60,214 ಜನರನ್ನು ತಪಾಸಣೆಗೊಳಪಡಿಸಿದ್ದು, 5,500 ಮಂದಿ ಮದ್ಯಪಾನ ಮಾಡಿರುವುದು ಧೃಡಪಟ್ಟಿದ್ದು, ಸದರಿರವರ DL ಗಳನ್ನು RTO ಕಛೇರಿಗೆ ಅಮಾನತು ಪಡಿಸಲು ಕಳುಹಿಸಿ… pic.twitter.com/Jvn75t3xQ3
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP)undefined
ಜೊತೆಗೆ, ಇದೇ ಅವಧಿಯಲ್ಲಿ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ವೀಲಿಂಗ್ ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 29 ದ್ವಿಚಕ್ರ ವಾಹನ ಸವಾರರು ಮತ್ತು 29 ದ್ವಿಚಕ್ರ ವಾಹನಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 29 ಪ್ರತ್ಯೇಕ ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಇ-ಖಾತಾ ಪಡೆಯುವಂತೆ ಬಿಬಿಎಂಪಿ ಸೂಚನೆ!
ಹೊಸ ವರ್ಷಾಚರಣೆಗೂ ಮುನ್ನ ತಪಾಸಣೆ: ಬೆಂಗಳೂರಿನಲ್ಲಿ ಈ ಬಾರಿ ಹೊಸ ವರ್ಷಾಚರಣೆ ಮಾಡುವುದಕ್ಕೆ ಯಾವುದೇ ನಿರ್ಬಂಧವನ್ನು ಸರ್ಕಾರ ವಿಧಿಸಿಲ್ಲ. ಆದರೆ, ಸರ್ಕಾರದ ಹಾಗೂ ಸಂಚಾರ ನಿಯಮಗಳನ್ನು ಮೀರುವುದಕ್ಕೆ ಎಲ್ಲಿಯೂ ಅವಕಾಶ ನೀಡಿಲ್ಲ. ಹೀಗಾಗಿ, ಹೊಸ ವರ್ಷದ ಆರಂಭಕ್ಕೂ ಮುನ್ನವೇ ಪೊಲೀಸ್ ಇಲಾಖೆಯಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು ಹಾಗೂ ಬೈಕ್ ಸವಾರರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ವಾರಾಂತ್ಯ ದಿನಗಳು ಸೇರಿದಂತೆ ಹೊಸ ವರ್ಷದ ಮೂರ್ನಾಲ್ಕು ದಿನಗಳು ಇರುವಾಗಲೇ ನಗರದಾದ್ಯಂತ ಮದ್ಯಪಾನ ತಪಾಸಣೆಗೆ ಮುಂದಾಗಲಿದ್ದಾರೆ.
ಇದನ್ನೂ ಓದಿ: ಸೈಬರ್ ಸ್ಕ್ಯಾಮ್ ಮಾಡಿ ಅರೆಸ್ಟ್ ಆದ 'ನಾನು ನಂದಿನಿ' ಹಾಡಿನ ಖ್ಯಾತಿಯ ವಿಕ್ಕಿ, ಅಮಿತ್ ಚಿಟ್ಟೆ!